Asianet Suvarna News Asianet Suvarna News

ಕಾಂಗ್ರೆಸ್‌ ಗೆಲುವಿಗೆ ಟಾನಿಕ್‌ ಆಗುವರೇ ಲಿಂಗಾಯತರು: 70 ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಸಿದ್ಧ

ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಹಪಹಪಿಸುತ್ತಿರುವ ಕಾಂಗ್ರೆಸ್‌ಗೆ ರಾಜ್ಯದ ಲಿಂಗಾಯತರ ಬಿಜೆಪಿ ಮೇಲಿನ ಅಸಮಾಧಾನ ಪ್ಲಸ್‌ ಪಾಯಿಂಟ್‌ ಆಗಿದೆ. ಲಿಂಗಾಯತರಿಗೆ ಟಿಕೆಟ್‌ ನೀಡಿದರೆ ಬಹುಮತ ಖಚಿತವೆಂದು ಹೇಳಲಾಗುತ್ತಿದೆ.

Lingayaths will be tonic for Congress victory List of 70 ticket aspirants ready sat
Author
First Published Feb 15, 2023, 8:49 PM IST | Last Updated Feb 15, 2023, 8:49 PM IST

ಬೆಂಗಳೂರು (ಫೆ.15): ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಹಪಹಪಿಸುತ್ತಿರುವ ಕಾಂಗ್ರೆಸ್‌ಗೆ ರಾಜ್ಯದ ಲಿಂಗಾಯತರ ಅಸಮಾಧಾನ ಪ್ಲಸ್‌ ಪಾಯಿಂಟ್‌ ಆಗಿದೆ. ಆಯಕಟ್ಟಿನ ಸ್ಥಳದಲ್ಲಿ ಲಿಂಗಾಯತರಿಗೆ ಟಿಕೆಟ್‌ ನೀಡಿದರೆ ಬಹುಮತ ಖಚಿತವೆಂದು ಹೇಳಲಾಗುತ್ತಿದೆ. ಇದಕ್ಕಾಗಿ ಲಿಂಗಾಯತರಿಗೆ 70 ಟಿಕೆಟ್‌ಗಳನ್ನು ನೀಡಲು ಯೋಜನೆ ರೂಪಿಸಿಕೊಂಡಿರುವ ಕಾಂಗ್ರೆಸ್‌ ಇದರಲ್ಲಿ ಮೂರು ಕೆಟಗರಿಗಳನ್ನಾಗಿ ವಿಂಗಡಿಸಿಕೊಂಡಿದೆ ಎಂಬುದು ತಿಳಿದುಬಂದಿದೆ.

ಯಾವ್ಯಾವ ಕ್ಷೇತ್ರದಲ್ಲಿ ಲಿಂಗಾಯತ ನಾಯಕರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ 64 ವಿಧಾನಸಭಾ ಕ್ಷೇತ್ರಗಳ ಲಿಸ್ಟ್. ಈ ಕ್ಷೇತ್ರಗಳಿಗೆ ಲಿಂಗಾಯತ ಟಿಕೆಟ್ ಗಾಗಿ ಡಿಮ್ಯಾಂಡ್ ಮಾಡಿರುವ ಲಿಂಗಾಯತ ನಾಯಕರು. ಮೂರು ಕೆಟಗರಿಯಲ್ಲಿ ಲಿಂಗಾಯತ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಸಿದ್ಧಪಡಿಸಿದೆ. 

ರಾಜ್ಯ ವಿಧಾನಸಭೆ ಚುನಾವಣೆ ಗೆಲ್ಲಲು ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಮಣೆ..?

ಕೆಟಗರಿ A: ಹಾಲಿ ಲಿಂಗಾಯತ ಶಾಸಕರ ಕ್ಷೇತ್ರಗಳು

ಕೆಟಗರಿ B: ಕಳೆದ ಬಾರಿ ಪರಾಭವಗೊಂಡ ಲಿಂಗಾಯತ ಅಭ್ಯರ್ಥಿಗಳು

ಕೆಟಗರಿ C: ಹೊಸದಾಗಿ ಟಿಕೆಟ್ ಬಯಸುತ್ತಿರುವ ಲಿಂಗಾಯತ ಆಕಾಂಕ್ಷಿಗಳು 

ಯಾವ್ಯಾವ ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ. ಈ ಪಟ್ಟಿಯ ಪೈಕಿ ಬಹುತೇಕರಿಗೆ ಟಿಕೆಟ್‌ ನೀಡುವ ಮೂಲಕ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮಾಡಿರುವ ಎಡವಟ್ಟನ್ನು ಸದುಪಯೋಗ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಾಗಿದೆ.

