ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಪಿ.ಸಿ. ಮೋಹನ್ ಅವರು 81.30 ಕೋಟಿ ರುಪಾಯಿ ಆಸ್ತಿಗೆ ಒಡೆಯರಾಗಿದ್ದಾರೆ. ಪಿ.ಸಿ.ಮೋಹನ್ ಅವರ 10.46 ರುಪಾಯಿ ಚರಾಸ್ತಿ, ಪತ್ನಿ ಶೈಲಾ ಬಳಿ 4.39 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ ಇದೆ. ಅದೇ ರೀತಿ ಪಿ.ಸಿ. ಮೋಹನ್ 19.18 ಕೋಟಿ ರುಪಾಯಿ ಮೌಲ್ಯದ ಸ್ಥಿರಾಸ್ತಿ, ಶೈಲಾ 22.21 ಕೋಟಿ ರುಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ದಂಪತಿ ಬಳಿ 1 ಕೇಜಿ ಚಿನ್ನ, 6 ಕೆಜಿಗೂ ಅಧಿಕ ಬೆಳ್ಳಿ ಇದೆ ಎಂದು ಅಫಿಡವಿಡ್‌ನಲ್ಲಿ ತಿಳಿಸಿದ್ದಾರೆ.

ಬೆಂಗಳೂರು(ಏ.02):  ಸ್ಟಾರ್ ಚಂದ್ರು ಬಳಿ 410 ಕೋಟಿ ಆಸ್ತಿ, ಕಾರಿಲ್ಲ!. ಹೌದು, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮ ಣೇಗೌಡ (ಸ್ಟಾರ್ ಚಂದ್ರು) ಅವರು ಒಟ್ಟು 410 ಕೋಟಿ ರು. (ತಮ್ಮ ಹೆಸರಲ್ಲಿ 264 2. ಪತ್ನಿ ಹೆಸರಲ್ಲಿ 146 ಕೋಟಿ ರು.) ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ. ಅವರ ಬಳಿ ಸ್ವಂತ ಕಾರಿಲ್ಲ, ಚಿನ್ನ ಇಲ್ಲ. ಟ್ರ್ಯಾಕ್ಟರ್‌ಗಳಿವೆ. 15.50 ಕೋಟಿ ರು.ಸಾಲ ಹೊಂದಿದ್ದಾರೆ. ಪತ್ನಿ ಬಳಿ 2.30 2., 4.1 , 15 ರು. ಮೌಲ್ಯದ 71 ಸಿಟಿಎಸ್ ವಜ್ರ, 21.50 ಲಕ್ಷ ರು. ಮೌಲ್ಯದ ಬೆಳ್ಳಿ ಇದೆ. 146.99 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ವೆಂಕಟರಮಣೇಗೌಡ 26 ಕೋಟಿ ರು. ಮೌಲ್ಯದ ಹಿಂದೂ ಅವಿಭಕ್ತ ಕುಟುಂಬದ ಆಸ್ತಿ (ಎಚ್‌ಯುಎಫ್) ಹೊಂದಿದ್ದಾರೆ.

282 ಕೋಟಿ ರು. ಆಸ್ತಿ ಒಡೆಯ ರಕ್ಷಾರಾಮಯ್ಯ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕ ಬಳ್ಳಾಪುರದಿಂದ ರಕ್ಷಾ ರಾಮಯ್ಯ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, 282 ಕೋಟಿ ರು. ಆಸ್ತಿ ಘೋಷಿಸಿ ಕೊಂಡಿದ್ದಾರೆ. ರಾಮಯ್ಯ ಬಳಿ 54 ಕೋಟಿ, ಪತ್ತಿ ಆಶಿತಾ ಬಳಿ 7.23 ಕೋಟಿ, ತಂದೆ ಸೀತಾರಾಂ ಬಳಿ 17 ಕೋಟಿ ರು. ಚರಾಸ್ತಿ ಇದೆ. ರಕ್ಷಾ , 27.85 , 9.79 ಕೋಟಿ, ಸೀತಾರಾಂ ಬಳಿ 17.52 ಕೋಟಿ ರು. ಸ್ಥಿರಾಸ್ತಿ ಇರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ರಕ್ಷಾ ರಾಮಯ್ಯ ಬಳಿ 2.70 ಕೋಟಿ ರು. ಮೌಲ್ಯದ 4 ಕಾರುಗಳು ಇವೆ. ದಂಪತಿ ಬಳಿ 1 ಕೇಜಿಗೂ ಅಧಿಕ ಚಿನ್ನಾಭರಣಗಳು ಇವೆ.

ನಾಮಪತ್ರ ಸಲ್ಲಿಕೆ ಮಾಡಿದ ಡಿಕೆ ಸುರೇಶ್‌, ಕಳೆದ ಐದು ವರ್ಷದಲ್ಲಿ ಡಿಕೆ ಸುರೇಶ್‌ ಆಸ್ತಿ ಶೇ. 75ರಷ್ಟು ಏರಿಕೆ!

