Asianet Suvarna News Asianet Suvarna News

ಲಿಂಗಾಯತರನ್ನ ಸೆಳೆಯಲು ಕಾಂಗ್ರೆಸ್‌ ಸಭೆ

*  ಲಿಂಗಾಯತ ಸಮುದಾಯದ ಶಾಸಕರಿಂದ ಸಭೆ
*  2ನೇ ಹಂತದ ನಾಯಕತ್ವ ಬೆಳೆಸುವ ಬಗ್ಗೆಯೂ ಚರ್ಚೆ
*  ಸಮುದಾಯದ ಮಠಾಧೀಶರ ವಿಶ್ವಾಸ ಗಳಿಸಲು ಸಲಹೆ
 

Lingayat Community Congress Leaders Held Meeting Sep 23rd in Bengaluru grg
Author
Bengaluru, First Published Sep 24, 2021, 7:09 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.24): ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಕಾಂಗ್ರೆಸ್‌ನತ್ತ(Congress) ಸೆಳೆಯುವುದು ಹಾಗೂ ಸಮುದಾಯದ ಎರಡನೇ ಹಂತದ ನಾಯಕರಿಗೆ ಪ್ರಾತಿನಿಧ್ಯ ಸಿಗುವಂತೆ ಮಾಡುವ ಕುರಿತು ಕಾಂಗ್ರೆಸ್‌ನ ವೀರಶೈವ ಲಿಂಗಾಯತ ಸಮುದಾಯದ ನಾಯಕರು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಅವರು, ಪಕ್ಷದ ಅಭ್ಯರ್ಥಿಗಳ ಪರ ಮಠಾಧೀಶರನ್ನು ವಿಶ್ವಾಸಕ್ಕೆ ಪಡೆಯುವುದು. ಪಕ್ಷಕ್ಕೆ ಸಮುದಾಯದ ಮತಗಳನ್ನು ಸೆಳೆಯುವುದು. ಕೆಪಿಸಿಸಿ ಹಾಗೂ ಎಐಸಿಸಿ ಮಟ್ಟದಲ್ಲಿ ಪದಾಧಿಕಾರಿಗಳ ಆಯ್ಕೆ ವೇಳೆ ಸಮುದಾಯದವರಿಗೆ ಆದ್ಯತೆ ಸಿಗುವಂತೆ ಮಾಡುವುದು. ಪಕ್ಷ ಅಧಿಕಾರಕ್ಕೆ ಬಂದ ಬಳಿಕವೂ ಎರಡನೇ ಹಂತದ ನಾಯಕರಿಗೆ ಅವಕಾಶ ಸಿಗುವಂತೆ ಮಾಡುವ ಕುರಿತು ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

'2023ಕ್ಕೆ ಕಾಂಗ್ರೆಸ್‌ಗೆ ಅಧಿಕಾರ : ಸಿದ್ದರಾಮಯ್ಯಗೆ ಸಿಎಂ ಪಟ್ಟ'

ಸಭೆ ಬಳಿಕ ಮಾತನಾಡಿದ ಶಾಸಕ ಬಸನಗೌಡ ಬಾದರ್ಲಿ, ಕಾಂಗ್ರೆಸ್‌ನಲ್ಲಿರುವ ವೀರಶೈವ ಲಿಂಗಾಯತ(Lingayat) ನಾಯಕರ ಸಭೆ ನಡೆಸಿದ್ದೇವೆ. ಪಕ್ಷಕ್ಕೆ ವೀರಶೈವ ಲಿಂಗಾಯತರನ್ನು ಸೆಳೆಯುವುದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು, ವೀರಶೈವ ಲಿಂಗಾಯತರನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಯುವ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಪರಿಷತ್‌ ಸದಸ್ಯ ನಾಗರಾಜ್‌ ಛಬ್ಬಿ, ನಾಯಕತ್ವ ಕೊರತೆ ನಿಗಿಸುವ ಬಗ್ಗೆ ಚರ್ಚೆ ಆಗಿದೆ. ಹೆಚ್ಚಿನ ಆದ್ಯತೆ ಸಮುದಾಯ ಕಾರ್ಯಕರ್ತರಿಗೆ ನೀಡಬೇಕು. ಈ ಹೋರಾಟ ಸದ್ಯಕ್ಕೆ ಮುಗಿಯುವುದಿಲ್ಲ. ಡಿ.ಕೆ. ಶಿವಕುಮಾರ್‌ ಅವರು ಸಹಕಾರ ನೀಡಿದ್ದಾರೆ. ವಿಪಕ್ಷ ನಾಯಕರನ್ನೂ ನಾವು ಮನವಿ ಮಾಡುತ್ತೇವೆ. ಅವರೆಲ್ಲರೂ ನಮ್ಮ ಸಮಾಜದ ಜತೆ ಇರಲಿದ್ದಾರೆ ಎಂದರು.
 

Follow Us:
Download App:
  • android
  • ios