ಹಾಲಿ ಶಾಸಕರ ಕ್ಷೇತ್ರಗಳು (ಕೆಟಗರಿ-A)
1. ದಾವಣಗೆರೆ ದಕ್ಷಿಣ
2. ಭದ್ರಾವತಿ
3. ಬೆಳಗಾವಿ ಗ್ರಾಮೀಣ
4. ಚಿಕ್ಕೋಡಿ ಸದಲಗಾ
5. ಬೈಲಹೊಂಗಲ
6. ಬಸವನ ಬಾಗೇವಾಡಿ
7. ಬಬಲೇಶ್ವರ
8. ಇಂಡಿ
9. ಜಮಖಂಡಿ
10. ಅಫ್ಜಲ್‌ಪುರ 
11. ಶಹಾಪುರ
12. ಭಾಲ್ಕಿ 
13. ಹುಮ್ನಾಬಾದ್
14. ಕುಷ್ಟಗಿ

Lingayat Community: ರಾಜ್ಯದಲ್ಲಿ ಮತ್ತೆ ಲಿಂಗಾಯತ ಸ್ವತಂತ್ರಧರ್ಮದ ಕೂಗು!

ಕಳೆದ ಬಾರಿ ಪರಾಭವಗೊಂಡರ ಅಭ್ಯರ್ಥಿಗಳ ಕ್ಷೇತ್ರಗಳು (ಕೆಟಗರಿ B)
1. ದಾಣಗೆರೆ ಉತ್ತರ
2. ಚಿತ್ರದುರ್ಗ
3. ತಿಪಟೂರು
4. ಬೆಳಗಾವಿ ಉತ್ತರ
5. ಕಾಗವಾಡ
6. ಕಿತ್ತೂರು
7. ರಾಮದುರ್ಗ
8. ಧಾರವಾಡ
9. ಮುದ್ದೇಬಿಹಾಳ
10. ಸಿಂಧಗಿ
11. ಬಾಗಲಕೋಟೆ
12. ಹುನಗುಂದ
13. ಬೀಳಗಿ
14. ರೋಣ
15. ಬ್ಯಾಡಗಿ
16. ಹಿರೆಕೆರೂರು
17. ಸೇಡಂ
18. ಆಳಂದ
19. ಬೀದರ್ ದಕ್ಷಿಣ
20. ಸಿಂಧನೂರು 
21. ಯಲಬುರ್ಗಾ

ಹೊಸ ಆಕಾಂಕ್ಷಿಗಳು ಟಿಕೆಟ್ ಬಯಸುತ್ತಿರುವ ಕ್ಷೇತ್ರಗಳು (ಕೆಟಗರಿ C)
1. ರಾಜಾಜಿನಗರ
2. ಚಿಕ್ಕಪೇಟೆ
3. ತುಮಕೂರು ಸಿಟಿ
4. ಚನ್ನಗಿರಿ
5. ಶಿವಮೊಗ್ಗ
6. ಶಿಕಾರಿಪುರ
7. ಸಾಗರ
8. ಕೃಷ್ಣ ರಾಜ (ಮೈಸೂರು)
9. ಗುಂಡ್ಲುಪೇಟೆ
10. ಮಡಿಕೇರಿ
11. ಅರಸೀಕೆರೆ
12. ಬೇಲೂರು
13. ಚಿಕ್ಕಮಗಳೂರು
14. ತರೀಕೆರೆ
15. ಕಡೂರು
16. ಅಥಣಿ
17. ಸವದತ್ತಿ 
18. ಅರಬಾವಿ
19. ಗೋಕಾಕ್
20. ಹು-ಧಾ ಕೇಂದ್ರ
21. ಹು-ಧಾ ಪಶ್ಚಿಮ
22. ಕಲಘಟಗಿ
23. ದೇವರ ಹಿಪ್ಪರಗಿ
24. ತೇರದಾಳ
25. ನರಗುಂದ
26. ಶಿಗ್ಗಾವಿ 
27. ರಾಣೆಬೆನ್ನೂರು
28. ಕಲಬುರಗಿ ದಕ್ಷಿಣ
29. ಯಾದಗಿರಿ

Latest Videos
Follow Us:
Download App:
  • android
  • ios