PM Modi Bagalkot Rally ಬಾಲಾಕೋಟ್ ಉಗ್ರರ ದಾಳಿ ಕಾಂಗ್ರೆಸ್‌ಗೆ ಅರ್ಥವಾಗದೆ ಬಾಗಲಕೋಟೆ ಅಂದುಕೊಂಡಿದ್ರು: ಮೋದಿ
ಬೆಂಗಳೂರು ಟ್ಯಾಂಕರ್ ಮಾಫಿಯಾ ನಡೆಯುತ್ತಿದೆ. ಅದ್ರಲ್ಲಿ ಅವರು ಕಮಿಷನ್ ತಗೆದುಕೊಳ್ಳುತ್ತಿದ್ದಾರೆ ಆರೋಪಿಸಿದ ಮೋದಿ, ಅಷ್ಟಾದ್ರು ಅವರಿಗೆ ತೃಪ್ತಿ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ (ಏ.29):ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಾಗಲಕೋಟೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ಸಿ.ಪಿ ಗದ್ದಿಗೌಡ ಮತ್ತು ವಿಜಯಪುರ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರವಾಗಿ ಪ್ರಚಾರ ನಡೆಸಲು ಮೋದಿ ಬಂದಿದ್ದು, ಮತ್ತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದೇಶ್ವರ ಸ್ವಾಮೀಜಿ ಮತ್ತು ಬನಶಂಕರಿ ದೇವಿಗೆ ನನ್ನ ನಮಸ್ಕಾರಗಳು ಎಂದು ಮಾತು ಆರಂಭಿಸಿದ ಮೋದಿ, ಇಂದು ನಿಧನರಾದ ಸಂಸದ ಶ್ರೀನಿವಾಸ್ ಪ್ರಾಸದ್ ಅವರಿಗೆ ಸಂತಾಪ ಸೂಚಿಸಿದರು.
ಭಾರತ ವಿಶ್ವದಲ್ಲೇ ಬಲಿಷ್ಠ ದೇಶವಾಗಿದೆ ಅದೇ ನಮ್ಮ ಸಂಕಲ್ಪ. ಭಾರತ ಬಲಿಷ್ಠ ಆರ್ಥಿಕ ದೇಶವಾಗಲಿದೆ. ಮೋಜು ಮಸ್ತಿಯಲ್ಲಿರೋರಿಂದ ಈ ಸಂಕಲ್ಪ ಮಾಡಲು ಸಾಧ್ಯವಿಲ್ಲ. ನಮ್ಮ ಸಂಕಲ್ಪ ಬಹಳ ಸಷ್ಪ್ಟವಾಗಿದೆ. 24/7 ಕೆಲಸ ಮಾಡಬೇಕಿದೆ ಅದು 2047 ತನಕ ಮೋದಿ ಮಿಷನ್ ಇರಲಿದೆ.
ಬೆಂಗಳೂರು ಟ್ಯಾಂಕರ್ ಮಾಫಿಯಾ ನಡೆಯುತ್ತಿದೆ. ಅದ್ರಲ್ಲಿ ಅವರು ಕಮಿಷನ್ ತಗೆದುಕೊಳ್ಳುತ್ತಿದ್ದಾರೆ ಆರೋಪಿಸಿದ ಮೋದಿ, ಅಷ್ಟಾದ್ರು ಅವರಿಗೆ ತೃಪ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಕರ್ನಾಟಕ ಲೂಟಿ ಮಾಡುತ್ತಿರೋರಿಗೆ ಶಿಕ್ಷೆಯಾಗಬೇಕೋ ಬೇಡ್ವೋ..? ಬಾಗಲಕೋಟೆಯ ಬಾದಮಿ ಪಟ್ಟದಕಲ್ಲು ಅಭಿವೃದ್ಧಿ ಆಗಬೇಕೋ ಬೇಡ್ವೋ? ಈ ಸಲ ಬಂದ್ರೆ ಗರಿಬಿ ಹಠವೋ ಅಂತಿದ್ದೀರಿ 60 ವರ್ಷ ಏನ್ ಮಾಡಿದ್ರಿ..? ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ವಿರುದ್ಧ ವಸೂಲಿ ಗ್ಯಾಂಗ್ ಎಂದು ಆರೋಪಿಸಿದ ಮೋದಿ, ಮೋದಿ ಆಗಮನಕ್ಕೂ ಮುನ್ನ 80 ಸಾವಿರ ಹಳ್ಳಿಗಳಲ್ಲಿ ಕರೆಂಟ್ ಇರಲಿಲ್ಲ. ಮೋದಿಗೆ ಅವಕಾಶ ನೀಡಿದ ಮೇಲೆ ಎಲ್ಲಾ ಕಡೆ ಕರೆಂಟ್ ಕಲ್ಪಿಸಲಾಗಿದೆ. ದೇಶಾದ್ಯಂತ ಜಲಜೀವನ ಮಿಷನ್ ತಂದಿದ್ದೇವೆ. ಮೊದಲು 16 % ಮಾತ್ರ ಜನರಿಗೆ ನೀರು ತಲುಪತಿತ್ತು. ಈಗ 75 ರಷ್ಟು ನೀರು ತಲುಪಿಸಿದ್ದೇವೆ. ನಿಮ್ಮ (ಕಾಂಗ್ರೆಸ್) ಕೈಯಲ್ಲಿ ಆಗದಿರೋದನ್ನ ಮೋದಿ ಮಾಡಿ ತೋರಿಸಿದ್ದಾನೆ. ಇವತ್ತಿನ ಅಭಿವೃದ್ಧಿ ಪ್ರತಿಯೊಂದು ದೇಶಕ್ಕೂ ತಲುಪುತ್ತಿದೆ. ಕಾಂಗ್ರೆಸ್ ಇದನ್ನ ವಿರೋಧಿಸುವ ಹಂತಕ್ಕೆ ಬಂದು ತಲುಪಿದೆ ಅಷ್ಟರ ಮಟ್ಟಿಗೆ ಅವರ ಮನಸ್ಥಿತಿ ಬೆಳೆದಿದೆ.
ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣ ಪ್ರಸ್ತಪಿಸಿದ ಮೋದಿ, ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯುವತಿಯ ವ್ಯಕ್ತಿತ್ವದ ಮೇಲೆ ದಾಳಿ ಮಾಡಿದ್ರು, ಹನುಮಾನ್ ಚಾಲಿಸ್ ಹೇಳಿದವರ ಮೇಲೆ ದಾಳಿ ಆಗುತ್ತೆ. ಆದ್ರೂ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತೆ. ಕಾಂಗ್ರೆಸ್ ವೋಟ್ ಬ್ಯಾಂಕ್ ನಿಂದ ಎಸ್ಸಿ ,ಎಸ್ ಟಿ ಜನಾಂಗಕ್ಕೆ ಸುರಕ್ಷತೆ ಇಲ್ಲ. ಎಸ್ ಸಿ ಎಸ್ ಟಿ ಮೀಸಲಾತಿ ಬದಲಿಸುವ ಸಂವಿಧಾನ ತಂದಿದ್ದಾರೆ. ರಾಜ್ಯ ಸರ್ಕಾರದ OBC ಗೆ ಸಿಗಬೇಕಾದ ಮೀಸಲಾತಿಯನ್ನು ಮುಸ್ಲಿಂರಿಗೆ ನೀಡಿದೆ. ಅಂಬೇಡ್ಕರ್ ಸಂವಿಧಾನಲ್ಲಿ ಎಸ್ ಸಿ ಎಸ್ ಟಿಗೆ ನೀಡಿದ ಅಧಿಕಾರವನ್ನ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಲೂಟಿ ಮಾಡ್ತಿದೆ. SCST OBC ಯಲ್ಲಿ ಅಧಿಕಾರವನ್ನು ಲೂಟಿ ಮಾಡಿ ಮೈನಾರಿಟಿಗೆ ಕೊಡೋದು ಕಾಂಗ್ರೆಸ್ ಕೆಲಸ. ಮೋದಿ ಇರೋವರೆಗೂ ಇದು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ಇದಕ್ಕಾಗಿ ಮೋದಿ ಎಲ್ಲಿಗೆ ಬೇಕಾದರೂ ಹೋಗಲು ಸಿದ್ದ ಎಂದು ಮೋದಿ ವಾಗ್ದಾಳಿ ನಡೆಸಿದರು.
ಜಗತ್ತಿನ ಸೋಷಿಯಲ್ ಮೀಡಿಯದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇರೋದು ಮೋದಿಗೆ. ಈ ಶಕ್ತಿಯನ್ನ ನಾನು ದೇಶ ಕಟ್ಟಲು ಬಳಸಿಕೊಳ್ಳುತ್ತೇನೆ. ಆದ್ರೆ ಕಾಂಗ್ರೆಸ್ ಫೇಕ್ ವೀಡಿಯೋ ಹಾಕಲು ಬಳಸಿಕೊಳ್ಳುತ್ತೆ. ನಿಮ್ಗೆ ಫೇಕ್ ವೀಡಿಯೋ ಬಂದ್ರೆ ಪೋಲಿಸರಿಗೆ ದೂರು ನೀಡಿ ಎಂದು ಕರೆ ಕೊಟ್ಟ ಮೋದಿ. ಬಾಲಾಕೋಟ್ ಮೇಲೆ ಉಗ್ರರು ದಾಳಿ ಮಾಡಿದಾಗ ಕಾಂಗ್ರೆಸ್ ಗೆ ಅರ್ಥವಾಗಿರಲಿಲ್ಲ. ಅವರು ಬಾಗಲಕೋಟೆ ಅಂದುಕೊಂಡಿದ್ರು ಎಂದು ಏರ್ ಸ್ಟ್ರೈಕ್ ಬಗ್ಗೆ ಪ್ರಸ್ತಾಪಿಸಿದ ಮೋದಿ, ಮೋದಿ ಏನೇ ಮಾಡಿದ್ರು ನೇರವಾಗಿ ಮಾಡ್ತಾರೆ. ಪಿಸಿ ಗದ್ದಿಗೌಡರ್ ಮತ್ತು ರಮೇಶ್ ಜಿಗಜಣಗಿ ರಿಗೆ ನಿಮ್ಮ ಮತ ನೀಡಿ ಹೆಚ್ಚು ಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.