10 ವರ್ಷ ಬರೀ ಮೋದಿಯವರ ಟ್ರೈಲರ್ ನೋಡಿದ್ರಿ, ಮುಂದೆ ಸಿನಿಮಾ ಬಂದೆ ಬರುತ್ತೆ: ಅಣ್ಣಾಮಲೈ
ಇಡೀ ವಿಶ್ವ ಮೋದಿಯವರ ತೀರ್ಮಾನಕ್ಕೆ ಎದುರು ನೋಡುತ್ತಿದೆ. 200 ವರ್ಷ ನಾವು ಬ್ರಿಟಿಷ್ ಎದುರು ಕೈಕಟ್ಟಿಕೊಂಡು ನಿಂತಿದ್ದೇವೆ ಎಂದು ಕೆ.ಅಣ್ಣಾಮಲೈ ಹೇಳಿದರು.
ರಾಯಚೂರು (ಮೇ.04): ಇಡೀ ವಿಶ್ವ ಮೋದಿಯವರ ತೀರ್ಮಾನಕ್ಕೆ ಎದುರು ನೋಡುತ್ತಿದೆ. 200 ವರ್ಷ ನಾವು ಬ್ರಿಟಿಷ್ ಎದುರು ಕೈಕಟ್ಟಿಕೊಂಡು ನಿಂತಿದ್ದೇವೆ ಎಂದು ಕೆ.ಅಣ್ಣಾಮಲೈ ಹೇಳಿದರು. ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ರಾಯಚೂರಿನ ಖಾಸಗಿ ಹೋಟೆಲ್‌ನಲ್ಲಿ ನೇತೃತ್ವದಲ್ಲಿ ಸಂವಾದ ಉದ್ದೇಶಿಸಿ ಮಾತನಾಡಿದ ಅವರು, ಈಗ ಐದು ವರ್ಷಗಳಿಂದ ಇಡೀ ವಿಶ್ವದಲ್ಲಿ ಭಾರತ ನೋಡುವಂತೆ ಆಗಿದೆ. 193 ದೇಶದಲ್ಲಿ ಭಾರತವೂ ಆರ್ಥಿಕತೆಯಲ್ಲಿ ಪ್ರಗತಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಕಾಂಗ್ರೆಸ್ ನವರು ಹೇಳಿದ್ರು 2044 ಮುಗಿಯುವುದರಲ್ಲಿ ಭಾರತ ಇಡೀ ವಿಶ್ವದಲ್ಲೇ ನಾವು 3ನೇ ಸ್ಥಾನಕ್ಕೆ ಬರುತ್ತೇವೆ ಎಂದರು.
ಕಾಂಗ್ರೆಸ್ ಥಿಕ್ಕಿಂಗ್ ಬಹಳ ಸ್ಲೋ, ಬಡವರಿಗೆ ಇಂದಿರಾಗಾಂಧಿ ಹೆಸರಿನಲ್ಲಿ ಮನೆ ಕೊಟ್ಟಿದ್ರು. 2027 ಮುಗಿಯುವುದರಲ್ಲಿ 3ನೇ ಸ್ಥಾನಕ್ಕೆ ಬರುತ್ತೇವೆ. 2047 ಮುಗಿಯುವುದರಲ್ಲಿ ನಾವು ಮೊದಲ ಸ್ಥಾನಕ್ಕೆ ಬರಬೇಕು. ಎಲ್ಲಾ ಸಮಯದಲ್ಲಿ ಕಾಂಗ್ರೆಸ್ ಬರೀ ಗರೀಬಿ ಹಠವೋ ಬಗ್ಗೆನೇ ಮಾತನಾಡುತ್ತಾರೆ. 70 ವರ್ಷಗಳಿಂದ ಕಾಂಗ್ರೆಸ್ ಬರೀ ಗರೀಬಿ ಹಠವೋ ಅಂತೇ ಹೇಳುತ್ತಿದ್ದಾರೆ. ಮೋದಿಯವರು ಬಂದ ಮೇಲೆ ಬಡತನದಲ್ಲಿ ಇದ್ದವರಿಗಾಗಿ ನಾವು ಕೆಲಸ ಮಾಡಿ ತೋರಿಸಿದ್ದೇವೆ. ಮನೆ, ಗ್ಯಾಸ್ ಮತ್ತು ಉದ್ಯೋಗ ನೀಡುವುದು ಮೋದಿ ಬಂದ ಮೇಲೆ ಆಗಿದೆ. ಮೋದಿ ಸರ್ಕಾರ ಮಾಡಿದ ಸಾಧನೆಗಳನ್ನು ಅಣ್ಣಾಮಲೈ ಹಾಡಿ ಹೊಗಳಿದರು.
