ಮಂಡ್ಯ[ಮಾ.03]  ಮಂಡ್ಯದ ಲೋಕಸಭಾ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಫಿಕ್ಸ್ ಆಗಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತ ಎಂಬುದನ್ನು ಅವರೇ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ  ಮಂಡ್ಯದಲ್ಲಿ ಇಂದಿನಿಂದ ನನ್ನ‌ ಸೇವೆ ಆರಂಭವಾಗಲಿದೆ‌‌. ನಮ್ಮ ಪಕ್ಷದ ವರಿಷ್ಠರು ನನ್ನ‌ ಹೆಸರು ಘೋಷಿಸಿದ್ದಕ್ಕೆ ಅಭಾರಿಯಾಗಿದ್ದೀನಿ.  ಮಂಡ್ಯ ಜಿಲ್ಲೆಯ ಜನರ ಭಾವನೆಗಳಿಗೆ ಅನುಗುಣವಾಗಿ ನನ್ನ‌ ಹೆಸರು ಘೋಷಣೆ ಮಾಡಿದ್ದಾರೆ. ಹೀಗಾಗಿ ಇಂದಿನಿಂದ ಇನ್ನ ಮುಂದೆ ಮಂಡ್ಯದಲ್ಲಿ ನನ್ನ ಸೇವೆ ಶುರು ಎಂದು ಹೇಳಿದರು.

ಸುಮಲತಾ ಪರ ಎಂಬಿಪಿ ಬ್ಯಾಟ್.. ಬದಲಾಗುತ್ತಾ ಟಿಕೆಟ್  ಫೈಟ್!

ಸುಮಲತಾ ಅಕ್ಕ ಸ್ಪರ್ಧೆ ಬಗೆಗೆ ನಾನು ಏನೂ ಹೇಳಲ್ಲ.  ಚುನಾವಣೆಗೆ ನಿಲ್ಲುವ ಬಗ್ಗೆ  ಅವರು ಸ್ವತಂತ್ರರು. ಅಂಬರೀಶಣ್ಣನ ಬಗೆಗೆ ನನಗೆ ಗೌರವವಿದೆ. ಅಭಿ ನನ್ನ ತಮ್ಮ ಇದ್ದಹಾಗೆ. ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿ ಮಾತಾಡ್ತಿನಿ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲೇ ಮನೆ ಮಾಡ್ತಿನಿ ಎಂದು ಹೇಳಿದರು.