Lok Sabha Election 2024: ಹಾಸನ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ 41 ಕೋಟಿ ಒಡೆಯ

ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, 40.94 ಕೋಟಿ ರು.ಮೌಲ್ಯದ ಆಸ್ತಿ ಹೊಂದಿದ್ದಾರೆ. ಆ ಪೈಕಿ 5.44 ಕೋಟಿ ಚರಾಸ್ತಿ, 35.40 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 

Hassan BJP JDS Alliance Candidate Prajwal Revanna Files Nomination Details about his Assets grg

ಹಾಸನ(ಮಾ.29):  ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, 40.94 ಕೋಟಿ ರು.ಮೌಲ್ಯದ ಆಸ್ತಿ ಹೊಂದಿದ್ದಾರೆ. ಆ ಪೈಕಿ 5.44 ಕೋಟಿ ಚರಾಸ್ತಿ, 35.40 ಕೋಟಿ ಸ್ಥಿರಾಸ್ತಿ.

ಕೃಷಿಯಿಂದ ಕಳೆದ 5 ವರ್ಷಗಳಲ್ಲಿ 2.75 ಕೋಟಿ ರು.ಸಂಪಾದಿಸಿದ್ದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. 31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ ಹೊಂದಿದ್ದಾರೆ. ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡ, ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿದ್ದಾರೆ. ಅತ್ತೆ ಅನುಸೂಯರಿಂದ 22 ಲಕ್ಷ ರು., ಅತ್ತೆ ಶೈಲಜಾರಿಂದ 10 ಲಕ್ಷ ರು.,ಅಜ್ಜಿ ಚನ್ನಮ್ಮರಿಂದ 23 ಲಕ್ಷ ರು. ಕುಪೇಂದ್ರ ರೆಡ್ಡಿಯಿಂದ 1 ಲಕ್ಷ ರು., ತಂದೆ ರೇವಣ್ಣರಿಂದ 86 ಲಕ್ಷ, ಸಹೋದರ ಡಾ.ಸೂರಜ್‌ ರೇವಣ್ಣ ಅವರಿಂದ 1 ಕೋಟಿ ರು. ಸಾಲ ಸೇರಿ ಒಟ್ಟು 4.48 ಕೋಟಿ ರು.ಸಾಲ ಹೊಂದಿದ್ದಾಗಿ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಮಾಡಿದ ಡಿಕೆ ಸುರೇಶ್‌, ಕಳೆದ ಐದು ವರ್ಷದಲ್ಲಿ ಡಿಕೆ ಸುರೇಶ್‌ ಆಸ್ತಿ ಶೇ. 75ರಷ್ಟು ಏರಿಕೆ!

ಸರ್ಕಾರಕ್ಕೆ 3.04 ಕೋಟಿ ರು.ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ. 67 ಲಕ್ಷ ರು.ಮೌಲ್ಯದ 1 ಕೆಜಿ 100 ಗ್ರಾಂ ಚಿನ್ನ, 17.48 ಲಕ್ಷ ರು. ಮೌಲ್ಯದ 23 ಕೆಜಿ ಬೆಳ್ಳಿ ಹಾಗೂ 1.90 ಲಕ್ಷ ರು. ಮೌಲ್ಯದ ವಜ್ರದ ಆಭರಣ ಹೊಂದಿದ್ದಾರೆ.

Latest Videos
Follow Us:
Download App:
  • android
  • ios