ನಮ್ಮದು ತುಕ್ಡೇ ಗ್ಯಾಂಗ್ ಆದ್ರೆ ಎನ್‌ಡಿಎ ಯಾವ ಗ್ಯಾಂಗ್: ಸತೀಶ್ ಜಾರಕಿಹೊಳಿ
ನಮ್ಮದು ತುಕ್ಡೇ ತುಕ್ಡೇ ಗ್ಯಾಂಗ್ ಆದರೆ, ಮೋದಿಯವರ ಎನ್‌ಡಿಎ ಮೈತ್ರಿಕೂಟದಲ್ಲಿ 36 ಪಕ್ಷ ಇದೆ ಅಲ್ವಾ, ಅವರದ್ದು ಯಾವ ಗ್ಯಾಂಗ್? ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಕೂಡ್ಲಿಗಿ (ಏ.15): ನಮ್ಮದು ತುಕ್ಡೇ ತುಕ್ಡೇ ಗ್ಯಾಂಗ್ ಆದರೆ, ಮೋದಿಯವರ ಎನ್‌ಡಿಎ ಮೈತ್ರಿಕೂಟದಲ್ಲಿ 36 ಪಕ್ಷ ಇದೆ ಅಲ್ವಾ, ಅವರದ್ದು ಯಾವ ಗ್ಯಾಂಗ್? ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ತುಕ್ಡೇ ತುಕ್ಡೇ ಗ್ಯಾಂಗ್ ಎಂಬ ಪಿಎಂ ಮೋದಿ ಮಾತಿಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ಕಾಪಿ ಮಾಡಿ, ಗ್ಯಾರಂಟಿ ಅಂತ ಬಿಜೆಪಿಯವರು ಸಹ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ನಮ್ಮ ನಾಯಕರೆಲ್ಲರೂ ಹೇಳಿದ್ರು, ಅದರಂತೆಯೇ ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದರು.\
ಇಂದಿನಿಂದ ಎಚ್‌ಡಿಕೆ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಜ್ಜು!
ಗೋ ಬ್ಯಾಕ್ ಸಲ್ಲದು:
ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ನಾಸೀರ್ ಹುಸೇನ್ ಅವರದ್ದೇನೂ ತಪ್ಪಿಲ್ಲ. ಅದು ತನಿಖೆಯಾಗುತ್ತಿದೆ. ಈ ಸಮಯದಲ್ಲಿ ನಾಸಿರ್ ಅವರಿಗೆ ಬಳ್ಳಾರಿಯಲ್ಲಿ ಗೋ ಬ್ಯಾಕ್ ಹೇಳಿರುವುದು ಸರಿಯಲ್ಲ ಎಂದರು.
ನಾವು ಬಳ್ಳಾರಿಗೆ ಪ್ರಚಾರಕ್ಕೆ ಬಂದಿದ್ದೇವೆ, ನಮಗೆ ಕಾಂಗ್ರೆಸ್ ಪರ ವಾತಾವರಣವಿದೆ. ತುಕಾರಾಂ ಗೆಲ್ತಾರೆ ಅನ್ನೋ ನಿರೀಕ್ಷೆ ಇದೆ. ನಮಗೆ ಎಲ್ಲಿ ಸಮಯ ಸಿಗ್ತಿದೆಯೋ ಅಲ್ಲಿ ಪ್ರಚಾರ ಮಾಡ್ತಿದ್ದೇವೆ. ನಮ್ಮ ಅಧ್ಯಕ್ಷರು ಕೂಡ ಬರ್ತಾರೆ, ಸಿಎಂ ಸಿದ್ದರಾಮಯ್ಯ ಕೂಡ ಬರ್ತಾರೆ. ಪ್ರಚಾರ ಮಾಡ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ಸಿಗರು ತುಕ್ಡೆ ಗ್ಯಾಂಗ್ ಸುಲ್ತಾನರು: ಮೋದಿ ಕಿಡಿ
ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾಗುವ ಪ್ರಶ್ನೆಯೇ ಇಲ್ಲ. ಅವರಿಗೆ ಜನಾದೇಶವಿದೆ, ಬದಲಾವಣೆ ಸಾಧ್ಯವಿಲ್ಲ. ಹೈಕಮಾಂಡ್ ಸಿಎಂ ಮಾಡಿದೆ, ಅವರಿಗೆ ಉತ್ತಮ ಮುಖ್ಯಮಂತ್ರಿ ಎಂಬ ಬಿರುದು ಕೂಡ ಇದೆ ಎಂದರು. ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿದರು.