ಡಿ.ಕೆ.ಶಿವಕುಮಾರ್ ಸಿಎಂ ಆಗುವ ಮೊದಲೇ ಹ್ಯಾರಿಸ್ ಅವರನ್ನು ಸಿಎಂ, ಅವರ ಮಗನನ್ನು ಡಿಸಿಎಂ ಮಾಡಿ!
ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ತಡವಾದರೂ ಸರಿ, ಮೊದಲು ಹ್ಯಾರಿಸ್ ಅವರನ್ನು ಮುಖ್ಯಮಂತ್ರಿ ಹಾಗೂ ಅವರ ಪುತ್ರ ನಲಪಾಡ್ ಹ್ಯಾರಿಸ್‌ನನ್ನು ಡಿಸಿಎಂ ಮಾಡಬೇಕು.
ಬೆಂಗಳೂರು (ಅ.22): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ ಎಂದು ಶಾಸಕ ಎನ್.ಎ. ಹ್ಯಾರೀಸ್ ಅವರು ಹೇಳಿದ್ದಾರೆ. ಆದರೆ, ಡಿಕೆಶಿ ಅವರು ಸಿಎಂ ಆಗುವುದು ತಡವಾದರೂ ಸರಿ, ಮೊದಲು ಹ್ಯಾರಿಡಸ್ ಅವರನ್ನು ಮುಖ್ಯಮಂತ್ರಿ ಹಾಗೂ ಅವರ ಪುತ್ರ ನಲಪಾಡ್ ಹ್ಯಾರಿಸ್‌ನನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಶಾಸಕ ಮುನಿರತ್ನ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ದಿನದಿಂದ ದಿನಕ್ಕೆ ವೀಕ್ ಆಗ್ತಾ ಇದ್ದಾರೆ. ಮೊದಲು ರಮೇಶ್ ಜಾರಕಿಹೊಳಿ ಅಧಿಕಾರದಲ್ಲಿದ್ದಾಗ ನೀನಾ ನಾನಾ ಎನ್ನುವ ಪೈಪೋಟಿ ಇತ್ತು. ಆದರೆ ಈಗ ನಾನಾ ನೀನಾ ಎನ್ನುವಂತೆ ಆಗಿದೆ. ಬೆಳಗಾವಿ ಲೋಕಸಭಾ ಟಿಕೆಟ್ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮತ್ತು ಜಾರಕಿಹೊಳಿ ಯಾರಿಗೆ ಸಿಗತ್ತದೆ ಎನ್ನುವ ಪೈಪೋಟಿ ಶುರುವಾಗಿದೆ. ನನ್ನ ಪ್ರಕಾರ ಜಾರಕಿಹೊಳಿಗೆ ಟಿಕೆಟ್ ಸಿಗಲ್ಲ ಎಂದು ಶಾಸಕ ಮುನಿರತ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊನ್ನೆ 20 ಶಾಸಕರ ಜೊತೆ ಸತೀಶ್ ಮೈಸೂರು ಕಡೆ ಹೊರಟಿದ್ದರು. ಈಗಲೇ ಹೀಗೆ ಆಗಿದೆ. ಮುಂದೆ ಹೇಗೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ. ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ 70 ಶಾಸಕರ ಬೆಂಬಲ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಲ್ಲಿ ಎರಡು ತಂಡವಿದೆ ಎಂದು ತಿಳಿಸಿದ್ದಾರೆ. 70 ಶಾಸಕರ ಬೆಂಬಲವೊ? ಅಥವಾ 52 ಶಾಸಕರ ಬೆಂಬಲವೊ? ಹಾಗಾದರೆ ಉಳಿದ ಶಾಸಕರ ಬೆಂಬಲ ಸಿದ್ದರಾಮಯ್ಯರಿಗೆ ಇದೆ ಅಂತ ಆಯಿತು ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.
ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್ ಬರ್ಬರ ಹತ್ಯೆ
ಸಂಸದ ಡಿ.ಕೆ. ಸುರೇಶ್ ಏನು ಬೇಕಾದ್ರೂ ಮಾತನಾಡಲಿ: ನನ್ನ ಬಗ್ಗೆ ಡಿ.ಕೆ. ಸುರೇಶ್ ಏಕವಚನದಲ್ಲಿ ಮಾತಾಡಿದ್ದು ಮಾಧ್ಯಮದಲ್ಲಿ ನೋಡಿದ್ದೇನೆ. ಅವರು ಏಕವಚನದಲ್ಲಿ ಅವರ ಅಣ್ಣನಿಗೆ ಮಾತಾಡಲಿ, ನನಗೆ ಮಾತನಾಡುವುದು ಬೇಡ. ನಾನು 5 ಲಕ್ಷ ಜನರ ಪ್ರತಿನಿಧಿಯಾಗಿದ್ದೇನೆ. ನಾನು ಅವರ ಹೇಳಿಕೆ ಖಂಡಿಸಲ್ಲ. ಅವರ ಗುಣ ತೋರಿಸತ್ತದೆ. ದಿನ ನಿತ್ಯ ಹೇಳಿಕೆ ನೀಡಲಿ ನಾನೇನು ಎನ್ನುವುದಿಲ್ಲ. ಪ್ರತಿದಿನವೂ ಬಾರೊ ಹೋಗೊ ಎಂದು ಮಾತಾಡಲಿ, ಅವರ ಬಗ್ಗೆ ಒಂಚೂರೂ ಖಂಡಿಸುವುದಿಲ್ಲ ಎಂದು ಹೇಳಿದರು.
ನಮ್ದು, ಹೆಬ್ಬಾಳ್ಕರ್‌ದು ಬೇರೆ ಟೀಂ: ಬೆಳಗಾವಿ ಗುಂಪುಗಾರಿಕೆ ಒಪ್ಪಿಕೊಂಡ ಸಚಿವ ಜಾರಕಿಹೊಳಿ?
ಕಾಲಿಗೆ ಬಿದ್ದು ಮನವಿ ಸಲ್ಲಿಸಿದ್ದ ಮುನಿರತ್ನ: ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಿಲ್ ಪಾವತಿಯನ್ನು ತಡೆಹಿಡಿಯಲಾಗಿತ್ತು. ಆದರೆ, ತಮ್ಮ ಕ್ಷೇತ್ರದ ಬಿಬಿಎಂಪಿ ಕಾಮಗಾರಿಗಳ ಬಿಲ್ ಪಾವತಿಗಾಗಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿದ ಶಾಸಕ ಮುನಿರತ್ನ ಅವರು, ನಂತರ ಬೆಂಗಳೂರು ಜಿಲ್ಲಾ ಉಸ್ತುವಾರಿಯೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದ ಖಾಸಗಿ ಕಾರ್ಯಕ್ರಮ ಸ್ಥಳಕ್ಕೆ ತೆರಳಿ ಕಾಲಿಗೆ ಬಿದ್ದು ಬಿಲ್ ಬಿಡುಗಡೆ ಬಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದರು.