ಈ ಸಲ ಟಿಕೆಟ್ ಬೇಡ ಎಂದಿದ್ದೆ, ಹೈಕಮಾಂಡ್ ಕೊಟ್ಟಿದೆ: ಸಂಸದ ರಮೇಶ್ ಜಿಗಜಿಣಗಿ

ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಣೆ ಬಳಿಕ ಜಿಲ್ಲೆಯಲ್ಲಿ ಸಂಚಾರ ಮಾಡುತ್ತಿದ್ದೇನೆ. 'ನೀವು ಬರಬೇಡಿ ನಾವು ಮತ ಹಾಕುತ್ತೇವೆ' ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದ್ರೂ ಕೂಡ ಚುನಾವಣೆ ಗೆಲುವಿಗಾಗಿ ನಾನು ಪ್ರಚಾರದಲ್ಲಿ ತೊಡಗಿದ್ದೇನೆ ಎಂದು ಹಾಲಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

Lok sabha election 2024 Vijayapur MP Ramesh jigajinagi stats at vijayapur rav

ವಿಜಯಪುರ (ಮಾ.22): ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಣೆ ಬಳಿಕ ಜಿಲ್ಲೆಯಲ್ಲಿ ಸಂಚಾರ ಮಾಡುತ್ತಿದ್ದೇನೆ. 'ನೀವು ಬರಬೇಡಿ ನಾವು ಮತ ಹಾಕುತ್ತೇವೆ' ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದ್ರೂ ಕೂಡ ಚುನಾವಣೆ ಗೆಲುವಿಗಾಗಿ ನಾನು ಪ್ರಚಾರದಲ್ಲಿ ತೊಡಗಿದ್ದೇನೆ ಎಂದು ಹಾಲಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ವಿಜಯಪುರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ತಪ್ಪಿಸಲು ಹಲವರು ಪ್ರಯತ್ನ ಮಾಡಿದ್ರು. ಆದರೆ ಕೊನೆಗೆ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ ಎಂದರು ಇದೇ ವೇಳೆ 'ಇದು ನಿಮ್ಮ ಕೊನೆ ಚುನಾವಣೆಯಾ?'ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಹಲವು ಸಭೆಗಳಲ್ಲಿ ಈಗಾಗಲೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೇನೆ. 90 ವರ್ಷವಾದರೂ ನನಗೆ ಟಿಕೆಟ್ ಬೇಕು ಅನ್ನೋಕಾಗುತ್ತಾ? ಈ ಸಲವೇ ನನಗೆ ಟಿಕೆಟ್‌ ಬೇಡ ಎಂದು ನಾನು ನನ್ನ ಮಕ್ಕಳು ಸೇರಿ ನಿರ್ಧಾರ ಮಾಡಿದ್ದೆವು. ಆದರೆ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಹೀಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.

ಟಿಕೆಟ್ ಫೈನಲ್ ಆಯ್ತು..ಮತದಾರರ ಒಲವು ಯಾರ ಕಡೆ: ಜನ ಜಿಗಜಿಣಗಿ ಕೆಲಸಕ್ಕೆ ಕೊಟ್ಟ ಮಾರ್ಕ್ಸ್ ಎಷ್ಟು..?

 

ಇನ್ನು ಈಶ್ವರಪ್ಪ ಪುತ್ರನಿಗೆ ಟಿಕೆಟ್ ಮಿಸ್ ಆದ ಬಳಿಕ ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಗಜಿಣಗಿ, ಈಶ್ವರಪ್ಪ ಸಂಘಪರಿವಾರದಿಂದ ಬಂದವರು. ನಾನು ಸಂಘಪರಿವಾರದಿಂದ ಬಂದವನಲ್ಲ‌. ರಾಮಕೃಷ್ಣ ಹೆಗಡೆ, ಜೆಎಚ್ ಪಟೇಲ್ ರ ಗರಡಿಯಲ್ಲಿ ಬೆಳೆದವನು. ನಾನು ಸಂಘಪರಿವಾರದ ಬಗ್ಗೆ ಈಶ್ವರಪ್ಪ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಎನ್ನುವ ಮೂಲಕ ಈಶ್ವರಪ್ಪ ಕುರಿತು ಮಾತಾಡಲು ನಿರಾಕರಿಸಿದರು.

Latest Videos
Follow Us:
Download App:
  • android
  • ios