Asianet Suvarna News Asianet Suvarna News

ಇಂದೋರ್ ನಲ್ಲಿ ಬರೋಬ್ಬರಿ 2 ಲಕ್ಷ ನೋಟಾ, 1 ಮಿಲಿಯನ್‌ ಅಂತರದಲ್ಲಿ ಗೆದ್ದು ಬೀಗಿದ ಬಿಜೆಪಿ ಲಾಲ್ವಾನಿ ಇತಿಹಾಸ!

ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಮಾತ್ರವಲ್ಲ ಬಿಜೆಪಿಯ ಶಂಕರ್ ಲಾಲ್ವಾನಿ ಇಡೀ ದೇಶದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

Lok Sabha Election results 2024 BJP Indore Candidate Shankar Lalwani Wins By Over ten Lakh Votes gow
Author
First Published Jun 4, 2024, 9:14 PM IST | Last Updated Jun 4, 2024, 9:14 PM IST

ನವದೆಹಲಿ (ಜೂ.4): ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಮಾತ್ರವಲ್ಲ ಬಿಜೆಪಿಯ ಶಂಕರ್ ಲಾಲ್ವಾನಿ ಇಡೀ ದೇಶದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ತಮ್ಮ ಎದುರಾಳಿ ಬಹುಜನ ಸಮಾಜವಾದಿ ಪಕ್ಷದ  ಸಂಜಯ್ ವಿರುದ್ಧ 10 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಸಂಜಯ್ ಅವರಿಗೆ 51,659 ಸಾವಿರ ಮತಗಳಷ್ಟೇ ಸಿಕ್ಕಿದೆ.

ವಿಶೇಷವೆಂದರೆ ಈ ಕ್ಷೇತ್ರದಲ್ಲಿ 2 ಲಕ್ಷದ 18 ಸಾವಿರಕ್ಕೂ ಹೆಚ್ಚು  ಮತಗಳು ನೋಟಾ ಬಿದ್ದಿದೆ. ಇದಕ್ಕೆ ಕಾರಣವಿದೆ ಲಾಲ್ವಾನಿ ಅವರ ಗೆಲುವಿನ ಅಂತರವು ಬಹುಶಃ ದೇಶದ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು ಎಂದು ಪರಿಗಣಿಸಲಾಗಿದೆ. ಇಂದೋರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ  ಅಕ್ಷಯ್ ಕಾಂತಿ ಬಾಮ್​  ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರಿದ್ದರು. ಹೀಗಾಗಿ ಕಾಂಗ್ರೆಸ್ ಗೆ ಅಭ್ಯರ್ಥಿಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಬಿಜೆಪಿಯ ಹಿರಿಯ ನಾಯಕಿ, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ಕಾಂಗ್ರೆಸ್ ಅಭ್ಯರ್ಥಿಯ ಕೊನೆ ಘಳಿಗೆಯ ನಡೆಯನ್ನು ಖಂಡಿಸಿ ಇಲ್ಲಿಯವರೆಗೆ ಬಿಜೆಪಿಗೆ ಮತ ಹಾಕುತ್ತಿದ್ದೆವು. ಈ ಬಾರಿ ನೋಟಾಕ್ಕೆ ಮತ ಹಾಕುತ್ತೇವೆ ಎಂದು ಘೋಷಿಸಿದ್ದರು.   ನೋಟಾಗೆ ಮತ ಹಾಕುವಂತೆ ಕಾಂಗ್ರೆಸ್ ಕೂಡ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿತ್ತು. ಇದು ಈಗ ಸಕ್ಸಸ್‌ ಆಗಿದೆ. ಲಾಲ್ವಾನಿ ಅವರು 2019 ರ ಲೋಕಸಭಾ ಚುನಾವಣೆಗೆ ಮೊದಲು ಸ್ಪರ್ಧಿಸಿದ್ದರು.  2019 ರ ಲೋಕಸಭೆ ಚುನಾವಣೆಯಲ್ಲಿ 5.47 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.  

Latest Videos
Follow Us:
Download App:
  • android
  • ios