ಪ್ರಧಾನಿ ಮೋದಿ ಅತ್ಯಾಚಾರಿಗಳ ಪರ ನಿಲ್ಲುತ್ತಾರೆ: ಪ್ರಿಯಾಂಕಾ ಗಾಂಧಿ ಆರೋಪ

ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹಿಳೆಯರ ಗೌರವಕ್ಕೆ ಧಕ್ಕೆ ಬಂದಾಗಲೆಲ್ಲ ಅತ್ಯಾಚಾರಿಗಳು, ದೌರ್ಜನ್ಯ ಎಸಗಿದವರ ಪರ ನಿಲ್ಲುತ್ತಾರೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದರು. 

Lok Sabha Elections 2024 PM Modi will stand by rapists Says Priyanka Gandhi gvd

ದಾವಣಗೆರೆ (ಮೇ.05): ಚುನವಾಣೆ ಸಮಯದಲ್ಲಿ ಮಹಿಳೆಯರ ಆತ್ಮನಿರ್ಭರತೆಯ ವಿಚಾರವಾಗಿ ಮಾತನಾಡುವ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಹಿಳೆಯರ ಗೌರವಕ್ಕೆ ಧಕ್ಕೆ ಬಂದಾಗಲೆಲ್ಲ ಅತ್ಯಾಚಾರಿಗಳು, ದೌರ್ಜನ್ಯ ಎಸಗಿದವರ ಪರ ನಿಲ್ಲುತ್ತಾರೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದರು. ನಗರದಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಂಸದನ ಜೊತೆಗೆ ವೇದಿಕೆಯಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಳ್ಳುತ್ತಾರೆ. 

ಸಂಸದನ ಕುಕೃತ್ಯದ ವಿಚಾರ ಬಹಿರಂಗ ಆಗುತ್ತಿದ್ದಂತೆಯೇ ಆತ ವಿದೇಶಕ್ಕೆ ಓಡಿ ಹೋದರೂ ಪ್ರಧಾನಿ, ಗೃಹ ಮಂತ್ರಿಗೆ ಗೊತ್ತೇ ಆಗುವುದಿಲ್ಲ. ಪ್ರಧಾನಿ ಮೋದಿ, ಗೃಹ ಮಂತ್ರಿಗೆ ದೇಶದ ಪ್ರತಿಯೊಬ್ಬ ನಾಯಕರು, ಮುಖಂಡರ ಚಲನವಲನಗಳ ಇಂಚಿಂಚೂ ಮಾಹಿತಿ ಇರುತ್ತದೆ. ಅಂಥದ್ದರಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂಸದ ವಿದೇಶಕ್ಕೆ ಹೋದ ಬಗ್ಗೆ ಮಾಹಿತಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು. 

12 ಜೆಡಿಎಸ್‌ ಶಾಸಕರ ಕಾಂಗ್ರೆಸ್ ಸೇರ್ಪಡೆ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್ ಪಕ್ಷ ನೋಟುಗಳ ಎಕ್ಸ್‌-ರೇ ಯಂತ್ರ ತಂದು, ಚಿನ್ನಾಭರಣ ಕದಿಯುತ್ತದೆಂದು, ನಿಮ್ಮ ಮನೆಯಲ್ಲಿ ಎರಡು ಎಮ್ಮೆಗಳಿದ್ದರೆ ಒಂದು ಎಮ್ಮೆ ಬಿಟ್ಟು, ಇನ್ನೊಂದು ಎಮ್ಮೆಯನ್ನು ಕಾಂಗ್ರೆಸ್ ಕಸಿಯುತ್ತದೆಂದು ಮೋದಿ ಹೇಳಿದ್ದಾರೆ. ಮೋದಿಯವರಿಂದ ಇಷ್ಟೊಂದು ಕೀಳುಮಟ್ಟದ ಅಪಪ್ರಚಾರ ನಿರೀಕ್ಷೆ ಮಾಡಿದ್ದಿರಾ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜನತೆಗೆ ಪ್ರಶ್ನಿಸಿದರು.

ಗದಗ ಸಮಾವೇಶದಿಂದ ದೂರವುಳಿದ ಪ್ರಿಯಾಂಕಾ: ದಾವಣಗೆರೆಯಲ್ಲಿ ಸಮಾವೇಶ ಮುಗಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಗದಗದ ಪ್ರಚಾರ ಸಭೆಯಿಂದ ಶನಿವಾರ ಕೊನೇ ಕ್ಷಣದಲ್ಲಿ ದೂರವುಳಿದರು. ತುರ್ತು ಕಾರ್ಯದ ಹಿನ್ನೆಲೆಯಲ್ಲಿ ಗದಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ವಾಪಸಾದರು ಎಂದು ಹೇಳಲಾಗಿದೆ. ದಾವಣಗೆರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ನಂತರ ಗದಗದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. 

ಬೇಗನೇ ಪ್ರಜ್ವಲ್‌ ರೇವಣ್ಣ ಬಂಧಿಸಿ: ಎಸ್‌ಐಟಿಗೆ ಸಿಎಂ ಸಿದ್ದರಾಮಯ್ಯ ತಾಕೀತು

ಅವರು ಹೆಲಿಕಾಪ್ಟರ್‌ ಮೂಲಕ ದಾವಣಗೆರೆಯಿಂದ ಗದಗಕ್ಕೆ ಆಗಮಿಸಿದರಾದರೂ ಕೊನೆಗೆ ಆ ಹೊತ್ತಿಗಾಗಲೇ ತೀರಾ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ನೇರವಾಗಿ ರಸ್ತ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿದರು. ಅಲ್ಲಿಂದ ಅವರು ವಾಪಸಾದರು ಎನ್ನಲಾಗಿದೆ. ಇದರಿಂದ ಇಲ್ಲಿನ ವಿವಿಎಸ್ಟಿಸಿ ಮೈದಾನದಲ್ಲಿ ಬಿಸಿಲನ್ನೂ ಲೆಕ್ಕಿಸದೆ ಕಾಯುತ್ತಿದ್ದ ಅಭಿಮಾನಿಗಳಿಗೆ, ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿರಾಸೆಯಾಯಿತು.

Latest Videos
Follow Us:
Download App:
  • android
  • ios