ಟಿಕೆಟ್ ಅತೃಪ್ತಿ ಶಮನಕ್ಕೆ ಅಪ್ಸರೆಯರನ್ನು ಕರೆಸಲು ಪಕ್ಷದ ಕಾರ್ಯಕರ್ತರಿಂದ ತೀರ್ಮಾನ!?
ಲೋಕಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಲವು ನಾಯಕರ ಅಸಮಧಾನ ತಣ್ಣಗಾಗುತ್ತಿಲ್ಲ. ಈ ವಿಚಾರ ಪಕ್ಷಗಳ ನಾಯಕರಿಗೊಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಬೆಂಗಳೂರು (ಮಾ.24): ಲೋಕಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹಲವು ನಾಯಕರ ಅಸಮಧಾನ ತಣ್ಣಗಾಗುತ್ತಿಲ್ಲ. ಈ ವಿಚಾರ ಪಕ್ಷಗಳ ನಾಯಕರಿಗೊಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇದರ ನಡುವೆ ಹಿರಿಯ ನಾಯಕರೊಬ್ಬರು ಬ್ರಹ್ಮನೇ ಬಂದರೂ ರಾಜಿ ಆಗುವುದಿಲ್ಲ ಎಂದು ಹೇಳಿಕೆ ನೀಡಿ ತಮ್ಮ ಗಟ್ಟಿನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಲ್ಲಿ ಕುಡಿಯೋದಕ್ಕೆ ನೀರಿಲ್ಲ, ಕಾವೇರಿ ನೀರಲ್ಲಿ ಕಾರು ತೊಳೆದ ಮಹಿಳೆಗೆ ಬಿತ್ತು 5 ಸಾವಿರ ರೂ ದಂಡ
ಹೀಗಾಗಿ ಅವರನ್ನು ಸಮಾಧಾನ ಪಡಿಸಲು ಹಲವು ಮಾರ್ಗಗಳನ್ನು ಅನ್ಷೇಷಿಸುತ್ತಲೇ ಪಕ್ಷದ ನಾಯಕರು ಮತ್ತೊಂದು ವಿಭಿನ್ನ ಮಾರ್ಗಕ್ಕೆ ಕೈ ಹಾಕಿದ್ದಾರೆ. ದೇವಲೋಕದ ರಂಭೆ, ಊರ್ವಷಿ, ಮೇನಕೆ ಹಾಗೂ ತಿಲೋತ್ತಮೆಯರನ್ನು ಕರೆಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ತಪೋವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಿಸಿದ ಬಳಿಕ ಕಾರ್ಯಕರ್ತರೆಲ್ಲ ಒಂದಾಗಿ ತಪಸ್ಸು ಮಾಡಲಿದ್ದಾರೆ ಎಂಬ ಸುದ್ದಿ ಸುಳ್‌ಸುದ್ದಿಗೆ ಲಭಿಸಿದೆ. ಹೀಗಾಗಿ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.