ಬಿಜೆಪಿಗ ಪಿ.ಸಿ.ಮೋಹನ್ ಸಂಪತ್ತು 81 ಕೋಟಿ ರು.

ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಪಿ.ಸಿ. ಮೋಹನ್ ಅವರು 81.30 ಕೋಟಿ ರುಪಾಯಿ ಆಸ್ತಿಗೆ ಒಡೆಯರಾಗಿದ್ದಾರೆ. ಪಿ.ಸಿ.ಮೋಹನ್ ಅವರ 10.46 ರುಪಾಯಿ ಚರಾಸ್ತಿ, ಪತ್ನಿ ಶೈಲಾ ಬಳಿ 4.39 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ ಇದೆ. ಅದೇ ರೀತಿ ಪಿ.ಸಿ. ಮೋಹನ್ 19.18 ಕೋಟಿ ರುಪಾಯಿ ಮೌಲ್ಯದ ಸ್ಥಿರಾಸ್ತಿ, ಶೈಲಾ 22.21 ಕೋಟಿ ರುಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ದಂಪತಿ ಬಳಿ 1 ಕೇಜಿ ಚಿನ್ನ, 6 ಕೆಜಿಗೂ ಅಧಿಕ ಬೆಳ್ಳಿ ಇದೆ ಎಂದು ಅಫಿಡವಿಡ್‌ನಲ್ಲಿ ತಿಳಿಸಿದ್ದಾರೆ.

Lok Sabha Election 2024: ಹಾಸನ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ 41 ಕೋಟಿ ಒಡೆಯ

ತುಮಕೂರು: ಸೋಮಣ್ಣ ₹60 ಕೋಟಿಗೆ ಒಡೆಯ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಸೋಮವಾರ ಸಾಂಕೇತಿಕ ವಾಗಿ ನಾಮಪತ್ರ ಸಲ್ಲಿಸಿದ್ದು, 17.74 03 ಆಸ್ತಿಗೆ ಒಡೆಯರಾಗಿದ್ದಾರೆ. ಅವರ ಪತ್ನಿ ಶೈಲಜಾ 43 ಕೋಟಿ ಆಸ್ತಿ ಹೊಂದಿದ್ದಾರೆ. ಕೃಷಿ ಸೇರಿ ಸೋಮಣ್ಣ ಅವರ ವಾರ್ಷಿಕ ಆದಾಯ 69.79 ಲಕ್ಷ ರು.ಆಗಿದೆ. ಇನ್ನು, ಎರಡು ಟೊಯೋಟಾ ಇನ್ನೊವಾ, ಒಂದು ಟೊಯೋಟಾ ಕ್ಯಾಲಿಸ್ ಸೇರಿ 3 ಕಾರುಗಳನ್ನು ಹೊಂದಿದ್ದಾರೆ.ಸೋಮಣ್ಣಗೆ 6.44 ಕೋಟಿಸಾಲವಿದೆ. ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಒಂದು ಪ್ರಕರಣ, ಬೆಂಗಳೂರುಸಿಟಿ ಸಿಎಲ್ ಕೋರ್ಟ್ ನಲ್ಲಿ ಎರಡು ಪ್ರಕರಣಗಳಿವೆ.

ಡಾ. ಕೆ.ಸುಧಾಕರ್ ಬಳಿ 33.42 ಕೋಟಿ ರು. ಆಸ್ತಿ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಮತ್ತು ಕುಟುಂಬದವರು ಒಟ್ಟು 33.42 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಅದರಲ್ಲಿ 9.88 ಕೋಟಿರು. ಚರಾಸ್ತಿ ಹಾಗೂ 23.54 ಕೋಟಿ ರು. ಸಿರಾಸ್ತಿ ಇದೆ. ಒಟ್ಟು 20.34 ಕೋಟಿ ರು. ಸಾಲವನ್ನು ಹೊಂದಿದ್ದು, ಅದರಲ್ಲಿ 9.22 ಕೋಟಿ ರು. ಗೃಹಸಾಲವಾಗಿದೆ. ಉಳಿದಂತೆ ಸುಧಾಕರ್ ತಮ್ಮ ಪತ್ತಿ ಡಾ.ಜಿ.ಎ.ಪ್ರೀತಿ ಅವರಿಂದಲೇ 40.33 ಲಕ್ಷ ರು. ಸಾಲ ಪಡೆದಿದ್ದಾರೆ. 1 ಕಾರು, 1 ಸ್ಕೂಟರ್ ಹಾಗೂ 3 ಟ್ರ್ಯಾಕ್ಟರ್‌ಗಳನ್ನು ಹೊಂದಿದ್ದಾರೆ. ಜತೆಗೆ 62 ಲಕ ರು. ಮೌಲ್ಯದ 1.160 ಕೆಜಿ ಚಿನ್ನಾಭರಣ ಹಾಗೂ 15.55 ಲಕ್ಷ ರು. ಮೌಲ್ಯದ 30 ಕೆಜಿ ಬೆಳ್ಳಿ ವಸ್ತುಗಳಿವೆ.