Bengaluru:ಎಐಎಡಿಎಂಕೆ ಅಭ್ಯರ್ಥಿಯೆಂದು ಚುನಾವಣಾ ಆಯೋಗಕ್ಕೆ ವಂಚಿಸಲು ಯತ್ನ, ಎಫ್‌ಐಆರ್ ದಾಖಲು!

ಬೆಂಗಳೂರು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ ಫಾರಂ ಸಲ್ಲಿಸಿದ್ದ ಎಐಎಡಿಎಂಕೆ ಅಭ್ಯರ್ಥಿ ಕುಮಾರ್ ಕಣ್ಣನ್ ಎಂಬುವರ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ.

FIR against  candidate who tried to cheat the Election Commission as AIADMK candidate in bengaluru gow

ಬೆಂಗಳೂರು (ಏ.27): ಎಐಎಡಿಎಂಕೆ ಅಭ್ಯರ್ಥಿಯಿಂದ ನಕಲಿ ಎ ಫಾರಂ ಹಾಗೂ ಬಿ ಫಾರಂ ಸಲ್ಲಿಕೆ ಮಾಡಿದಾತನ ವಿರುದ್ಧ ಬೆಂಗಳೂರಿನಲ್ಲಿ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ ಫಾರಂ ಸಲ್ಲಿಸಿದ್ದ ಕುಮಾರ್ ಕಣ್ಣನ್ ಎಂಬುವರ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿಯೆಂದು ಕುಮಾರ್ ಕಣ್ಣನ್ ನಾಮಪತ್ರ ಸಲ್ಲಿಕೆ ಮಾಡಿದ್ದರು.  ನಾಮಪತ್ರ ಸಲ್ಲಿಸಿದ್ದ ಎ ಫಾರಂ ಹಾಗೂ ಫಾರಂ ನಲ್ಲಿ ಓ ಪನ್ನೀರ್ ಸೆಲ್ವಂ ಸಹಿ ಇತ್ತು. ಆದರೆ ಸದ್ಯ ಎಐಎಡಿಎಂಕೆ ಪದಾಧಿಕಾರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಇದ್ದಾರೆ. ಹೀಗಾಗಿ ಚುನಾವಣಾ ಆಯೋಗ ಕುಮಾರ್ ಕಣ್ಣನ್ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಿದೆ. ಚುನಾವಣಾ ಆಯೋಗವನ್ನ ವಂಚಿಸಲು ಯತ್ನಿಸಿದ ಆರೋಪದಲ್ಲಿ ಕುಮಾರ್ ಕಣ್ಣನ್ ವಿರುದ್ದ ದೂರು ದಾಖಲು ಮಾಡಲಾಗಿದೆ. ರಿಟರ್ನಿಂಗ್ ಅಫೀಸರ್ ಅವರು ಕಾಟನ್ ಪೇಟೆ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಕಾಟನ್ ಪೇಟೆ ಠಾಣಾ ಪೋಲೀಸರು ಕುಮಾರ್ ಕಣ್ಣನ್ ಮೇಲೆ ಎಫ್ ಐ ಆರ್ ದಾಖಲು ಮಾಡಿದ್ದಾರೆ.

ದಂಗೆ ಹೆಸರಲ್ಲಿ ಪ್ರಚೋದನೆ ನಿಲ್ಲಿಸಿ ಶಾಗೆ ಮಲ್ಲಿಕಾರ್ಜನ ಖರ್ಗೆ ತಾಕೀತು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದಂಗೆ ಆಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಯಾವಾಗ ಗಲಾಟೆ ಆಗಿದೆ ತೋರಿಸಿ. ಶಾ ಅವರು ತಕ್ಷಣ ಈ ರೀತಿಯ ಪ್ರಚೋದನಾಕಾರಿ ಹೇಳಿಕೆಯನ್ನು ನಿಲ್ಲಿಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಕೀತು ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಜನ ಅಷ್ಟುಕೆಟ್ಟವರಿದ್ದಾರಾ? ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಇಲ್ಲಿ ಬರೀ ಗದ್ದಲಗಳಾಗುತ್ತಿದ್ದವೇ? ಶಾಂತಿ, ಸಹನೆಯುಳ್ಳ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೆ ಬಿಜೆಪಿ ಗಲಾಟೆ, ದಂಗೆ ಎಬ್ಬಿಸುವ ಹುನ್ನಾರ ನಡೆಸುವಂತಿದೆ. ಶಾ ಹೇಳಿಕೆಗಳ ಬಗ್ಗೆ ಕಾನೂನು ಅಂಶಗಳನ್ನು ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವ ಕುರಿತು ಇಂಗಿತ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳಲಿದೆ ಎಂದು ಅಮಿತ್‌ ಶಾ ಟೀಕೆಗೂ ತಿರುಗೇಟು ನೀಡಿದ ಅವರು, ಇದುವರೆಗೂ ಬಿಜೆಪಿ ಕೂಡ ಹಾಗೆ ಮಾಡಿಕೊಂಡು ಬಂದಿದೆಯೇ? ನೀವು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಖಜಾನೆ ಕೀಲಿ ನಿಮ್ಮ ಬಳಿಯೇ ಇದೆ. ಪೆಗಾಸಸ್‌ ಅನ್ನು ಎಲ್ಲರ ಮನೆ ಮೇಲೆ ಇಟ್ಟಿದ್ದೀರಿ. ಎಟಿಎಂ ಕೂಡ ಅವರಲ್ಲಿಯೇ ಇದೆ ಎಂದು ಹೇಳಿದರು.

ಮೋದಿ ವಿಷದ ಹಾವು, ನೆಕ್ಕಿದರೆ ಕಥೆ ಮುಗೀತು: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ವ್ಯಾಪಕ ಆಕ್ರೋಶ

ಶೆಟ್ಟರನ್ನು ಗೆಲ್ಲಿಸ್ತೇವೆ: ಖರ್ಗೆ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್‌ಗೆ ಬಂದಿರುವ ಲಿಂಗಾಯತ ಮುಖಂಡ ಜಗದೀಶ್‌ ಶೆಟ್ಟರ್‌ ಅವರನ್ನು ಸೋಲಿಸಲು ಬಿಜೆಪಿ ಟಾರ್ಗೆಟ್‌ ಮಾಡಿದೆ. ಆದರೆ ಅದು ಫಲಿಸುವುದಿಲ್ಲ. ಕಾಂಗ್ರೆಸ್‌ ಅವರನ್ನು ಗೆಲ್ಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಯಾರು ಕಾರಣ ಎಂಬುದು ಗೊತ್ತಿದೆ. ಹಾಗಂತ ಅವರನ್ನು ಹೊಣೆ ಮಾಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.

Voter ID Scam: ಚಿಲುಮೆ ಸಂಸ್ಥೆ ಮಾದರಿಯಲ್ಲಿ ಮತ್ತೊಂದು ಸಂಸ್ಥೆಯಿಂದ ಮತದಾರರ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios