ಮಹಾರಾಷ್ಟ್ರದಲ್ಲಿ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಅಜಿತ್ ಪವಾರ್ ಸೇರಿ 9 ಎನ್‌ಸಿಪಿ ನಾಯಕರು ಎನ್‌ಡಿಎ ಸೇರಿಕೊಂಡಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಒಂದೊಂದ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಇದೀಗ 2024ರ ಲೋಕಸಭಾ ಚನಾವಣೆ ಕುರಿತು ಎನ್‌ಸಿಪಿ ಮುಖ್ಯಸ್ಥ ಶರದದ್ ಪವಾರ್ ನುಡಿದ ಭವಿಷ್ಯ ಬಯಲಾಗಿದೆ. 

ಮುಂಬೈ(ಜು.02) ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಒಡೆದು ಹೋಳಾಗಿದೆ. ಅಜಿತ್ ಪವಾರ್ ಸೇರಿದಂತೆ 9 ನಾಯಕರು ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಇತ್ತ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸರ್ಕಾರದ ಸಚಿವರಾಗಿ ನೇಮಕೊಂಡಿದ್ದಾರೆ. ಶರದ್ ಪವಾರ್ ಕಟ್ಟಿ ಬೆಳೆಸಿದ ಎನ್‌ಸಿಪಿ ಪಕ್ಷ ಇದೀಗ ಬರಿದಾಗಿದೆ. ಅಜಿತ್ ಪವರ್ ಉಪಮುಖ್ಯಮಂತ್ರಿಯಾದ ಬೆನ್ನಲ್ಲೇ, ಪ್ರಧಾನಿ ಮೋದಿ ಪ್ರಭಾವಿ ನಾಯಕತ್ವದಿಂದ ಎನ್‌ಡಿಎ ಕೂಟ ಸೇರಿಕೊಂಡಿರುವುದಾಗಿ ಹೇಳಿದ್ದಾರೆ. ಇತ್ತ ಅಜಿತ್ ಹಾದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಛಗನ್ ಬುಜಬಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶರದ್ ಪವಾರ್ 2024ರ ಲೋಕಸಭಾ ಚುನಾವಣೆ ಭವಿಷ್ಯ ನುಡಿದಿದ್ದರು. 2024ರಲ್ಲೂ ಪ್ರಧಾನಿ ಮೋದಿಯೇ ಮತ್ತೆ ಆರಿಸಿ ಬರಲಿದ್ದಾರೆ. ವಿಪಕ್ಷಗಳ ನಡುವೆ ಒಗ್ಗಟ್ಟಿಲ್ಲದ ಕಾರಣ ಬಿಜೆಪಿ ಮಣಿಸುವುದು ಅಸಾಧ್ಯ ಎಂದು ಶರದ್ ಪವಾರ್ ಹೇಳಿದ್ದರು. ಶರದ್ ಪವಾರ್ ಈ ಮಾತುಗಳನ್ನು ಇದೀಗ ಛಗನ್ ಬುಜ್‌ಬಲ್ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಶರದ್ ಪವಾರ್ ಪ್ರಧಾನಿ ಮೋದಿ ಆಡಳಿತ, ಭಾರತದ ಬದಲಾದ ರೀತಿಯನ್ನು ಕೊಂಡಾಡಿದ್ದರು. ಭಾರತದ ಅಭಿವೃದ್ಧಿ, ಭದ್ರತೆ ದೃಷ್ಟಿಯಿಂದ ಪ್ರಧಾನಿ ಮೋದಿಯನ್ನು ಬೆಂಬಲಿಸುವ ರೀತಿ ಮಾತನಾಡಿದ್ದರು. 15 ರಾಜಕೀಯ ಪಕ್ಷಗಳ 32 ನಾಯಕರು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಹೋರಾಡಲು ಮುಂದಾಗಿದ್ದಾರೆ. ವಿಪಕ್ಷ ಮೈತ್ರಿ ಮೂಲಕ ಹೋರಾಟದ ಸೂಚನೆ ನೀಡಿದ್ದಾರೆ. ಆದರೆ ವಿಪಕ್ಷಗಳ ನಡುವಿನ ಒಡಕು ಈ ಹೋರಾಟಕ್ಕೆ ಯಶಸ್ಸ ನೀಡುವುದಿಲ್ಲ ಎಂದು ಶರದ್ ಪವಾರ್ ಅಭಿಪ್ರಾಯ ಪಟ್ಟಿದ್ದರು. ಈ ಸ್ಫೋಟಕ ಮಾಹಿತಿಯನ್ನು ಛಗನ್ ಬುಜ್‌ಬಲ್ ಬಾಯ್ಬಿಟ್ಟಿದ್ದಾರೆ.

