Asianet Suvarna News Asianet Suvarna News

ಮಹಾರಾಜ ಯದುವೀರ್‌ಗೆ 7,95,503 ಮತ ಹಾಕಿದ ಜನತೆ; ಲೀಡ್ ಕೊಟ್ಟ ಕ್ಷೇತ್ರ ಯಾವುದು ಗೊತ್ತಾ?

ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬರೋಬ್ಬರಿ 7,95,503 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

Lok Sabha Election result Mysuru Yaduveer Krishnadatta Chamaraja Wadiyar won against M Lakshman sat
Author
First Published Jun 4, 2024, 9:24 PM IST

ಮೈಸೂರು (ಜೂ.04): ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬರೋಬ್ಬರಿ 7,95,503 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ, 8 ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ಗೆ ಲೀಡ್ ಕೊಟ್ಟಿದ್ದಾರೆ. ನರಸಿಂಹರಾಜ ಮತ್ತು ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಪಡೆದುಕೊಂಡಿದೆ.

ಮೈಸೂರು-ಕೊಡಗು ಕ್ಷೇತ್ರದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಒಟ್ಟು 7,95,503 ಮತಗಳನ್ನು ಪಡೆದಿದ್ದಾರೆ. ಇವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ 6,56,241 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಯದುವೀರ್ ಅವರು 1,39,262 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬಂದಿವೆ ಎಂಬುದರ ಸ್ಪಷ್ಟ ಮಾಹಿತಿ ಇಲ್ಲಿದೆ ನೋಡಿ...

ಡಾ. ಮಂಜುನಾಥ್ ಒಳ್ಳೆಯ ವ್ಯಕ್ತಿ ಅಂತ ಜನ ಗೆಲ್ಲಿಸಿದ್ದಾರೆ, ಬಿಜೆಪಿಗೆ ಓಟ್ ಹಾಕಿಲ್ಲ: ಡಿ.ಕೆ.ಶಿವಕುಮಾರ್

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ ಚುನಾವಣೆ ಫಲಿತಾಂಶದ ವಿವರ
01) ಮಡಿಕೇರಿ ವಿಧಾನ ಸಭಾ ಕ್ಷೇತ್ರ
ಬಿಜೆಪಿ :-  108402
ಕಾಂಗ್ರೆಸ್ :- 66994
ಬಿಜೆಪಿ ಲೀಡ್ 41408

02) ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ
ಬಿಜೆಪಿ  :- 99804
ಕಾಂಗ್ರೆಸ್ :- 67353
ಬಿಜೆಪಿ ಲಿಡ್ 32451

03) ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರ
ಬಿಜೆಪಿ :- 71237
ಕಾಂಗ್ರೆಸ್ :- 82981
ಕಾಂಗ್ರೆಸ್ ಲೀಡ್ 11744

04) ಹುಣಸೂರು ವಿಧಾನ ಸಭಾ ಕ್ಷೇತ್ರ
ಬಿಜೆಪಿ :- 95266
ಕಾಂಗ್ರೆಸ್ :- 92198
ಬಿಜೆಪಿ ಲೀಡ್ 3068

05) ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ
ಬಿಜೆಪಿ :- 143327
ಕಾಂಗ್ರೆಸ್ :- 10683
ಬಿಜೆಪಿ ಲೀಡ್ 37244

06) ಕೃಷ್ಣರಾಜ ವಿಧಾನಸಭಾ ಕ್ಷೇತ್ರ
ಬಿಜೆಪಿ :- 104596
ಕಾಂಗ್ರೆಸ್ :- 50171
ಬಿಜೆಪಿ ಲೀಡ್ 54425

07) ಚಾಮರಾಜ ವಿಧಾನ ಸಭಾ ಕ್ಷೇತ್ರ
ಬಿಜೆಪಿ :- 105480
ಕಾಂಗ್ರೆಸ್ :- 49083
ಬಿಜೆಪಿ ಲೀಡ್ 56397

08) ನರಸಿಂಹರಾಜ ವಿಧಾನ ಸಭಾ ಕ್ಷೇತ್ರ
ಬಿಜೆಪಿ :- 62279
ಕಾಂಗ್ರೆಸ್ : 138876
ಕಾಂಗ್ರೆಸ್ ಲೀಡ್ 76597

Latest Videos
Follow Us:
Download App:
  • android
  • ios