ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೊಲ್ಲೇನು? ನಾಲಗೆ ಹರಿಬಿಟ್ಟ ಶಾಸಕ ರಾಜು ಕಾಗೆ
ಪ್ರಧಾನಿ ನರೇಂದ್ರ ಮೋದಿ ಸತ್ತರೆ, ಈ ದೇಶದಲ್ಲಿ ಮುಂದೆ ಯಾರೂ ಪಿಎಂ ಆಗುವುದಿಲ್ಲವೇ? ಮೋದಿ ತೀರಿಕೊಂಡರೆ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಶಾಸಕ ರಾಜು ಕಾಗೆ ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ
ಚಿಕ್ಕೋಡಿ (ಮೇ.1): ಪ್ರಧಾನಿ ನರೇಂದ್ರ ಮೋದಿ ಸತ್ತರೆ, ಈ ದೇಶದಲ್ಲಿ ಮುಂದೆ ಯಾರೂ ಪಿಎಂ ಆಗುವುದಿಲ್ಲವೇ? ಮೋದಿ ತೀರಿಕೊಂಡರೆ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಶಾಸಕ ರಾಜು ಕಾಗೆ ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಮದಾಪೂರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಶಾಸಕ, ಈಗಿನ ಯುವಕರು ಮಾತೆತ್ತಿದ್ದರೆ ಮೋದಿ ಮೋದಿ ಅನ್ನುತ್ತಾರೆ, ಮೋದಿನ ತಗೊಂಡು ನೆಕ್ಕುತ್ತೀರೇನು? ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇಕು ಅಂತಾರೆ. ಇಲ್ಲಿ ಏನಾದರೂ ಸಮಸ್ಯೆ ಆದರೆ ಮೋದಿ ಬರೋದಿಲ್ಲ. ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು ಎಂದರು
ನರೇಂದ್ರ ಮೋದಿ ಹತ್ರ ಮೂರು ಸಾವಿರ ಕೋಟಿ ವಿಮಾನ ಇದೆ. ನಾಲ್ಕು ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ಳುತ್ತಾರೆ. ಇಂಥವರನ್ನು ತಗೊಂಡು ಏನು ಮಾಡ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕಡಿಮೆ ಕೊಟ್ರೆ ಕರೆಂಟ್ ಕೊಡಲ್ಲ; ಮತದಾರರಿಗೆ ಬೆದರಿಕೆ ಹಾಕಿದ ಶಾಸಕ ರಾಜು ಕಾಗೆ