ಸಿದ್ದರಾಮಯ್ಯ ಸಾಹೇಬರು ತಪ್ಪು ಮಾಡಿಲ್ಲ ಅನ್ನೋ ದಿನ ಬರುತ್ತೆ; ಶಾಸಕ ಪ್ರದೀಪ್ ಈಶ್ವರ್
ಸಿದ್ದರಾಮಯ್ಯ, ಡಿಕೆಶಿ ಸಾಹೇಬರು, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಸರ್ ಎಲ್ಲರೂ ನನ್ನ ನಾಯಕರು. ನಾನು ಅವರ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ.ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ತಿಳಿಸಿದರು.
ಕೊಡಗು (ಅ.10): ನಾನೊಬ್ಬ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ಮುಖ್ಯಮಂತ್ರಿ ಬದಲಾವಣೆ ವಿಚಾರ ಅದೆಲ್ಲವೂ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ತಿಳಿಸಿದರು.
ಸಿಎಂ ಬದಲಾವಣೆ ಕೂಗಿನ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅಹಿಂದ ಶಾಸಕರ ಭೇಟಿ ಮಾಡಿರುವ ವಿಚಾರ ಸಂಬಂಧ ಇಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸತೀಶ್ ಜಾರಕಿಹೊಳಿ ಅವರು ಅಹಿಂದ ಶಾಸಕರನ್ನು ಯಾಕೆ ಭೇಟಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನಗೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದರು.
ನಮಗೆ ಕಲ್ಲು ಹೊಡೆದರೆ, ನಾವು ಹೂ ಕೊಡಲು ಸಾಧ್ಯವಿಲ್ಲ; ಬಿಜೆಪಿ-ಜೆಡಿಎಸ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ ಗರಂ
ಸಿದ್ದರಾಮಯ್ಯ, ಡಿಕೆಶಿ ಸಾಹೇಬರು, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಸರ್ ಎಲ್ಲರೂ ನನ್ನ ನಾಯಕರು. ನಾನು ಅವರ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ನನಗೆ ಅಷ್ಟು ಅರ್ಹತೆಯಾಗಲಿ, ಅನುಭವವಾಗಲಿ ಇಲ್ಲ ಎಂದರು. ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚನೆ ನೀಡಿದೆಯ? ಎಂಬ ಪ್ರಶ್ನೆಗೆ, 'ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪಾರ್ಟಿ ಏನು ಹೇಳುತ್ತೆ ಅದನ್ನು ಫಾಲೋ ಮಾಡುತ್ತೇನೆ ಎಂದರು.
ಪ್ರದೀಪ್ ಈಶ್ವರ್ ಅಸಭ್ಯ ಪದ ಬಳಕೆ ನಿಲ್ಲಿಸಲಿ: ಬಿಜೆಪಿ ನಾಯಕನ ಖಡಕ್ ಎಚ್ಚರಿಕೆ
ಸಿಎಂ ಸಾಹೇಬ್ರು ಯಾವುದೇ ತಪ್ಪು ಮಾಡಿಲ್ಲ:
ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸಾಹೇಬ್ರು ಯಾವುದೇ ತಪ್ಪು ಮಾಡಿಲ್ಲ. ಇದೆಲ್ಲವೂ ಬಿಜೆಪಿಯವರ ಷಡ್ಯಂತ್ರ. ಸಿದ್ದರಾಮಯ್ಯ ಸಾಹೇಬರು ತಪ್ಪು ಮಾಡಿಲ್ಲ ಅನ್ನೋ ದಿನ ಬರುತ್ತೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕೊರೊನಾ ಸಂದರ್ಭದ 736 ಕೋಟಿ ಅಕ್ರಮ ವಿಚಾರವಾಗಿ ಇವತ್ತು ಕ್ಯಾಬಿನೆಟ್‌ನಲ್ಲಿ ಎಸ್‌ಐಟಿ ಸಬ್ ಕಮಿಟಿ ರಚನೆ ಮಾಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ನಮ್ಮ ಸರ್ಕಾರ ನೀರು ಕುಡಿಸುವ ಪ್ರಯತ್ನ ಮಾಡುತ್ತೆ ಎಂದರು.