ಬಿಜೆಪಿಯ ಯಾವೊಬ್ಬ ಸಂಸದನೂ ಬರ ಪರಿಹಾರ ನೀಡಿ ಎಂದು ಕೇಳಲಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಬಡತನ ವಿರುದ್ಧ ಹೋರಾಟ ಮಾಡಿದ ವ್ಯಕ್ತಿ ಯಾರು ಅಂದ್ರೆ ಮೋದಿ ಮಾತ್ರ. ನಮ್ಮ ದೇಶವನ್ನ ಹಿಂದಕ್ಕೆ ತೆಗೆದುಕೊಂಡು ಹೋಗಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. 3 ಕೋಟಿ ಜನರಿಗೆ ಐದು ವರ್ಷದಲ್ಲಿ ಲಕಪತಿ ದಿದಿ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. 2019ರಲ್ಲಿ 290 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವು. ಎಲ್ಲವೂ ಮಾಡಿ ತೋರಿಸಿದ್ದೇವೆ. ಕಳೆದ 10 ವರ್ಷದಲ್ಲಿ ಕೆಂಪು ಕೋಟೆಯಲ್ಲಿ ಮೋದಿ ಮಾತನಾಡಿದ್ದು ತಾವು ಕೇಳಿರಬಹುದು. ಸ್ವಚ್ಚ ಭಾರತ್ ಯೋಜನೆಯಿಂದ ಎಲ್ಲಾ ಮನೆಗಳಿಗೆ ಶೌಚಾಲಯ ಆಗಿದೆ. ಮೋದಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಂಡಬೇಕು. ಯೂನಿಫಾರ್ಮ್ ಸಿವಿಲ್ ಕೋಡ್ ನಾವು ತೆಗೆದುಕೊಂಡು ಬರುತ್ತೇವೆ ಎಂದರು.
ಸಂವಿಧಾನದಲ್ಲಿ ಹೆಚ್ಚಿನ ಪವರ್ ಇರುವುದು ರಾಷ್ಟ್ರಪತಿಗೆ ಇದೆ. ಅಟಲ್ ಬಿಹಾರಿ ವಾಜಪೇಯಿ ಒಬ್ಬ ಮುಸ್ಲಿಂ ವ್ಯಕ್ತಿಯನ್ನ ರಾಷ್ಟ್ರಪತಿ ಮಾಡಿದ್ರು. ಅವರೇ ಎ.ಪಿ.ಜಿ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದ್ರು. ನಮಗೆ ಜಾತಿ ಮುಖ್ಯವಲ್ಲ ವ್ಯಕ್ತಿ ಮುಖ್ಯ. ಮುಂದಿನ ಐದು ವರ್ಷದಲ್ಲಿ ಬಡವರು ಇರಲು ಸಾಧ್ಯವೇ ಇಲ್ಲ. ಭಾರತಕ್ಕೆ ಪಕ್ಕದಲ್ಲೇ ವೈರಿಗಳು ಇದ್ದಾರೆ. ಒಂದು ಕಡೆ ಪಾಕಿಸ್ತಾನ ಮತ್ತು ಕಡೆ ಚೈನಾ ಇದೆ. ಈ ಚುನಾವಣೆ ಮೋದಿಗೆ ಓಟು ಮಾಡುವ ಚುನಾವಣೆ ನಮ್ಮ ಜನ್ಮದಲ್ಲಿ ಮೋದಿಯವರಂತ ನಾಯಕನ್ನ ನೋಡಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿಗೆ ಧೈರ್ಯವಾಗಿ ಇದ್ರೆ ಅಮೇಥಿಗೆ ಹೋಗಿ ಸ್ಪರ್ಧೆ ಮಾಡಲಿ, ಅದು ಬಿಟ್ಟು ನಾನು ವೈಯನಾಡಿಗೆ ಹೋಗುತ್ತೇನೆ ಅಂದ್ರೆ, ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಅಂತರೇ ಎಂದು ಹೇಳಿದರು.
