ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಎದುರಾಳಿಯಾಗಿ ಸ್ಪರ್ಧೆ ಮಾಡೋ ಮೂಲಕ ಓರ್ವ ನಾಯಕ ಸೋತ್ರೆ ಮತ್ತೊಬ್ಬ ನಾಯಕ ಗೆದ್ದು ಮಂತ್ರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಬಳ್ಳಾರಿಯಲ್ಲಿ ಹಾಲಿ ಮತ್ತು ಮಾಜಿ ಸಚಿವರ ಮಧ್ಯೆ ಲೋಕಸಭೆ ಫೈಟ್ ಕುರಿತು ಚರ್ಚೆ ಜೋರಾಗಿದೆ.

ವರದಿ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಸೆ.26): ಆ ಇಬ್ಬರು ನಾಯರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎನ್ನುತ್ತಿದ್ದಾರೆ. ಆದ್ರೇ ಆಯಾ ಪಕ್ಷದ ಮುಖಂಡರು (ಹೈಕಡ್) ಮಾತ್ರ ಅವರಿಬ್ಬರನ್ನೇ ಕಣಕ್ಕಿಳಿಸೋ ಬಗ್ಗೆ ಚಿಂತನೆ ನಡೆಸಿದ್ದಾರೆ. ರಾಜಕೀಯಕ್ಕೆ ಒಟ್ಟೊಟ್ಟಿಗೆ ಬಂದ ಆ ಇಬ್ಬರು ನಾಯಕರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಎದುರಾಳಿಯಾಗಿ ಸ್ಪರ್ಧೆ ಮಾಡೋ ಮೂಲಕ ಓರ್ವ ನಾಯಕ ಸೋತ್ರೆ ಮತ್ತೊಬ್ಬ ನಾಯಕ ಗೆದ್ದು ಮಂತ್ರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಬಳ್ಳಾರಿಯಲ್ಲಿ ಹಾಲಿ ಮತ್ತು ಮಾಜಿ ಸಚಿವರ ಮಧ್ಯೆ ಲೋಕಸಭೆ ಫೈಟ್ ಕುರಿತು ಚರ್ಚೆ ಜೋರಾಗಿದೆ.

ಇಬ್ಬರು ನಾಯಕರು ಸ್ಪರ್ಧೆ ಮಾಡೋ ಬಗ್ಗೆ ಬಾಯ್ಬಿಡ್ತಿಲ್ಲ.

ಬಿಜೆಪಿಯಿಂದಲೇ ಶ್ರೀರಾಮುಲು ಮತ್ತು ನಾಗೇಂದ್ರ ಆರಂಭದಲ್ಲಿ ಶಾಸಕರಾದ್ರು. ಆದ್ರೇ ಕಾರಣಾಂತರ ದಿಂದ ನಾಗೇಂದ್ರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ರು… ಆರಂಭದಲ್ಲಿ ಒಂದಾಗಿದ್ರೂ 2023ರ ಚುನಾವಣೆಯಲ್ಲಿ ಪರಸ್ಪರ ಸ್ಪರ್ಧೆ ಮಾಡೋ ಮೂಲಕ ಬದ್ಧ ವೈರಿಗಳಾದ್ರು.. ಹೌದು, ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಹಾಗೆಯೇ ಯಾರು ಮಿತ್ರರಲ್ಲ ಅನ್ನೋದಕ್ಕೆ ಈ ಇಬ್ಬರು ನಾಯಕರು ಸಾಕ್ಷಿಯಾಗಿದ್ದಾರೆ. ಒಂದಾಗಿಯೇ ಒಂದೇ ಪಕ್ಷದಿಂದ ರಾಜಕೀಯಕ್ಕೆ ಬಂದಿದ್ದ ನಾಯಕರು ರಾಜಕೀಯ ಕಾರಣಗಳಿಂದಗಿಯೇ ಬೇರೆ ಬೇರೆಯಾಗಿದ್ಧಾರೆ. ಒಮ್ಮೆ ಪರಸ್ಪರ ಎದುರಾಗಿ ಸ್ಪರ್ಧೆ ಮಾಡಿದ್ದಾಯ್ತು. ಇದೀಗ ಇನ್ನೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡೋ ಎಲ್ಲ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತಿರೋ ಶ್ರೀರಾಮುಲು ಅವರನ್ನು ಬಳ್ಳಾರಿ ಲೋಕಸಭೆ ಕಣದಿಂದ ಸ್ಪರ್ಧೆ ಮಾಡಿಸಬೇಕೆನ್ನುವುದು ಬಿಜೆಪಿ ಹೈಕಮೆಂಡ್ ನಿರ್ಧಾರವಾಗಿದೆ. ಹಾಲಿ ಸಂಸದ ದೇವೇಂದ್ರಪ್ಪ ವಯಸ್ಸಿನ ಕಾರಣಕ್ಕೆ ಬಹುತೇಕ ಟಿಕೆಟ್ ನಿರಾಕರಣೆ ಮಾಡಲಾಗ್ತಿದೆಯಂತೆ. ಇನ್ನೂ ಮೇಲ್ನೋಟಕ್ಕೆ ಸ್ಪರ್ಧೆ ಬಗ೬ ಅಲ್ಲಗಳೇಯುತ್ತಿರೋ ಶ್ರೀರಾಮುಲು ಒಳಗಿಂದೊಳಗೆ ಪ್ಲಾನ್ ಮಾಡ್ತಿದ್ದಾರೆ. ಮಾಜಿ ಶಾಸಕ ಸೋಮಶೇಖರ ರೆಡ್ಡಿ ಕೂಡ ಶ್ರೀರಾಮುಲು ಸ್ಪರ್ಧೆ ಮಾಡಿದ್ರೇ ಮಾತ್ರ ಗೆಲ್ಲುದು ಎನ್ನುತ್ತಿದ್ದಾರೆ.

ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ, ದಕ್ಷಿಣದ ಪಪ್ಪು ಉದಯನಿಧಿ ಸ್ಟಾಲಿನ್: ಶ್ರೀರಾಮುಲು

ನಾಗೇಂದ್ರ ಸ್ಪರ್ಧೆ ಮಾಡಿದ್ರೇ ಮಾತ್ರ ಕಾಂಗ್ರೆಸ್ ಗೆಲ್ಲೋದಂತೆ

ಇದು ಬಿಜೆಪಿ ಕಥೆಯಾದ್ರೇ ಕಾಂಗ್ರೆಸ್ ನಲ್ಲಿಯೂ ಕೂಡ ರಾಜ್ಯದ ಹಾಲಿ ಆರಕ್ಕೂ ಹೆಚ್ಚು ಸಚಿವ, ಶಾಸಕರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸೋ ಬಗ್ಗೆ ಚರ್ಚೆ ನಡೆಸಿದೆ ಅದರಲ್ಲಿ ಬಳ್ಳಾರಿಯಿಂದ ಸ್ಪರ್ಧೆ ಮಾಡಲು ಸಚಿವ ನಾಗೇಂದ್ರ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ. ಆದ್ರೇ, ಸಚಿವ ನಾಗೇಂದ್ರ ಮಾತ್ರ ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧ. ಆದ್ರೇ ಇರೋ ಶಾಸಕ, ಸಚಿವರನ್ನು ಯಾಕೆ ನಿಲ್ಲಿಸಬೇಕು.. ಕಾಂಗ್ರೆಸ್ ನಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ ಎಲ್ಲರೂ ಶಕ್ತಿವಂತರಾಗಿದ್ದಾರೆ. ಅವಕಾಶ ವಂಚಿತರಿಗೆ ಟಿಕೆಟ್ ನೀಡಲು ಪಕ್ಷ ಯೋಚನೆ ಮಾಡ್ತಿದೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಮಾಜಿ ಸಂಸದ ಉಗ್ರಪ್ಪ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೇ ಪಕ್ಷದ ಹೈಕಮೆಂಡ್ ಮಾತ್ರ ನಾಗೇಂದ್ರ ಪರ ಒಲವು ತೋರಿಸಿದ್ರೇ, ಸಚಿವ ನಾಗೇಂದ್ರ ಮಾತ್ರ ತಮ್ಮ ಸಹೋದರನನ್ನು ವೆಂಕಟೇಶ ಪ್ರಸಾದ್ ಅವರ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ.

ಲೋಕಸಭೆ ಕ್ಷೇತ್ರ ಗೆಲ್ಲೋದು ಸುಲಭದ ಮಾತಲ್ಲ

2018ರ ಉಪಚುನಾವಣೆ ಹೊರತುಪಡಿಸಿದ್ರೇ, 2004ರಿಂದಲೂ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆಲ್ಲುತ್ತಲೆ ಬಂದಿದೆ. ಆದ್ರೇ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರೋ ಹಿನ್ನೆಲೆ ಬಳ್ಳಾರಿಯನ್ನು ಕೈಬಿಡಬಾರದೆಂದು ಕಾಂಗ್ರೆಸ್ ಪ್ಲಾನ್ ಮಾಡ್ತಿದೆ. ಆದ್ರೇ, ಈಗಾಗಲೇ ವಿಧಾನಸಭೆ ಸೋತಿರೋ ಶ್ರೀರಾಮುಲು ಲೋಕಸಭೆ ಗೆಲ್ಲುವ ಒತ್ತಡದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದಲ್ಲಿಯೂ ಪ್ರಭಾವಿ ನಾಯಕರನ್ನು ಕಣಕ್ಕಿಳಿಸಲಿದ್ದು, ಯಾರು ಗೆಲ್ಲಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.