ಕೋಲಾರ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುನಿಗಂಗಾಧರ್ ಸಿದ್ದತೆ!

ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರಿಗೆ ಒಂದರ ಮೇಲೊಂದು ಟೆಂಕ್ಷನ್ ಶುರುವಾಗಿದೆ. ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವಿನ ಬಣ ಬಡಿದಾಟದ ಕಾಟ ಒಂದು ಕಡೆಯಾದರೆ ಮತ್ತೊಂದು ಕಡೆಗೆ ಇದೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ಭೀತಿ ಎದುರಾಗಿದೆ. 

Lok sabha election 2024 Muniganadhar ready to contest as congress rebel candidate at kolar rav

ಕೋಲಾರ (ಏ.1) : ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರಿಗೆ ಒಂದರ ಮೇಲೊಂದು ಟೆಂಕ್ಷನ್ ಶುರುವಾಗಿದೆ. ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವಿನ ಬಣ ಬಡಿದಾಟದ ಕಾಟ ಒಂದು ಕಡೆಯಾದರೆ ಮತ್ತೊಂದು ಕಡೆಗೆ ಇದೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ಭೀತಿ ಎದುರಾಗಿದೆ. 

ಆಹಾರ ಸಚಿವ ಕೆ.ಎಚ್ ಮುನಿಯಪ್ಪನವರ ಆಪ್ತರಲ್ಲಿ ಗುರುತಿಸಿಕೊಂಡಿರುವ,ಎಸ್ಸಿ ಎಡಗೈ ಸಮುದಾಯಕ್ಕೆ ಸೇರಿರುವ ಮುನಿಗಂಗಾಧರ್ ಕಾಂಗ್ರೆಸ್ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಮೂಲದ ಮುನಿಗಂಗಾಧರ್ ಹೈಕೋರ್ಟ್ ನಲ್ಲಿ ವಕೀಲ ವೃತ್ತಿ ಮಾಡ್ತಿರುವ ಮುನಿಗಂಗಾಧರ್ ಹೈಕೋರ್ಟ್ ನಲ್ಲಿ ವಕೀಲ ವೃತ್ತಿ ಮಾಡ್ತಿದ್ದು, ಈ ಹಿಂದೆ ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಕಚತೀವು ದ್ವೀಪ ನೆಹರು ಶ್ರೀಲಂಕಾಕ್ಕೆ  ಬಿಟ್ಟುಕೊಟ್ಟರು. ಅದನ್ನು ವಾಪಸ್ ಪಡೆಯುವ ಧೈರ್ಯ ಮೋದಿಯವರಿಗಿದೆ: ಸಂಸದ ಕರಡಿ ಸಂಗಣ್ಣ

ತಮ್ಮ ಬಂಡಾಯದ ಸ್ಪರ್ಧೆ ಕುರಿತು ಕೋಲಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಥಳೀಯರಿಗೆ ಕೋಲಾರದಲ್ಲಿ ಟಿಕೇಟ್ ನೀಡಿಲ್ಲ, ಕೆ.ಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೂ ಟಿಕೇಟ್ ನೀಡಬಹುದಾಗಿತ್ತು. ಆದ್ರೆ ಕೋಲಾರದಲ್ಲಿ ಯಾರಿಗೂ ತಿಳಿಯದ ಗೌತಮ್ ಗೆ ಟಿಕೇಟ್ ನೀಡಲಾಗಿದೆ. ಅಭ್ಯರ್ಥಿ ಗೌತಮ್ ಕೋಲಾರದಲ್ಲಿ ಈ ಹಿಂದೆ ನಡೆದ ಯಾವ ಚುನಾವಣೆಯಲ್ಲೂ ಕೆಲಸ ಮಾಡಿಲ್ಲ, ಕಾರ್ಯಕರ್ತರೆ ಹಾಗೂ ಸ್ಥಳೀಯರಿಗೆ ಗೌತಮ್ ಪರಿಚಯವಿಲ್ಲ.ಕೂಡಲೇ ಗೌತಮ್ ಹೆಸರನ್ನು ಬದಲಿಸಿ ಸ್ಥಳೀಯ ಅಭ್ಯರ್ಥಿಗೆ ಟಿಕೇಟ್ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios