'ಮಧ್ಯ ಪ್ರದೇಶ ವೈರಸ್ ಮಹಾರಾಷ್ಟ್ರ ಪ್ರವೇಶಿಸಲ್ಲ'
ಮಧ್ಯ ಪ್ರದೇಶ ವೈರಸ್ ಮಹಾರಾಷ್ಟ್ರ ಪ್ರವೇಶಿಸಲ್ಲ| ಬಿಜೆಪಿಗೆ ರಾವುತ್ ಟಾಂಗ್
ಮುಂಬೈ[ಮಾ.12]: ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಶಿವಸೇನೆ- ಕಾಂಗ್ರೆಸ್- ಎನ್‌ಸಿಪಿ ಸರ್ಕಾರ ಸುಭದ್ರವಾಗಿದೆ.
ಮಧ್ಯಪ್ರದೇಶದ ವೈರಸ್ ಮಹಾರಾಷ್ಟ್ರ ಪ್ರವೇಶಿಸುವುದಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮಧ್ಯೆ ಉತ್ತಮ ಹೊಂದಾಣಿಕೆ ಇದೆ.
ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರ ಪತನಗೊಳ್ಳಲಿದೆ ಎಂದು ಯಾರಾದರೂ ಕನಸು ಕಾಣುತ್ತಿದ್ದರೆ ಅದು ಅವರ ಭ್ರಮೆ ಎಂದು ಹೇಳಿದರು.