ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ, ಕರ್ನಾಟಕದಲ್ಲಿ ಯರು ಗೆಲುವು ಸಾಧಿಸುತ್ತಾರೆ? ಈ ಕುರಿತಾಗಿ ವಿಡಿಪಿ ಅಸೋಸಿಯೇಟ್ಸ್ ಅಮೀಕ್ಷೆ ನಡೆಸಿದ್ದು, ಈ ಕುರಿತದ ವರದಿ

ನವದೆಹಲಿ: ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟ 15 ಸ್ಥಾನ ಗೆಲ್ಲಲಿದೆ, ಈ ಮೈತ್ರಿಗೆ ಪ್ರಬಲ ಸ್ಪರ್ಧೆ ನೀಡಲಿರುವ ಬಿಜೆಪಿ 13 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ವಿಡಿಪಿ ಅಸೋಸಿಯೇಟ್ಸ್‌ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.

ಸಮೀಕ್ಷೆ ಅನ್ವಯ ಬಿಜೆಪಿ ಶೇ.43.83ರಷ್ಟುಮತಪಡೆಯಲಿದೆ, ಕಾಂಗ್ರೆಸ್‌ ಶೇ.35ರಷ್ಟುಮತ್ತು ಜೆಡಿಎಸ್‌ ಶೇ.14.16ರಷ್ಟುಮತ ಪಡೆಯಲಿದೆ. ಇತರರು ಶೇ.7ರಷ್ಟುಮತ ಪಡೆಯಲಿದ್ದಾರೆ.

ಎಲ್ಲೆಲ್ಲಿ ಯಾರ ಪ್ರಭಾವ?

ವಲಯಬಿಜೆಪಿಕಾಂಗ್ರೆಸ್‌+ಜೆಡಿಎಸ್‌ಇತರರು
ಮುಂಬೈ ಕರ್ನಾಟಕ47449
ಹೈದ್ರಾಬಾದ್‌ ಕರ್ನಾಟಕ44497
ಕರಾವಳಿ ಕರ್ನಾಟಕ51418
ಬೆಂಗಳೂರು42535
ಮಧ್ಯ ಕರ್ನಾಟಕ49447
ಹಳೆ ಮೈಸೂರು30646