ಪ್ರಧಾನಿ ಸ್ಥಾನದಲ್ಲಿ ರಾಹುಲ್ ಗಾಂಧಿ ಕುಳಿತು ಏನು ಕೆಲಸ ಮಾಡುತ್ತಾರೆ. ಇವತ್ತಿಗೂ ಕಾಂಗ್ರೆಸ್ ಗೆ ಪ್ರಧಾನಿ ಅಭ್ಯರ್ಥಿ ಯಾರು ಅಂತ ಗೊತ್ತಿಲ್ಲ. ಕಾಂಗ್ರೆಸ್ ನವರೇ ಹೇಳಲಿ ಪ್ರಧಾನಮಂತ್ರಿ ಯಾರು ಅಂತ ಹೇಳಲಿ ಎಂದು ಸವಾಲ್ ಅಣ್ಣಾಮಲೈ, ಕಾಂಗ್ರೆಸ್ ವಾರಂಟಿ ಇಲ್ಲದ ಪಕ್ಷವಾಗಿದೆ. ಸುಳ್ಳು ಹೇಳಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಪ್ರಚಾರ ನಡೆಸಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಎಲ್ಲಿಗೂ ಹೂಡಿಕೆ ಆಗುತ್ತಿಲ್ಲ. ತಮಿಳುನಾಡಿನಲ್ಲಿ ಒಂದು ನೋಟು ಕೊಟ್ಟು ಮತ್ತೊಂದು ನೋಟು ಪಡೆವುದು ತಮಿಳುನಾಡಿನಲ್ಲಿ ಇದೆ. ಯಾರು ಕೂಡ ನೇರವಾಗಿ ನರೇಂದ್ರ ಮೋದಿಗೆ ಓಟು ಮಾಡಲು ಆಗಲ್ಲ ಎಂದರು.
ಟಿಎಸ್‌ಎಸ್ ಅಕ್ರಮ: ಶಿರಸಿಯ 6 ಉದ್ಯಮಿಗಳ ನಿವಾಸದ ಮೇಲೆ ಐಟಿ ದಾಳಿ
ಸಂಸದ ಗೆಲ್ಲುವಿನ ಮುಖಾಂತರ ಮೋದಿಗೆ ಗೆಲ್ಲಿಸಿ ಎಂದ ಅಣ್ಣಾಮಲೈ, 10 ವರ್ಷ ಬರೀ ಮೋದಿಯವರ ಟ್ರೈಲರ್ ನೋಡಿದ್ರಿ. ಮುಂದೆ ಸಿನಿಮಾ ಬಂದೆ ಬರುತ್ತೆ, ಯೂನಿಫಾರ್ಮ್ ಸಿವಿಲ್ ಕೋಡ್ ಬರುತ್ತೆ, ಮೊದಲ ಓಟು ಮಾಡುವರಿಗೆ ಕಿವಿ ಮಾತು ಹೇಳಿದ ಅಣ್ಣಾಮಲೈ, ಮೊದಲು ಓಟು ಮಾಡುವರು ನಿಮ್ಮ ಜೊತೆಗೆ 10 ಜನರಿಗೆ ಕರೆದುಕೊಂಡು ಓಟು ಮಾಡಿ, ನಮ್ಮ ಪ್ರಧಾನಿ ದೇಶಕ್ಕಾಗಿ ಸೇವೆ ಮಾಡಲು ಬಿಸಿಲು ನೋಡಲ್ಲ, ಏನೇ ಇದ್ರೂ ದೇಶದ ರಕ್ಷಣೆಗಾಗಿ ಎಲ್ಲರೂ ಓಟು ಮಾಡಿ ಎಂದು ಅಣ್ಣಾಮಲೈ ಹೇಳಿದರು.