Asianet Suvarna News Asianet Suvarna News

ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಬಾಲಕೃಷ್ಣ

ಸಿದ್ದರಾಮಯ್ಯ ಕಾಲದಲ್ಲಿ ಆಗದೇ ಇರೋ ವಿಚಾರವನ್ನ ಅವರ ಹಣೆಗೆ ಕಟ್ಟುವ ಕೆಲಸ ಆಗ್ತಿದೆ. ಬಿಜೆಪಿಯವ್ರಿಗೆ ಸಿದ್ದರಾಮಯ್ಯನ ಜನಪ್ರಿಯತೆ ಸಹಿಸಲು ಆಗ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ರು ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಬಿಜೆಪಿಯವರಿಗೆ ಯಾವುದೇ ಅನುಕೂಲ ಆಗಲ್ಲ: ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ 

magadi congress mla hc balakrishna slams bjp leaders grg
Author
First Published Aug 17, 2024, 12:46 PM IST | Last Updated Aug 17, 2024, 12:47 PM IST

ರಾಮನಗರ(ಆ.17):  ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ. ರಾಜ್ಯಪಾಲರು ಈ ಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ. ರಾಜ್ಯ ಕಂಡ ಏಕೈಕ ಅತ್ಯುತ್ತಮ ನಾಯಕ ಸಿದ್ದರಾಮಯ್ಯ. ಅಧಿಕಾರ ಇದ್ದ ಸಂದರ್ಭದಲ್ಲಿ ಕುಟುಂಬದವರನ್ನ ಅಕ್ಕಪಕ್ಕ ಸೇರಿಸದೇ ಆಡಳಿತ ಮಾಡಿದ್ದಾರೆ. ಬಿಜೆಪಿ ಅವರು ದ್ವೇಷದ ರಾಜಕೀಯ ಮಾಡ್ತಿದ್ದಾರೆ ಎಂದು ಕಮಲ ನಾಯಕರ ವಿರುದ್ಧ ಶಾಸಕ ಹೆಚ್.ಸಿ.ಬಾಲಕೃಷ್ಣ ಹರಿಹಾಯ್ದಿದ್ದಾರೆ. 

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು, ಸಿದ್ದರಾಮಯ್ಯ ಕಾಲದಲ್ಲಿ ಆಗದೇ ಇರೋ ವಿಚಾರವನ್ನ ಅವರ ಹಣೆಗೆ ಕಟ್ಟುವ ಕೆಲಸ ಆಗ್ತಿದೆ. ಬಿಜೆಪಿಯವ್ರಿಗೆ ಸಿದ್ದರಾಮಯ್ಯನ ಜನಪ್ರಿಯತೆ ಸಹಿಸಲು ಆಗ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ರು ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಬಿಜೆಪಿಯವರಿಗೆ ಯಾವುದೇ ಅನುಕೂಲ ಆಗಲ್ಲ ಎಂದು ಹೇಳಿದ್ದಾರೆ.

ಕೋರ್ಟ್‌ನಲ್ಲಿ ತನಿಖೆಗೆ ಆದೇಶ ಸಿಕ್ರೆ ತಕ್ಷಣ ಸಿದ್ದರಾಮಯ್ಯ ವಿರುದ್ದ ಎಫ್ಐಆರ್! ಸಿಎಂಗೆ ದೂರುದಾರರ ಚೆಕ್‌ ಮೇಟ್‌

ದ್ವೇಷದ ರಾಜಕಾರಣ ಮಾಡಿ ರಾಜ್ಯವನ್ನ ಬಾಂಗ್ಲಾ, ಶ್ರೀಲಂಕಾ ಸ್ಥಿತಿಗೆ ತರುವ ಪ್ರಯತ್ನ ಮಾಡ್ತಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿರೋ ಉದಾಹರಣೆಯೇ ಇಲ್ಲ. ಇದರಿಂದ ನಮ್ಮ ಸಿದ್ದರಾಮಯ್ಯರವರ ಒಂದು ಕೂಲದನ್ನೂ ಬಗ್ಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Latest Videos
Follow Us:
Download App:
  • android
  • ios