ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಕರ್ಮಭೂಮಿ ಯಾದಗಿರಿ, ಶತಾಯಗತಾಯ ಕಾಂಗ್ರೆಸ್ ಗೆಲ್ಲಲು ಖರ್ಗೆ ಯತ್ನ

ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಶತಾಯಗತಾಯ ಗೆಲ್ಲಲು ಬಾರಿ ಲೆಕ್ಕಾಚಾರ ಹಾಕ್ತಿದೆ. ಅಳೆದು ತೂಗಿ ಗೆಲ್ಲುವ ಕುದರೆಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದಂತೆ ಕಾಣ್ತಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಅವರ ಆಪ್ತರಿಗೆ ಟಿಕೆಟ್ ಸಿಗುವ ಭಾರಿ ನಿರೀಕ್ಷೆ ಹುಟ್ಟಿದೆ.

Mallikarjun Kharge planning to win congress Karnataka assembly election 2023 gow

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಡಿ.12): 2023 ರ ವಿಧಾನಸಭೆ ಇನ್ನು 3 ತಿಂಗಳು ಬಾಕಿಯಿದೆ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ಈಗಿನಿಂದಲೇ ತಮ್ಮದೆಯಾದ ತಂತ್ರಗಾರಿಕೆಯನ್ನು ಮಾಡ್ತಿದೆ.‌ ಈಗಾಗಲೇ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ ಸಾಕಷ್ಟು ಎಚ್ಚರಿಕೆ ನೀಡಿದೆ. ಗುಜರಾತ್ ಕಾಂಗ್ರೆಸ್ ಗೆ ಶಾಕ್ ಕೊಟ್ರೆ, ಹಿಮಾಚಲ ಪ್ರದೇಶ ಬೂಸ್ಟ್ ನೀಡಿದೆ. ಅದರಿಂದಾಗಿ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಶತಾಯಗತಾಯ ಗೆಲ್ಲಲು ಬಾರಿ ಲೆಕ್ಕಾಚಾರ ಹಾಕ್ತಿದೆ. ಅಳೆದು ತೂಗಿ ಗೆಲ್ಲುವ ಕುದರೆಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದಂತೆ ಕಾಣ್ತಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಅವರ ಆಪ್ತರಿಗೆ ಟಿಕೆಟ್ ಸಿಗುವ ಭಾರಿ ನಿರೀಕ್ಷೆ ಹುಟ್ಟಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೆ ಯಾದಗಿರಿ ಜಿಲ್ಲೆಯಲ್ಲಿ ಅಧಿಕ ಸ್ಥಾನ ಗೆಲ್ಲುವ ಚಾಲೆಂಜ್!
ಯಾದಗಿರಿ ಜಿಲ್ಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಭವಿಷ್ಯ ಉತ್ತುಂಗಕ್ಕೇರಿರುವುದು ಯಾದಗಿರಿ ಜಿಲ್ಲೆಯಲ್ಲಿ. ಯಾದಗಿರಿ ಜಿಲ್ಲೆಯ ಗುರಮಠಕಲ್ ವಿಧಾನಸಭಾ ಕ್ಷೇತ್ರದಿಂದ ಸತತ 8 ಬಾರಿ ಆಯ್ಕೆಯಾದವರು ಮಲ್ಲಿಕಾರ್ಜುನ ಖರ್ಗೆ. ಹಾಗಾಗಿ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆ ಎರಡು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಾಲಿನ ಜಿಲ್ಲೆಗಳಾಗಿವೆ. ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರಮಠಕಲ್ ಕ್ಷೇತ್ರಗಳಿವೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಹಾಪುರ ಕ್ಷೇತ್ರದಲ್ಲಿ ಮಾತ್ರ ಗೆಲ್ಲುವ ಪಡೆದಿತ್ತು.

