ಮಗನಿಗೆ ಹಾವೇರಿ ಟಿಕೆಟ್ ಲಾಭಿ, ಶಿವಮೊಗ್ಗದಲ್ಲಿ ಬಂಡಾಯ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟ ಕೆಎಸ್ ಈಶ್ವರಪ್ಪ!
ಬಂಡಾಯ ಸ್ಪರ್ಧೆಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸಿದ್ದತೆ ನಡೆಸಿದ್ದಾರೆ. ಈ ಬಗ್ಗೆ ಸುಳಿವಿವು ಕೂಡ ನೀಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯವಾಗಿ ಕಣಕ್ಕಿಳಿಯಲು ತೆರೆಮರೆಯ ಸಿದ್ಧತೆ ನಡೆಸುತ್ತಿರುವುದು ಸ್ಪಷ್ಟವಾಗಿದೆ.
ಶಿವಮೊಗ್ಗ (ಮಾ.13): ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಕಾಂತೇಶ್ ಗೆ ಟಿಕೆಟ್ ಗಾಗಿ ಲಾಬಿ ನಡೆಸಿರುವ ಮಾಜಿ ಸಚಿವ ಈಶ್ವರಪ್ಪ ಬಂಡಾಯ ಸ್ಪರ್ಧೆಗೆ ಸಿದ್ದತೆ ನಡೆಸಿದ್ದಾರೆ. ಈ ಬಗ್ಗೆ ಸುಳಿವು ಕೂಡ ನೀಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯವಾಗಿ ಕಣಕ್ಕಿಳಿಯಲು ತೆರೆಮರೆಯ ಸಿದ್ಧತೆ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಇಂದು ಈ ಬಗ್ಗೆ ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಸಭೆ ಕರೆದ ಈಶ್ವರಪ್ಪ ಅವರು, ಬೆಂಬಲಿಗರು ಬಂಡಾಯ ಸ್ಫರ್ಧೆ ಬಗ್ಗೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರ ಜೊತೆಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ನನ್ನ ಬೆಂಬಲಿಗರು ನನ್ನ ಬಂಡಾಯ ಸ್ಪರ್ಧೆಗೆ ಒತ್ತಡ ಹೇಳುತ್ತಿದ್ದಾರೆ. ನಾಡಿದ್ದು ನನ್ನ ಬೆಂಬಲಿಗರು ಸಭೆ ಕರೆದಿದ್ದಾರೆ. ನನ್ನ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನಗೆ ಅನ್ಯಾಯ ಆಗಿದೆ ಎಂದು ನಿಮಗೂ ಅನಿಸಿದೆ ಎಂದು ಪತ್ರಕರ್ತರನ್ನು ಈಶ್ವರಪ್ಪ ಕೇಳಿದ್ದಾರೆ. ನಾಲ್ಕು ಗೋಡೆಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಬಿಜೆಪಿ ಸಂಪ್ರದಾಯ. ಏನಾಗಿದೆ ?ಏನು ಬಿಟ್ಟಿದೆ ಎಂದು ಕಾದು ನೋಡಿ. ಪ್ರಹ್ಲಾದ ಜೋಶಿ ನನ್ನ ಆತ್ಮೀಯ ಸ್ನೇಹಿತ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದಾಗ ಆತ ಪ್ರಧಾನ ಕಾರ್ಯದರ್ಶಿ. ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ಆಗಿರುವುದು ಹೌದು. ನಾನು ಬಿಜೆಪಿಯಲ್ಲಿ ಸೀನಿಯರ್ ಮೋಸ್ಟ್ ಎನ್ನುವುದು ಹೌದು. ನಾನು ಏನು ಕ್ರಮ ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ನನ್ನ ಹಿತೈಷಿಗಳು ಚರ್ಚೆ ಮಾಡುತ್ತಿದ್ದಾರೆ. ನಾನು ನನ್ನನ್ನು ಬಲಿಪಶು ಎಂದು ಕೊಂಡಿಲ್ಲ ನೀವು ಅಂದುಕೊಂಡಿದ್ದರೆ ಅದು ತಪ್ಪು.
ಮೈಸೂರು ಟಿಕೆಟ್ ಯದುವೀರ್ ಗೆ ಬಹುತೇಕ ಫಿಕ್ಸ್, ಕಾಂಗ್ರೆಸ್ ಗೆ ಲಾಭನಾ? ನಷ್ಟನಾ?
ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಎಂದಾಗ ನಾನು ಒಪ್ಪಿಕೊಂಡಿದ್ದೆ. ಅಂದು ಪಕ್ಷದ ವರಿಷ್ಠರು ಫೋನ್ ಮಾಡಿದಾಗ ಒಪ್ಪಿಕೊಂಡಿದ್ದೆ. ಬರೀ ಕುತೂಹಲ ಅಲ್ಲ ಇದು ನಮ್ಮ ಕರ್ನಾಟಕ ರಾಜ್ಯದ ಭವಿಷ್ಯ. ಈ ಪಕ್ಷ ಸರಿಯಾಗಿ ಹೋಗಬೇಕು ಎಂದು ಎಲ್ಲರೂ ನನಗೆ ಕರೆ ಮಾಡುತ್ತಿದ್ದಾರೆ. ನಾನೊಬ್ಬ ಎಂಪಿ ಆಗಬೇಕು ಎಂಬುದಷ್ಟೇ ಅಲ್ಲ ಈ ಪಕ್ಷ ಉಳಿಯಬೇಕು. ಎಲ್ಲಾ ಹಿತೈಷಿಗಳು ನಿಮಗೆ ಅನ್ಯಾಯವಾಗಿದೆ ಎಂದು ಫೋನ್ ಮಾಡುತ್ತಿದ್ದಾರೆ. ಎಲ್ಲರ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಾನು ಎಂಪಿ ಆಗಬೇಕು ಎಂಬುದು ನನ್ನ ಆಸೆ ಅಲ್ಲ. ಮೊನ್ನೆ ವಿಧಾನಸಭಾ ಚುನಾವಣೆಯಲ್ಲಿ ಸೋತು 66 ಸ್ಥಾನಗಳನ್ನು ಪಡೆದಿದ್ದೆವು. ಹಲವು ತಪ್ಪುಗಳು ನಡೆದಿದ್ದವು ಈ ತಪ್ಪುಗಳು ಸರಿಯಾಗಬೇಕೆಂದು ಹಲವರು ಹೇಳುತ್ತಿದ್ದಾರೆ. ನಾನು ಯಾವುದೇ ತೀರ್ಮಾನ ಇದುವರೆಗೂ ಕೈಗೊಂಡಿಲ್ಲ. ಯಾವುದೇ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ನನ್ನ ಮನಸ್ಸಿಗೆ ಬಂದಿದ್ದನ್ನು ನಿಮ್ಮ ಎದುರು ಹೇಳಿದ್ದೇನೆ. ಪಕ್ಷದಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸುವ ಚಿಂತನೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದಲ್ಲಿ ಸಾಕಷ್ಟು ತಪ್ಪುಗಳಾಗಿದೆ ಎಂದು ಒಪ್ಪಿಕೊಂಡಿದ್ದೇವೆ. ಈ ಎಲ್ಲಾ ತಪ್ಪುಗಳು ಸರಿ ಹೋಗಬೇಕೆಂಬುದು ನಮ್ಮ ಅಪೇಕ್ಷೆ. ನನ್ನ ಕಾರ್ಯಕರ್ತರು ಹಿತೈಷಿಗಳು ಪಕ್ಷದಲ್ಲಿನ ವ್ಯತ್ಯಾಸಗಳು ಸರಿ ಹೋಗಬೇಕು ಎಂಬುದಕ್ಕಾಗಿ ಸಭೆ ನಡೆಸಿದ್ದಾರೆ. ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಬೇಡಿಕೊಂಡು ಬಂದಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸಂವಿಧಾನ ಬದಲಿಸುವುದು ಬಿಜೆಪಿ ಹಿಡನ್ ಅಜೆಂಡಾ: ಸಿಎಂ ಸಿದ್ದರಾಮಯ್ಯ
ಚುನಾವಣಾ ಕಣಕ್ಳಿಯುವ ಸಂಬಂಧ ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಸಭೆ ಕರೆದ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬೆಂಬಲಿಗರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ಮಾರ್ಚ್ 18ರ ರಂದು ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೂ ಮೊದಲು ಈಶ್ವರಪ್ಪ ಬಂಡಾಯ ಸ್ಪರ್ಧೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಈ ಬಗ್ಗೆ ಶುಕ್ರವಾರ ಮತ್ತೆ ನಡೆಸಲಿದ್ದು, ಈ ಸಭೆಯ ಮೇಲೆ ಸಂಸದ ಬಿ ವೈ ರಾಘವೇಂದ್ರ ಚುನಾವಣಾ ಭವಿಷ್ಯ ನಿಂತಿದೆ ಎಂದು ಹೇಳಲಾಗುತ್ತಿದೆ.