ಹೊಸ ಬೆಳವಣಿಗೆ, ದಾವಣಗೆರೆ ದೋಸ್ತಿ ಅಭ್ಯರ್ಥಿಯಾಗಿ ರೇವಣ್ಣ?

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ದೋಸ್ತಿ  ಪರವಾಗಿ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಚರ್ಚೆಗೆ ಬಂದಾಗಲೇ ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮಾತನ್ನಾಡಿದ್ದಾರೆ.

Loksabha Election 2019 Congress Leader HM Revanna Sepkes about Davanagere candidate

ದಾವಣಗೆರೆ [ಫೆ.18]  ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ನಾನಲ್ಲ.  ಆದರೆ ಪಕ್ಷ ಮತ್ತು ಹೈಕಮಾಂಡ್ ನಿರ್ಧಾರ ಕೈಗೊಂಡರೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್ ಎಂ ರೇವಣ್ಣ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ  ಮಾತನಾಡಿದ ರೇವಣ್ಣ, ಶಾಮನೂರು ಕುಟುಂಬ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾ ಬಂದಿದೆ. ಅವರು ಹಿಂದೆ ಸರಿದು ಹೈಕಮಾಂಡ್ ಒಪ್ಪಿಗೆ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದು ಎಚ್‌. ಎಂ.ರೇವಣ್ಣ ಹೇಳಿದ್ದಾರೆ.

‘ನಾವೇನು ಭಿಕ್ಷುಕರಲ್ಲ’ ಕಾಂಗ್ರೆಸ್‌ಗೆ ‘ಕುಮಾರ’ ತಿವಿತ

ನಮ್ಮ ಕುರುಬ ಸಮಾಜಕ್ಕೆ ಟಿಕೆಟ್ ಕೊಟ್ರೆ ಕಾಂಗ್ರೆಸ್ ಪಕ್ಷ ಗೆಲ್ಲಬಹುದು ಎಂಬ ಲೆಕ್ಕಾಚಾರದಿಂದ ನನ್ನ ನಿಲ್ಲಿಸಿದರೂ ನಿಲ್ಲಿಸಬಹುದು. ಹಿಂದೆ ಚನ್ನಯ್ಯ ಒಡೆಯರ್ ಇಲ್ಲಿ ಗೆಲುವು ಸಾಧಿಸಿದ ಇತಿಹಾಸವಿದೆ ಆ ಕಾರಣಕ್ಕಾಗಿ ಒಂದು ಅವಕಾಶವಿದೆ. ನಾನು ದಾವಣಗೆರೆ ಲೋಕಸಭಾ ಆಕಾಂಕ್ಷೆ ಅಲ್ಲ ಆದರೆ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದರು.

ದೇಶದಲ್ಲಿ ಮೋದಿ ಅಲೆ ಕಡಿಮೆ ಆಗಿದೆ. ವಿಪಕ್ಷಗಳು ಕೇಂದ್ರ ಆಡಳಿತಕ್ಕೆ ಬೇಸತ್ತಿವೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.

Loksabha Election 2019 Congress Leader HM Revanna Sepkes about Davanagere candidate

Latest Videos
Follow Us:
Download App:
  • android
  • ios