ಸುರಪುರ ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಕಮಲ ಅರಳಿತ್ತು. ಒಂದರಲ್ಲಿ ದಳ ಗೆಲುವು ಪಡೆದಿತ್ತು. ಆದ್ರೆ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲೂ ಈ ಬಾರಿ ಗೆಲ್ಲಬೇಕು. ಗೆದ್ದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಿಪ್ಟ್ ನೀಡಲು 'ಕೈ' ಫ್ಲಾನ್ ಹಾಕಿದೆ. ಆದ್ರೆ ಅದು ಅಷ್ಟು ಸುಲಭದ ಮಾತಿಲ್ಲ. ಯಾಕಂದ್ರೆ ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ನಾಯಕತ್ವದ ಕೊರತೆ ಎದ್ದು ಕಾಣ್ತಿದೆ. ಚುನಾವಣೆ ಇನ್ನು  ಮೂರೇ ತಿಂಗಳಿದ್ರೂ ಜಿಲ್ಲೆಯ 'ಕೈ' ನಾಯಕರು ಮಾತ್ರ ಯಾವುದೇ ರೀತಿಯ ಒಗ್ಗಟ್ಟು ಪ್ರದರ್ಶನ ಮಾಡ್ತಿಲ್ಲ. ಒಬ್ಬರಿಗೊಬ್ಬರು ಡಿಸ್ಟೆನ್ಸ್ ಮೆಂಟೆನ್ ಮಾಡ್ತಿದ್ದಾರೆ. ಜೊತೆಗೆ ಬಣ ಬಡಿದಾಟ ಕೂಡ ಜೋರಾಗಿಯೇ ಕಂಡು ಬರುತ್ತಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೊದ್ರೆ ಮಾತ್ರ ಬಿಜೆಪಿಗೆ ಸರಿಯಾದ ಟಕ್ಕರ್ ಕೊಡಲು ಸಾಧ್ಯ.

ಮಲ್ಲಿಕಾರ್ಜುನ ಖರ್ಗೆ ಆಪ್ತರಿಗೆ ಲಭಿಸುತ್ತಾ 'ಕೈ' ಟಿಕೆಟ್?
ಮಲ್ಲಿಕಾರ್ಜುನ ಖರ್ಗೆ ಅವರು ಯಾದಗಿರಿ ಜಿಲ್ಲೆಯಲ್ಲಿ ತಮ್ಮದೆಯಾದ ಆಪ್ತ ಬಳಗವನ್ನು ಹೊಂದಿದ್ದಾರೆ. ಜೊತೆಗೆ ಈ ಬಾರಿ ಅವರು ಎಐಸಿಸಿ ಅಧ್ಯಕ್ಷ ಆಗಿರುವುದರಿಂದ ಅವರ ಆಪ್ತರಲ್ಲಿ ಉತ್ಸಾಹ ಹೆಚ್ಚು ಮಾಡಿದೆ. ಈ ಬಾರಿ 'ಕೈ' ಟಿಕೆಟ್ ಪಡೆಯಲು ಬಾರಿ ಲಾಭಿ ಮಾಡ್ತಾ ಇದಾರೆ. ಆದ್ರೆ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಮೂಲಗಳ ಪ್ರಕಾರ ಗೆಲ್ಲುವ ಕುದರೆಗೆ ಮಣೆ ಹಾಕುವ ಸಾಧ್ಯತೆಯಿದೆ. ಆದ್ರೆ ಅವರ ಆಪ್ತರಲ್ಲಿ ಮಾತ್ರ ಈ ಬಾರಿ ನಮಗೊಂದು ಚಾನ್ಸ್ ಸಿಗುತ್ತೆ ಅನ್ನುವ ನಿರೀಕ್ಷೆ ಇರುವುದಂತು ಸತ್ಯ. ಯಾದಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಗಾಗಿ ಬರೊಬ್ಬರಿ 17 ಜನ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರು. ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಪುತ್ರಿ ಅನುರಾಗ ಮಾಲಕರೆಡ್ಡಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವುದು ಕಾಂಗ್ರೆಸ್ ಆಕಾಂಕ್ಷಿಗಳ ಟೆನ್ಷನ್ ಹೆಚ್ಚು ಮಾಡಿದೆ. ಜೊತೆಗೆ ವಿವಿಧ ಕೊಟಾದಡಿ ಇನ್ನು ಹಲವು ಜ‌ನ ಅರ್ಜಿ ಸಲ್ಲಿಸಿದ್ದಾರೆ.

