ಪ್ರಧಾನಿ ಮೋದಿ ಮಹಾಭಾರತದ ಶ್ರೀಕೃಷ್ಣನಂತೆ ಬಿಜೆಪಿಗೆ ದೇಶದ್ರೋಹಿ ಪ್ರತಿಪಕ್ಷಗಳಲ್ಲಿರುವ ದುರ್ಯೋಧನ ದುಶ್ಶಾಸನರನ್ನು ಸಂಹರಿಸುವ ಕಾಯಕಕ್ಕೆ ಮಾರ್ಗದರ್ಶಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಜಾಲೌನ್‌(ಉ.ಪ್ರ): ಪ್ರಧಾನಿ ಮೋದಿ ಮಹಾಭಾರತದ ಶ್ರೀಕೃಷ್ಣನಂತೆ ಬಿಜೆಪಿಗೆ ದೇಶದ್ರೋಹಿ ಪ್ರತಿಪಕ್ಷಗಳಲ್ಲಿರುವ ದುರ್ಯೋಧನ ದುಶ್ಶಾಸನರನ್ನು ಸಂಹರಿಸುವ ಕಾಯಕಕ್ಕೆ ಮಾರ್ಗದರ್ಶಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಯೋಗಿ, ‘ಪ್ರಸ್ತುತ ನಡೆಯುತ್ತಿರುವುದು ರಾಮಭಕ್ತರು ಮತ್ತು ರಾಮದ್ರೋಹಿಗಳ ನಡುವಿನ ಸಮರವಾಗಿದ್ದು, ಇತಿಹಾಸದಂತೆ ಈಗಲೂ ರಾಮದ್ರೋಹಿಗಳು ಸೋಲುವುದು ಖಚಿತ.

 ಕಾಂಗ್ರೆಸ್‌-ಎಸ್ಪಿ ಆಡಳಿತಾವಧಿಯಲ್ಲಿ ರಾಮಭಕ್ತರ ಮೇಲೆ ಭಯೋತ್ಪಾದನಾ ದಾಳಿ ನಡೆದರೂ ಇಂದು ರಾಮಲಲ್ಲಾ ಭವ್ಯ ಮಂದಿರದಲ್ಲಿ ಇದ್ದಾನೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು’ ಎಂದು ತಿಳಿಸಿದರು.

ಬಡ ಸೈನಿಕರು, ಶ್ರೀಮಂತ ಸೈನಿಕರ ವರ್ಗ ಸೃಷ್ಟಿ ಎಂದ ರಾಹುಲ್‌ ವಿರುದ್ಧ ದೂರು