'ಹಾಗೆ ಹೇಳಿದವನಿಗೆ 10 ಬೂಟುಗಳಿಂದ ಹೊಡೀಬೇಕು' ಕಾಂಗ್ರೆಸ್ ಮುಖಂಡನ ಉದ್ಧಟನದ ಹೇಳಿಕೆಗೆ ಬಿಜೆಪಿ ತಿರುಗೇಟು
ಜೈ ಶ್ರೀರಾಮ್ ಘೋಷಣೆ ಕೂಗುವವರನ್ನ ಪೊಲೀಸರು ಬೂಟುಗಾಲಲ್ಲಿ ಒದ್ದು ಒಳಗೆಹಾಕಬೇಕು ಎಂಬ ಉದ್ಧಟತನದ ಹೇಳಿಕೆ ನೀಡಿದ್ದ ರಾಯಚೂರು ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಬಿಜೆಪಿ ಮುಖಂಡರ ಆಕ್ರೋಶ ಗುರಿಯಾಗಿದ್ದಾರೆ.
ರಾಯಚೂರು (ಮೇ.4) ಜೈ ಶ್ರೀರಾಮ್ ಘೋಷಣೆ ಕೂಗುವವರನ್ನ ಪೊಲೀಸರು ಬೂಟುಗಾಲಲ್ಲಿ ಒದ್ದು ಒಳಗೆಹಾಕಬೇಕು ಎಂಬ ಉದ್ಧಟತನದ ಹೇಳಿಕೆ ನೀಡಿದ್ದ ರಾಯಚೂರು ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಬಿಜೆಪಿ ಮುಖಂಡರ ಆಕ್ರೋಶ ಗುರಿಯಾಗಿದ್ದಾರೆ.
ಕಾಂಗ್ರೆಸ್ ಮುಖಂಡ ಬಷಿರುದ್ಧೀನ್ ಹೇಳಿಕೆಗೆ ರಾಯಚೂರು ನಗರ ಶಾಸಕ ಡಾ ಶಿವರಾಜ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದು, ಹಾಗೆ ಹೇಳುವವನಿಗೆ ಹತ್ತು ಬೂಟಿನಿಂದಲೇ ಹೊಡಿಬೇಕು ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ: ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡನ ಹೇಳಿಕೆ ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಈ ಬಗ್ಗೆ ಜಿಲ್ಲಾ ಎಸ್‌ಪಿಗೆ ದೂರು ನೀಡುತ್ತೇವೆ. ಜೈ ಶ್ರೀರಾಮ್ ಘೋಷಣೆ ಕೂಗುವುದು ಅಪರಾಧವಾ? ರಾಯಚೂರುಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನ ಮೊದಲು ಒದ್ದು ಒಳಗೆ ಹಾಕಬೇಕು ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ.
ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು
ಕಾಂಗ್ರೆಸ್ ಮುಖಂಡ ಬಶೀರುದ್ಧೀನ್ ಹೇಳಿಕೆ ಖಂಡಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಜೈ ಶ್ರೀರಾಮ್ ಎಂದವರಿಗೆ ಬೂಟುಗಾಲಿನಲ್ಲಿ ಒದೆಯುವಂತೆ ಉದ್ಧಟತನದ, ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡನ ಮೇಲೆ ಸೂಕ್ತ ಕ್ರಮಕ್ಕೆ ಶಾಸಕ ಡಾ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿರುವ ಬಿಜೆಪಿ. ಗಾಂಧಿ ವೃತ್ತದಿಂದ ಡಿಸಿ ಕಚೇರಿಗೆ ಆಗಮಿಸುತ್ತಿರುವ ನೂರಾರು ಕಾರ್ಯಕರ್ತರು ದಾರಿಯುದ್ದಕ್ಕೂ ಜೈಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ಡಿಸಿ ಕಚೇರಿ ತಲುಪಲಿರುವ ಹಿನ್ನೆಲೆ ಪೊಲೀಸರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೆಲದಿನಗಳ ಹಿಂದೆ ನಗರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಬಷಿರುದ್ಧೀನ್ ಉದ್ದಟತನದ ಹೇಳಿಕೆ ನೀಡಿದ್ದರು. ಜೈ ಶ್ರೀರಾಮ ಅಂದವರನ್ನ ಪೊಲೀಸರು ಬೂಟುಗಾಲಲ್ಲಿ ಒದ್ದು ಒಳಗೆ ಹಾಕಬೇಕು ಅಂತಾ. ಬಷಿರುದ್ಧೀನ್ ವಿಡಿಯೋ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಿಂದೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.