ಹೆಸರು- ಚಿಹ್ನೆ ನಮ್ಮದು, ಡಿಸಿಎಂ ಆದ ಬೆನ್ನಲ್ಲೇ ಎನ್‌ಸಿಪಿಗೆ ಮತ್ತೊಂದು ಶಾಕ್ ನೀಡಿದ ಅಜಿತ್ ಪವಾರ್!

ಇತ್ತ ಅಜಿತ್ ಪವಾರ್ ಕೂಡ ಪ್ರಧಾನಿ ಮೋದಿಯನ್ನು ಪ್ರಶಂಸಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ನೂತನ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್, ಮೋದಿ ನಾಯಕತ್ವನ್ನು ಕೊಂಡಾಡಿದ್ದಾರೆ. ದೇಶ ವಿದೇಶದಲ್ಲಿ ಭಾರತದ ಗರಿಮೆ ಹೆಚ್ಚಾಗಿದೆ. 1984ರ ಬಳಿಕ ಯಾವ ನಾಯಕನೂ ಏಕಾಂಗಿಯಾಗಿ ಭಾರದ ಛರಿಷ್ಮಾ ಬದಲಾಯಿಸಿದ ಊದಾಹರಣೆ ಇಲ್ಲ. ಕಳೆದ 9 ವರ್ಷದಲ್ಲಿ ಭಾರತದಲ್ಲಿ ಅಗಿರುವ ಬದಲಾವಣೆ, ಅಭಿವೃದ್ಧಿ ಮೋದಿ ಆಡಳಿತಕ್ಕ ಸಾಕ್ಷಿಯಾಗಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಗೆ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಡಲು ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಬೃಹತ್ ಸಭೆ ನಡೆಸಿತ್ತು. ಕಾಂಗ್ರೆಸ್, ಎನ್‌ಸಿಪಿ, ಆಪ್, ಆರ್‌ಜೆಡಿ, ಜೆಡಿಯು, ಸಮಾಜವಾದಿ ಸೇರಿದಂತೆ 15 ರಾಜಕೀಯ ಪಕ್ಷಗಳು ಒಗ್ಗಟ್ಟಿನ ಮಂತ್ರ ಪಠಿಸಿತ್ತು. ಇದೀಗ ಎರಡನೇ ವಿಪಕ್ಷ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ವಿಪಕ್ಷ ಮೈತ್ರಿ ಸಭೆ ನಡೆದ ಕೆಲವೇ ದಿನಗಳಲ್ಲಿ ಟಿಎಂಸಿ, ಸಿಪಿಎಂ,ಆಮ್ ಆದ್ಮಿ ಪಾರ್ಟಿ ಮೈತ್ರಿಯಿಂದ ಹೊರನಡೆಯುವ ಮಾತುಗಳನ್ನಾಡಿದೆ.

'ಮಹಾ' ಡಿಸಿಎಂ ಆಗಿ ಅಜಿತ್‌ ಪವಾರ್‌ ಪ್ರಮಾಣ ವಚನ ಸ್ವೀಕಾರ; ಶರದ್‌ ಪವಾರ್‌ಗೆ ಮತ್ತೆ ಸೆಡ್ಡು; 9 ಎನ್‌ಸಿಪಿ ನಾಯಕರ ಸಾಥ್‌

ಒಂದಾಗಬೇಕಿದ್ದ ಕಾಂಗ್ರೆಸ್‌, ಟಿಎಂಸಿ ಮತ್ತು ಸಿಪಿಎಂ ಪಕ್ಷಗಳು ತಮ್ಮ ತಮ್ಮ ಪಕ್ಷಗಳ ಹಿತದೃಷ್ಟಿಮುಂದಿಟ್ಟುಕೊಂಡು ಸೋಮವಾರ ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಇದು ಇನ್ನು ಕೇವಲ 10 ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ವಿಪಕ್ಷಗಳು ಅದೆಷ್ಟರ ಮಟ್ಟಿಗೆ ಒಗ್ಗಟ್ಟು ಪ್ರದರ್ಶಿಸಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ದೆಹಲಿಯಲ್ಲಿ ಕೇರಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸುಧಾಕರನ್‌ ಅವರನ್ನು ಭೇಟಿ ಮಾಡಿದ ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ, ನಾವು ಬೆದರಿಕೆ ಮತ್ತು ದ್ವೇಷದ ರಾಜಕೀಯಕ್ಕೆ ಬೆದರುವುದಿಲ್ಲ ಎಂದು ಕೇರಳದ ಆಡಳಿತಾರೂಢ ಸಿಪಿಎಂಗೆ ನೇರ ಎಚ್ಚರಿಕೆ ನೀಡಿದ್ದಾರೆ. ಸುಧಾಕರನ್‌ ವಿರುದ್ಧ ಇತ್ತೀಚೆಗೆ ಕೇರಳ ಸರ್ಕಾರ ವಂಚನೆ ಕೇಸು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್‌ ಈ ಎಚ್ಚರಿಕೆ ನೀಡಿದ್ದಾರೆ.