ಪ್ರಜ್ವಲ್ ರೇವಣ್ಣ ಪರ ವಿಜಯೇಂದ್ರ ಮತಯಾಚನೆ: ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಜೆಪಿ ರಾಜ್ಯಾಧ್ಯಕ್ಷ!
ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಮತಯಾಚನೆ ಮಾಡಿದರು.
ಹಾಸನ (ಏ.15): ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದು ಮತಯಾಚನೆ ಮಾಡಿದರು. ಹಾಸನ ಸಕಲೇಶಪುರ ರೋಡ್ ಶೋನಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಬಂದಿರೊ ಸರ್ಕಾರ 18-20 ಸ್ಥಾನ ಗೆಲ್ಲೋ ಭ್ರಮೆಯಲ್ಲಿ ಕಾಂಗ್ರೆಸ್ ಇತ್ತು. ಹಾಸನದಲ್ಲಿ ಬಿಜೆಪಿ ಜೆಡಿಎಸ್ ಒಂದಾಗಿ ನಮ್ಮ ಅಭ್ಯರ್ಥಿ ಗೆಲ್ತಾರೆ ಎಂದರು.
ಅಧಿಕಾರ ದರ್ಪದ ಕಾಂಗ್ರೆಸ್‌ಗೆ ನಾವು ಉತ್ತರ ಕೊಡಬೇಕಿದೆ. ವಿಶ್ವದಲ್ಲಿ ನರೇಂದ್ರ ಮೋದಿ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪಾಪದ ಕೂಸು 370 ಆಗಿತ್ತು. ಇದರಿಂದ ಸಾವಿರಾರು ಯೋಧರ ಹತ್ಯೆ ಆಗಿತ್ತು. ಈಗ ಅದನ್ನು ಕಿತ್ತಾಗಿ ಶಾಂತಿ ಸ್ಥಾಪನೆ ಮಾಡಲಾಗಿದೆ. ಕಾಂಗ್ರೆಸ್ ಅವರು ಕೇಂದ್ರ ದಿಂದ ಹಣ ಬಂದಿಲ್ಲ ಅಂತಾರೆ. ಕಳೆದ ಹತ್ತು ವರ್ಷದಲ್ಲಿ 4.85 ಲಕ್ಷ ಕೋಟಿ ಅತ್ಯದಿಕ ಹಣ ಬಂದಿದೆ. ಈ ಸರ್ಕಾರ ಬಂದಮೇಲೆ ಒಂದೇ ಒಂದು ಅಭಿವೃದ್ಧಿ ಕೆಲಸ ಆಗ್ತಾ ಇಲ್ಲ ಎಂದು ತಿಳಿಸಿದರು.
ರುಚಿಯಿದ್ದ 2 ವಡೆ ತಿಂದಿದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು: ಸಚಿವ ಜಮೀರ್ ಅಹ್ಮದ್
ಮುಂದಿನ ಎರಡು ಮೂರು ತಿಂಗಳು ಸರ್ಕಾರಿ ನೌಕರರಿಗೆ ಸಂಬಳಕೊಡಲು ಆಗದ ಪರಿಸ್ಥಿತಿ ಬಂದಿದೆ. ಇಂತಹ ದುಷ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ನಮ್ಮ ಹಿಂದುಗಳು ಮೆರವಣಿಗೆ ಮಾಡೋಕೆ ಹೋದ್ರೆ ಇವರು ಅಡ್ಡಿ ಮಾಡ್ತಾರೆ. ಸಿದ್ದರಾಮಯ್ಯ ಕೇವಲ ಅಲ್ಪ ಸಂಖ್ಯಾತರ ಹಿಂದೆ ಹೊರಟಿದ್ದಾರೆ. ಇವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಗ್ಯಾರಂಟಿ ಭ್ರಮೆಯಲ್ಲಿ ಇರೋರಿಗೆ ಕೇಂದ್ರದ ಯೋಜನೆ ಬಗ್ಗೆ ವಿವರಿಸಬೇಕಿದೆ ಎಂದು ವಿಜಯೇಂದ್ರ ಹೇಳಿದರು.