ಗಣವೇಷದಲ್ಲೇ ಕಾಂಗ್ರೆಸ್ ಸೇರಿದ ಆರೆಸ್ಸೆಸ್ ಕಾರ್ಯಕರ್ತ! ಸೇರ್ಪಡೆಯಾಗುತ್ತಲೇ ಮೋದಿ ವಿರುದ್ಧ ವಾಗ್ದಾಳಿ!

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬುಧವಾರ ನಡೆದ ಬಾಗಲಕೋಟೆ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರ ಮತಯಾಚನೆ ಸಭೆಯಲ್ಲಿ ನಿಂಗಬಸಪ್ಪ ಬಾಣದ ಅವರು ಆರೆಸ್ಸೆಸ್ ಗಣವೇಶದಲ್ಲಿ ಬಂದು ಕಾಂಗ್ರೆಸ್‌ ಸೇರ್ಪಡೆಯಾದರು. ಕಾಂಗ್ರೆಸ್ ನಾಯಕರು ನಿಂಗಬಸಪ್ಪಗೆ ಗಾಂಧಿ ಟೋಪಿ, ಕಾಂಗ್ರೆಸ್ ಬಾವುಟ ನೀಡಿ ಬರಮಾಡಿಕೊಂಡರು.

Lok sabha election 2024 RSS Activist Ningabasappa join congress at naragunda at gadag rav

ನರಗುಂದ  (ಏ.11) : ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬುಧವಾರ ನಡೆದ ಬಾಗಲಕೋಟೆ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರ ಮತಯಾಚನೆ ಸಭೆಯಲ್ಲಿ ನಿಂಗಬಸಪ್ಪ ಬಾಣದ ಅವರು ಆರೆಸ್ಸೆಸ್ ಗಣವೇಶದಲ್ಲಿ ಬಂದು ಕಾಂಗ್ರೆಸ್‌ ಸೇರ್ಪಡೆಯಾದರು. ಕಾಂಗ್ರೆಸ್ ನಾಯಕರು ನಿಂಗಬಸಪ್ಪಗೆ ಗಾಂಧಿ ಟೋಪಿ, ಕಾಂಗ್ರೆಸ್ ಬಾವುಟ ನೀಡಿ ಬರಮಾಡಿಕೊಂಡರು.

ಕಾಂಗ್ರೆಸ್ ಸೇರುತ್ತಲೇ ಬಿಜೆಪಿ ವಿರುದ್ಧ ವಾಗ್ದಾಳಿ!

ಬಳಿಕ ಮಾತನಾಡಿ ಅವರು, ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದರಿಂದ ಆ ಪಕ್ಷದಿಂದ ನಾನು ಬೇಸರವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ. ನಾನು 30 ವರ್ಷಗಳಿಂದ ಆರೆಸ್ಸೆಸ್ ಶಾಖೆಯಲ್ಲಿ ದೇಶ, ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದೇನೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ತರಲು ಅಳಿಲು ಸೇವೆ ಸಲ್ಲಿಸಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಭ್ರಷ್ಟಾಚಾರ ಮತ್ತು ದಬ್ಬಾಳಕೆ ನೋಡಿ ಬೇಸರಗೊಂಡು ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು. 

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫಿಕ್ಸಿಂಗ್! ದಿಂಗಾಲೇಶ್ವರ ಶ್ರೀ ಹೇಳಿದ್ದೇನು?

ಬಿಜೆಪಿ ಪಕ್ಷ 40 ಪರ್ಸೆಂಟ್ ಅಲ್ಲ, 70 ಪರ್ಸೆಂಟ್ ಭ್ರಷ್ಟಾಚಾರ ಮಾಡುವ ಪಕ್ಷವಾಗಿದೆ. ಹೀಗಾಗಿ ಜನರು ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತಿದ್ದರು. ಕಾಂಗ್ರೆಸ್ ಗ್ಯಾರಂಟಿಯಿಂದ ಯೋಜನೆ ಜಾರಿ ಮಾಡದಿದ್ರೂ ಸಹ ಬಿಜೆಪಿ ಸೋಲುತ್ತಿತ್ತು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಡೆಯುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

'ರಾಜನೇ ಮತ್ತೆ ರಾಜನಾಗುವ ಯೋಗ..' ಗುಳೇದಗುಡ್ಡದ ಯುಗಾದಿ ಭವಿಷ್ಯವಾಣಿ! ಮತ್ತೊಮ್ಮೆ ಪ್ರಧಾನಿಯಾಗ್ತಾರಾ ಮೋದಿ?.

ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ತರುತ್ತೇನೆ ಅಂತಾ ಹೇಳ್ತಾರೆ ಆದರೆ ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಮುಳುಗಿದ್ರೂ ಆದ್ರೆ ಕಾಂಗ್ರೆಸ್ ನಾಯಕರ ಮೇಲೆ ಐಟಿ ‌ದಾಳಿ ಮಾಡಿಸುತ್ತಾರೆ ಎಂದು ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios