ಹಿಜಾಬ್ ವಿವಾದಕ್ಕೆ ಸೂಕ್ತ ಉತ್ತರ ಕೊಟ್ಟ ಡ್ಯಾಶಿಂಗ್ ನಾಯಕ ಯಶ್‌ಪಾಲ್ ಸುವರ್ಣ: ಶಿಂಧೆ
ಉಡುಪಿಯ ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ವಿವಾದಕ್ಕೆ ಸಮರ್ಥವಾಗಿ ಉತ್ತರಿಸಿದ, ಡ್ಯಾಶಿಂಗ್ ಯುವಕ ಯಶ್ಪಾಲ್ ಸುವರ್ಣ ಅವರಿಗೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ.
ಉಡುಪಿ (ಮೇ.8): ಉಡುಪಿಯ ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ವಿವಾದಕ್ಕೆ ಸಮರ್ಥವಾಗಿ ಉತ್ತರಿಸಿದ, ಡ್ಯಾಶಿಂಗ್ ಯುವಕ ಯಶ್ ಪಾಲ್ ಸುವರ್ಣ ಅವರಿಗೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಇವರನ್ನು ಕನಿಷ್ಠ 50 ಸಾವಿರ ಅಂತರದಿಂದ ಗೆಲ್ಲಿಸಬೇಕು ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭಾಜಪ ಕಾರ್ಯಕರ್ತರಿಗೆ ಕರೆ ನೀಡಿದರು. ಉಡುಪಿ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಸೋಮವಾರ ಸಂಜೆ ಬಹಿರಂಗ ಚುನಾವಣಾ ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯ ವ್ಯಕ್ತಿಯಾಗಿದ್ದ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿದ್ದಾರೆ. ರೈತನ ಮಗನಾದ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೇನೆ. ಸಾಮಾನ್ಯ ಕಾರ್ಯಕರ್ತ ಯಶ್ ಪಾಲ್ ಸುವರ್ಣ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಇದೆಲ್ಲವೂ ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದರು.
ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಶಿವಾಜಿ ಮಹಾರಾಜರ ತಂದೆಯ ಕಾಲದಿಂದಲೂ ಸಂಭಂದವಿದೆ. ಅದು ಮುಂದುವರೆದು ವ್ಯಾಪಾರ, ಸಾಂಸ್ಕೃತಿಕ, ಆಹಾರ ಪದ್ದತಿಯಲ್ಲಿಯೂ ಸಂಭಂದವನ್ನು ಉಳಿಸಿಕೊಂಡಿದೆ. ಇಲ್ಲಿನ ಅನೇಕರು ಬಾಂಬೆಯಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಅಲ್ಲಿನ ಅನೇಕರು ಕರ್ನಾಟಕದಲ್ಲಿ ನೆಲೆ ಕಂಡುಕೊಂಡವರಿದ್ದಾರೆ. ನಾವು ಗೆಳೆತನ ಮಾಡುತ್ತೇವೆ, ಅದನ್ನು ನಿಭಾಯಿಸುತ್ತೇವೆ. ಪ್ರೀತಿಯಿಂದ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದೇವೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಿಸಿ ಎಂದರು.
ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಸಿಬ್ಬಂದಿಯಿಂದ ಮೂವರು ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ!
ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮಾತನಾಡಿ, ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಒಂದು ಮುಖದ ಎರಡು ನಾಣ್ಯಗಳು ಎಂದು ಈ ಹಿಂದೆ ಹೇಳಿದ್ದೆ. ಅದು ಈಗ ಸಾಭೀತಾಗಿದೆ. ಎಸ್.ಡಿ.ಪಿ.ಐ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಎಸ್.ಡಿ.ಪಿ.ಐ ಯನ್ನು ಬೇರು ಸಮೇತ ಕಿತ್ತೊಗೆಯಬೇಕು. ಕಾಂಗ್ರೆಸ್ ಮುಕ್ತ ಉಡುಪಿಯನ್ನಾಗಿಸಬೇಕು. ಮುಂದಿನ ಐದು ವರ್ಷ ಜನರ ಸೇವೆ ಅವಕಾಶ ನೀಡಿ, ದಿ.ಡಾ.ವಿ.ಎಸ್ ಆಚಾರ್ಯರ ಕನಸಿನ ಉಡುಪಿಯನ್ನು, ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ ಸಾಕಾರಗೊಳಿಸುತ್ತೇನೆ ಎಂದರು.
Karnataka elections 2023: ಮದುವೆಗೆ ಹರಸಲು ಬಂದವರಿಗೆ ನೂತನ ಜೋಡಿಗಳಿಂದ
ವೇದಿಕೆಯಲ್ಲಿ ಮಹಾರಾಷ್ಟ್ರದ ಸಂಸದ ರಾಹುಲ್ ಶೇವಡೆ, ಕಾರ್ಪೋರೇಟರ್ ಸಂತೋಷ್ ಎಂ.ಶೆಟ್ಟಿ, ಬಿಜೆಪಿ ನಾಯಕ ನರೇಶ್ ಮಸ್ಕಿ, ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ನಗರ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ, ಜಿಲ್ಲಾ ಮಹಿಳಾಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಮುಖಂಡೆ ಗೀತಾಂಜಲಿ ಸುವರ್ಣ, ರಾಜ್ಯ ಎಸ್.ಸಿ ಮೋರ್ಚಾ ಪ್ರ.ಕಾರ್ಯದರ್ಶಿ ದಿನಕರ್ ಬಾಬು, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಉಪಸ್ಥಿತರಿದ್ದರು.