ಲೋಕ ಕದನದಲ್ಲಿ ಜಾರಕಿಹೊಳಿ ಬ್ರದರ್ಸ್ ಸಕ್ಸಸ್: ಹೊಸ ಇತಿಹಾಸ ನಿರ್ಮಿಸಿದ ಶೆಟ್ಟರ್; ಸಂಸತ್ ಪ್ರವೇಶಿಸಿದ ಪ್ರಿಯಂಕಾ
ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬವೂ ಒಂದು. ಯಾವುದೇ ಸರ್ಕಾರ ಇರಲಿ ಅಲ್ಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಸಚಿವರಾಗಿರುತ್ತಾರೆ. ಅಷ್ಟರ ಮಟ್ಟಿಗೆ ಜಾರಕಿಹೊಳಿ ಸಹೋದರರು ರಾಜ್ಯ ರಾಜಕಾರಣದಲ್ಲಿ ಪ್ರಭಾವ ಹೊಂದಿದ್ದಾರೆ.
ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣನ್ಯೂಸ್ ಬೆಳಗಾವಿ
ಬೆಳಗಾವಿ (ಜೂ.04): ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬವೂ ಒಂದು. ಯಾವುದೇ ಸರ್ಕಾರ ಇರಲಿ ಅಲ್ಲಿ ಜಾರಕಿಹೊಳಿ ಕುಟುಂಬದ ಓರ್ವ ಸದಸ್ಯ ಸಚಿವರಾಗಿರುತ್ತಾರೆ. ಅಷ್ಟರ ಮಟ್ಟಿಗೆ ಜಾರಕಿಹೊಳಿ ಸಹೋದರರು ರಾಜ್ಯ ರಾಜಕಾರಣದಲ್ಲಿ ಪ್ರಭಾವ ಹೊಂದಿದ್ದಾರೆ. ಇದೀಗ ಲೋಕಕದನದಲ್ಲೂ ತಮ್ಮ ಪ್ರಭಾವ ಏನು ಎಂಬುದನ್ನೂ ತೋರ್ಪಡಿಸಿದ್ದಾರೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಒಂದೆಡೆ ಪುತ್ರಿಯನ್ನು ಗೆಲ್ಲಿಸಿದ್ರೆ ಬೆಳಗಾವಿಯಲ್ಲಿ ಬಿಜೆಪಿಯಲ್ಲಿರುವ ಜಾರಕಿಹೊಳಿ ಬ್ರದರ್ಸ್ ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಐವರು ಸಹೋದರರನ್ನು ಹೊಂದಿರುವ ಜಾರಕಿಹೊಳಿ ಕುಟುಂಬ ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿತ್ತು. ಈ ಲೋಕಸಭೆ ಚುನಾವಣೆ ಮೂಲಕ ಜಾರಕಿಹೊಳಿ ಕುಟುಂಬದ ಎರಡನೇ ತಲೆಮಾರಿನ ಕುಡಿ ರಾಜಕೀಯ ಪ್ರವೇಶದ ಅಗ್ನಿ ಪರೀಕ್ಷೆಗಿಳಿದಿದ್ದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಕಣಕ್ಕಿಳಿದಿದ್ದರು. ಹಿರಿಯ ರಾಜಕಾರಣಿ ಅಣ್ಣಾಸಾಹೇಜ್ ಜೊಲ್ಲೆ ಎದುರು ಪ್ರಿಯಂಕಾ ಭರ್ಜರಿ ಗೆಲುವು ದಾಖಲಿಸಿ ಸಂಸತ್ ಪ್ರವೇಶಿಸುತ್ತಿದ್ದಾರೆ. ಆ ಮೂಲಕ ಎರಡನೇ ತಲೆಮಾರಿನ ಪ್ರಿಯಂಕಾ ಜಾರಕಿಹೊಳಿ ರಾಷ್ಟçರಾಜಕಾರಣಕ್ಕೆ ಎಂಟ್ರಿ ಕೊಟ್ಟಂತಾಗಿದೆ.
ಬೆಂ.ಗ್ರಾಮಾಂತರ ಅಭ್ಯರ್ಥಿ ಡಾ.ಮಂಜುನಾಥ್‌ರಿಂದ ಚುನಾವಣಾ ಆಯೋಗಕ್ಕೆ ಪತ್ರ: ಕಾರಣವೇನು?
ಪುತ್ರಿ ಬೆನ್ನಿಗೆ ಇಬ್ಬರು, ಶೆಟ್ಟರ್ ಬೆನ್ನಿಗೆ ಮೂವರು!: ಜಾರಕಿಹೊಳಿ ಕುಟುಂಬದ ಐವರು ಸಹೋದರರ ಪೈಕಿ ಇಬ್ಬರು ಸಹೋದರರು ಪುತ್ರಿಯ ಗೆಲುವಿಗೆ ಶ್ರಮಿಸಿದ್ರೆ ಮೂವರು ಜಗದೀಶ ಶೆಟ್ಟರ್ ಬೆನ್ನಿಗೆ ನಿಂತಿದ್ದರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಉದ್ಯಮಿ ಭೀಮಶಿ ಜಾರಕಿಹೊಳಿ ಜಗದೀಶ ಶೆಟ್ಟರ್ ಬೆಂಬಲಕ್ಕೆ ನಿಂತಿದ್ದರು. ಮತ್ತೊಂದೆಡೆ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಪ್ರಿಯಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಗೆದ್ದಿದ್ರೆ, ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಗೆದ್ದು ಬೀಗಿದ್ದಾರೆ. ಆ ಮೂಲಕ ಜಾರಕಿಹೊಳಿ ಬ್ರದರ್ಸ್ ಮತ್ತೊಮ್ಮೆ ಸಾಮರ್ಥ್ಯವೇನು ಎಂಬುದನ್ನು ತೋರ್ಪಡಿಸಿದ್ದಾರೆ. ಮತ್ತೊಂದೆಡೆ ಜಗದೀಶ ಶೆಟ್ಟರ್ ಹೊರಗಿನವರು, ಲೋಕಲ್ ಅಲ್ಲ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿತ್ತು. ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದ ಜಗದೀಶ ಶೆಟ್ಟರ್ ದೊಡ್ಡ ಗೆಲುವು ದಾಖಲಿಸುವ ಮೂಲಕ ಜಗದೀಶ ಶೆಟ್ಟರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಸೇಡು ತೀರಿಸಿಕೊಂಡ ರಮೇಶ ಜಾರಕಿಹೊಳಿ!: ಈ ಮೊದಲು ಜಿಲ್ಲಾ ರಾಜಕಾರಣದಲ್ಲಿ ರಮೇಶ ಜಾರಕಿಹೊಳಿ ಹಾಗೂ ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ಒಂದೇ ಪಕ್ಷದಲ್ಲಿದ್ದರು, ಆತ್ಮೀಯರೂ ಆಗಿದ್ದರು. ಕಳೆದ ಐದು ವರ್ಷಗಳಿಂದ ಉಭಯ ನಾಯಕರ ಮಧ್ಯೆ ಬಿರುಕು ಮೂಡಿದೆ. ಈ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಲಕ್ಷಿö್ಮ ಹೆಬ್ಬಾಳ್ಕರ್ ಮಣಿಸಲು ಪಣತೊಟ್ಟಿದ್ದರು. ಆದರೆ ರಮೇಶ ಜಾರಕಿಹೊಳಿ ಪ್ರಯತ್ನಕ್ಕೆ ಒಂದು ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಫಲ ಸಿಕ್ಕಿರಲಿಲ್ಲ. ಲಕ್ಷಿö್ಮ ಹೆಬ್ಬಾಳ್ಕರ್ ಅಭೂತಪೂರ್ವ ಗೆಲುವು ದಾಖಲಿಸುವ ಜೊತೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವೆಯೂ ಆಗಿದ್ದಾರೆ. ಆದರೆ ಈ ಲೋಕಸಭೆ ಚುಣಾವಣೆಯಲ್ಲಿ ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರೇ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಈ ಕಾರಣಕ್ಕೆ ಮೃಣಾಲ್ ಸೋಲಿಸುವ ಮೂಲಕ ಹಳೇ ಸೇಡನ್ನು ತೀರಿಸಿಕೊಳ್ಳಲು ರಮೇಶ ಜಾರಕಿಹೊಳಿ ರೂಪಿಸಿದ್ದ ತಂತ್ರವೂ ಫಲ ಸಿಕ್ಕಿದೆ.
ಹಗರಣಗಳಲ್ಲೇ ಮುಳುಗಿದ ಕಾಂಗ್ರೆಸ್ ಸರ್ಕಾರ: ಸಿ.ಪಿ.ಯೋಗೇಶ್ವರ್
ಸ್ವಕ್ಷೇತ್ರದಲ್ಲೂ ಮುಗ್ಗರಿಸಿದ ಹೆಬ್ಬಾಳ್ಕರ್!: ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರ ಬೆಳಗಾವಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇದು ಹಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ಪ್ರತಿನಿಧಿಸುವ ಕ್ಷೇತ್ರ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ೫೮ ಸಾವಿರ ಮತಗಳ ಅಂತರದಿದ ದೊಡ್ಡ ಗೆಲುವು ದಾಖಲಿಸಿದ್ದ ಹೆಬ್ಬಾಳ್ಕರ್ ಈ ಚುನಾವಣೆ ಮುಗ್ಗಿರಿಸದಂತಾಗಿದೆ. ಗ್ರಾಮೀಣ ಕ್ಷೇತ್ರದಲ್ಲೇ ಜಗದೀಶ ಶೆಟ್ಟರ್ ೫೦ ಸಾವಿರ ಮತಗಳ ಲೀಡ್ ಪಡೆದಿದ್ದು, ಮೃಣಾಲ್ ಹೀನಾಯ ಸೋಲಿಗೂ ಮುಖ್ಯ ಕಾರಣ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆ ನನ್ನ ಕುಟುಂಬದ ಕೈ ಬಿಡಲ್ಲ ಎಂದು ನಂಬಿದ್ದ ಹೆಬ್ಬಾಳ್ಕರ್‌ಗೆ ಅಲ್ಲಿನ ಮತದಾರ ನಿರಾಸೆ ಮೂಡಿಸಿದ್ದಾನೆ. ಬೆಳಗಾವಿ ಗ್ರಾಮೀಣ ಅಷ್ಟೇ ಅಲ್ಲ, ಬೆಳಗಾವಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಉತ್ತರ, ಬೈಲಹೊಂಗಲ ಹಾಗೂ ರಾಮದುರ್ಗದಲ್ಲಿ ಬಿಜೆಪಿ ಲೀಡ್ ಪಡೆದಿದೆ. ಈ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರಿದ್ದಾರೆ. ಆದರೂ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ ಆಗಿದೆ.