Asianet Suvarna News Asianet Suvarna News

ಈ ಬಾರಿ ಕಾಂಗ್ರೆಸ್ ಗ್ಯಾರಂಟಿಗೆ ಮತದಾರ ಮರುಳಾಗುವುದಿಲ್ಲ: ನಟಿ ಶೃತಿ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರ ಮನ ಗೆದ್ದಂತೆ ಲೋಕ ಸಮರದಲ್ಲಿಯೂ ಗೆಲ್ಲಬಹುದು ಎಂದು ಹಗಲು ಕನಸು ಕಾಣುತ್ತಾ ಮತ್ತೆ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. 

Lok Sabha Election 2024 Actress Shruti Slams On Congress Govt gvd
Author
First Published Apr 7, 2024, 7:43 AM IST

ಬಂಗಾರಪೇಟೆ (ಏ.07): ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರ ಮನ ಗೆದ್ದಂತೆ ಲೋಕ ಸಮರದಲ್ಲಿಯೂ ಗೆಲ್ಲಬಹುದು ಎಂದು ಹಗಲು ಕನಸು ಕಾಣುತ್ತಾ ಮತ್ತೆ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಆದರೆ ಈ ಬಾರಿ ಗ್ಯಾರಂಟಿಗಳಿಗೆ ಮತದಾರರು ಮರುಳಾಗದೆ ದೇಶಕ್ಕಾಗಿ ಬಿಜೆಪಿಗೆ ಬೆಂಬಲವಾಗಿ ನಿಲ್ಲಲಿದ್ದಾರೆಂದು ನಟಿ ಶೃತಿ ಹೇಳಿದರು. ಪಟ್ಟಣದ ಆರ್.ಆರ್.ಕಲ್ಯಾಣ ಮಂಟಪದಲ್ಲಿ ಬಿಜೆಪಿ,ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಜನರು ಒಂದು ಬಾರಿ ಗ್ಯಾರಂಟಿ ಯೋಜನೆಗಳನ್ನು ನಂಬಿ ಮೋಸ ಹೋಗಿದ್ದಾರೆ ಮತ್ತೊಮ್ಮೆ ಮೋಸ ಹೋಗಲು ಸಿದ್ದರಿಲ್ಲ ಎಂದರು.

ಗ್ಯಾರಂಟಿ ಹಣ ಸ್ವಂತದ್ದಲ್ಲ: ಇಷ್ಟಕ್ಕೂ ಕಾಂಗ್ರೆಸ್ ನವರು ಗ್ಯಾರಂಟಿಗಳನ್ನು ಅವರ ಸ್ವಂತ ಹಣದಿಂದ ನೀಡಿಲ್ಲ ನಮ್ಮ ತೆರಿಗೆ ಹಣವನ್ನು ನಮಗೇ ನೀಡಿದ್ದಾರೆಂದು ಟೀಕಿಸಿದರು.ದೇಶದ ಸುಭದ್ರೆಯ ದೃಷ್ಟಿಯಿಂದ ದೇಶದ ಜನರು ಮೂರನೇ ಬಾರಿ ಮೋದಿರನ್ನು ಪ್ರಧಾನಿ ಮಾಡಲು ಈಗಾಗಲೇ ಸಂಕಲ್ಪ ಮಾಡಿ ಆಗಿದೆ. ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಲೋಕ ಗೆಲ್ಲಲು ಬೆಂಬಲವಾಗಿ ನಿಂತಿರುವುದು ಆನೆ ಬಲ ಬಂದಿದೆ ಎಂದರು. ಈ ಲೋಕ ಸಮರ ಈ ಬಾರಿ ದೇಶ ಪರ ಹಾಗೂ ವಿರೋಧ ಪರ ನಡೆಯುತ್ತಿದೆ, ದೇಶವನ್ನು ವಿಶ್ವದ ಬಲಿಷ್ಟ ರಾಷ್ಟ್ರಗಳಲ್ಲಿ ಒಂದಾಗಿ ಪ್ರಧಾನಿ ಮೋದಿ ನಿಲ್ಲಿಸಿದ್ದಾರೆ, ಪಾಕಿಸ್ತಾನ ದೇಶವೇ ಮೋದಿರಂತ ನಾಯಕರು ನಮಗೆ ಬೇಕು ಎಂದು ಹೇಳಿತ್ತಿದ್ದಾರೆ ಎಂದರು.ಎನ್‌ಡಿಎ ಅಭ್ಯರ್ಥಿ ಗೆಲವು ಖಚಿತ

ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶಬಾಬು ಮಾತನಾಡಿ ಕ್ಷೇತ್ರದ ೮ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಈ ಬಾರಿ ಮೈತ್ರಿ ಅಭ್ಯರ್ಥಿಯಾದ ನನಗೆ ಅಪಾರ ಬೆಂಬಲವನ್ನು ಬಿಜೆಪಿ ಕಾರ್ಯಕರ್ತರು ನೀಡುತ್ತಿರುವುದನ್ನು ಗಮನಿಸಿದರೆ ಎನ್‌ಡಿಎ ಅಭ್ಯರ್ಥಿ ಗೆಲುವು ಗ್ಯಾರಂಟಿ, ಜಿಲ್ಲೆಯ ಜನರು ಆಶೀರ್ವಾದ ಮಾಡಿದರೆ ಜಿಲ್ಲೆಯ ಸಮಸ್ಯೆಗಳಿಗೆ ದೆಹಲಿಯಲ್ಲಿ ಧ್ವನಿಯಾಗಿ ಹೋರಾಡುವೆ ಎಂದರು.

ಲೋಕಸಭೆಗೆ ಭರ್ಜರಿ ಪ್ರಚಾರ ಆರಂಭ: ಮೊಳಗಿದ ಕಾಂಗ್ರೆಸ್ ಪ್ರಜಾಧ್ವನಿ ರಣಕಹಳೆ

ಟಿಕೆಟ್‌ ತಪ್ಪಿದರೂ ಅಭ್ಯರ್ಥಿಗೆ ಬೆಂಬಲ: ಸಂಸದ ಎಸ್.ಮುನಿಸ್ವಾಮಿ ಮಾತನಾಡಿ ಕೆಲವರಿಗೆ ಟಿಕೆಟ್ ಕೈ ತಪ್ಪಿದಾಗ ಭಂಡಾಯ ಎದ್ದು ರಾದ್ದಾಂತ ಮಾಡಿದ್ದಾರೆ, ಆದರೆ ನಾನು ಹಾಗೆ ಮಾಡದೆ ಟಿಕೆಟ್ ತಪ್ಪಿದರೂ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಪರ ನಿಂತು ಅವರ ಗೆಲುವಿಗೆ ಶ್ರಮಿಸುತ್ತಿರುವೆ ಎಂದು ಹೇಳಿದರು.ಸಭೆಯಲ್ಲಿ ಎಂಎಲ್‌ಸಿಗಳಾದ ಇಂಚರ ಗೋವಿಂದರಾಜು,ವೈ.ಎ.ನಾರಾಯಣಸ್ವಾಮಿ,ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ. ಬಿಜೆಪಿ ಮುಖಂಡರಾದ ಬಿ.ವಿ,ಮಹೇಶ್, ಕೆ.ಚಂದ್ರಾರೆಡ್ಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು, ಪುರಸಭೆ ಸದಸ್ಯ ಕಪಾಲಿಶಂಕರ್, ಜೆಡಿಎಸ್ ಮುಖಂಡ ವಿಶ್ವನಾಥ್, ಮತ್ತಿತರರು ಇದ್ದರು.

Follow Us:
Download App:
  • android
  • ios