Mysuru: ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಗೆ ಸಿದ್ಧತೆ

ಡಾ.ಭೀಮಣ್ಣ ಮೇಟಿ, ನಿಖಿಲ್. ವಿ.ಶಂಕರ್, ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ, ವಿನೋದ ಪಾಟೀಲ್ ಅವರು ಹಿಂದುಳಿದ ವರ್ಗದ ಕೋಟಾದಢೀ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಎ.ಸಿ‌ಕಾಡ್ಲೂರ್, ಜಹಿರುದ್ದಿನ್ ಅವರು ಅಲ್ಪಸಂಖ್ಯಾತ ಕೋಟಾದಢೀ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಶರಣಬಸಪ್ಪ ಕಾಮರೆಡ್ಡಿ, ಬಸ್ಸುಗೌಡ ಬಿಳ್ಹಾರ, ಶ್ರೀನಿವಾಸರೆಡ್ಡಿ ಕಂದಕೂರು,  ಹೊಸ ಮುಖಗಳಿಗೆ ಅವಕಾಶ ನೀಡುವ ಭರವಸೆಯಲ್ಲಿದ್ದಾರೆ. ಜೊತೆಗೆ ಗುರಮಠಕಲ್ ಮತಕ್ಷೇತ್ರದಲ್ಲಿ ಕೂಡ ಖರ್ಗೆ ಆಪ್ತರಾದ ಶರಣಪ್ಪ ಮಾನೇಗಾರ್, ಬಸರಡ್ಡಿ ಅನಪುರ ಟಿಕೆಟ್ ಗಾಗಿ ಭಾರಿ ಕಸರತ್ತು ಮುಂದುವರೆಸಿದ್ದಾರೆ. ಸುರಪುರದಲ್ಲಿ ಖರ್ಗೆ ಆಪ್ತ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕನಿಗೆ ಬಹುತೇಕ ಟಿಕೆಟ್ ಫಿಕ್ಸ್ ಆಗಿದೆ. ಶಹಾಪುರದಲ್ಲಿಯೂ ಕೂಡ ಹಾಲಿ ಶರಣಬಸಪ್ಪಗೌಡ ದರ್ಶನಾಪುರ ಗೆ ಟಿಕೆಟ್ ಖಚಿತವಾಗಿದೆ.

ಕಾಂಗ್ರೆಸ್‌ ಅಂಬೇಡ್ಕರ್‌ ವಿರೋಧಿ: ಸಚಿವ ಪ್ರಭು ಚವ್ಹಾಣ್‌

ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗುತ್ತಾ ಅಹಿಂದ?
ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಾಗಿ ಅಹಿಂದ ಮತಗಳಿಗೆ. ಕೊಲಿ, ಕುರುಬ, ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಮತಗಳಿವೆ. ಈ ಮತಗಳು ಕಾಂಗ್ರೆಸ್ ವೋಟ್ ಬ್ಯಾಂಕ್ ಕೂಡ ಆಗಿರುವುದರಿಂದ ಯಾದಗಿರಿ ಹಾಗೂ ಗುರಮಠಕಲ್ ಇವೆರಡು ಕ್ಷೇತ್ರದಲ್ಲಿ ಅಹಿಂದ ಗಳಿಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ರೆ ಬಂಡಾಯ ಏಳುವ ಸಾಧ್ಯತೆ ಹೆಚ್ಚಿದೆ. ಅಹಿಂದ ಮುಖಂಡರು ಒಂದು ಸುತ್ತಿನ ಮಾತುಕತರ ನಡೆಸಿದ್ದು. ಈ ಬಾರಿ ಅಹಿಂದ ವರ್ಗದವರೇ ಯಾದಗಿರಿ, ಗುರಮಠಕಲ್ ನಲ್ಲಿ ಶಾಸಕರಾಗಬೇಕು ಎಂಬುದು ಮೀಟಿಂಗ್ ನಲ್ಲಿ ಚರ್ಚೆ ಆಗಿದೆ. ಒಂದು ಅಹಿಂದಕ್ಕೆ ಮನ್ನಣೆ ಸಿಗದಿದ್ರೆ ಬಂಡಾಯ ಬಾವುಟ ಹಾರಿಸುವುದು ಮಾತ್ರ ಫಿಕ್ಸ್ ಆಗಿದೆ‌. ಇದು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ.

Latest Videos
Follow Us:
Download App:
  • android
  • ios