Asianet Suvarna News Asianet Suvarna News

ಸದನದ ಸದಸ್ಯತ್ವದಿಂದ ಮುನಿರತ್ನ ಅಮಾನತ್ತಿಗೆ ಸಭಾಧ್ಯಕ್ಷರಿಗೆ ಸಚಿವ ಎಚ್.ಕೆಪಾಟೀಲ ಆಗ್ರಹ!

ವಿಧಾನಸಭೆ ಸದಸ್ಯತ್ವದಿಂದ ಕೆ.ಮುನಿರತ್ನ ರವರನ್ನು ಅಮಾನತುಗೊಳಿಸಬೇಕೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ ರವರು ವಿಧಾನಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ.ಖಾದರ್‌ರವರಿಗೆ ಪತ್ರ ಬರೆದಿದ್ದಾರೆ.  

letter from law minister hk patil to speaker on suspension of mla munirathna gvd
Author
First Published Sep 23, 2024, 10:50 PM IST | Last Updated Sep 23, 2024, 10:50 PM IST

ಬೆಂಗಳೂರು (ಸೆ.22): ವಿಧಾನಸಭೆ ಸದಸ್ಯತ್ವದಿಂದ ಕೆ.ಮುನಿರತ್ನ ರವರನ್ನು ಅಮಾನತುಗೊಳಿಸಬೇಕೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ ರವರು ವಿಧಾನಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ.ಖಾದರ್‌ರವರಿಗೆ ಪತ್ರ ಬರೆದಿದ್ದಾರೆ.  ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧ:ಪತನಕ್ಕೆ ಕಾರಣವಾದ ಅತ್ಯಂತ ಹೇಯವಾದ, ಅಸಭ್ಯವಾದ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಈ ಘಟನೆ ಕ್ಷಮಾರ್ಹವಲ್ಲ ಎಂದು ಕಾನೂನು ಸಚಿವರು ಅಭಿಪ್ರಾಯಪಟ್ಟಿದ್ದಾರೆ. 

ವಿಧಾನಸಭೆಯ ಸದಸ್ಯರಿಗೆ ನೈತಿಕ ಮೌಲ್ಯಗಳ ನಿಯಂತ್ರಣ ಹೇರುವ “ನೀತಿ-ನಿರೂಪಣಾ ಸಮಿತಿ” (Ethics Committee of State Legislature) ಎಂದೆಂದಿಗಿಂತಲೂ ಇಂದು ರಚಿಸಬೇಕಾದ ಅತೀ ಅವಶ್ಯಕತೆ ಇದೆ. ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆಯನ್ನು ಮೌಲ್ಯಗಳನ್ನು ಗಾಳಿಗೆ ತೂರುವ ನಡತೆಗಳನ್ನು ನಿಯಂತ್ರಿಸುವ ನಿಯಮಗಳನ್ನು ತಕ್ಷಣ ರಚಿಸಬೇಕು. 

ಭಕ್ತರ, ಜನರ ಭಾವನೆಗಳ ಜೊತೆ ಆಟ ಸರಿಯಲ್ಲ: ಸಚಿವ ಎಂ.ಬಿ.ಪಾಟೀಲ್

ಸಂವಿಧಾನದತ್ತವಾಗಿ ಸಭಾಧ್ಯಕ್ಷರಿಗೆ ಪ್ರದತ್ತವಾಗಿರುವ ಪರಾಮಾಧಿಕಾರವನ್ನು ಚಲಾಯಿಸಿ ವಿಶೇಷ ಅಪರೂಪದ ಕ್ರಮ ಕೈಗೊಳ್ಳುವ ಮೂಲಕ ವಿಧಾನಸಭೆ ಸದಸ್ಯರಾದ ಶ್ರೀ ಕೆ.ಮುನಿರತ್ನ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಮತ್ತು “ನೀತಿ-ನಿರೂಪಣಾ ಸಮಿತಿ” (Ethics Committee of State Legislature) ರಚನೆ ಮಾಡಿ ಆ ಸಮಿತಿಯ ಮೂಲಕ ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳವರೆಲ್ಲಾ ದಾಪುಗಾಲನ್ನಿಡಬೇಕು. ಯಾವುದೇ ಅಸಭ್ಯ ವರ್ತನೆ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು. ಇಂತಹ ಅಸಭ್ಯ ವರ್ತನೆಗಳಿಗೆ ಶೂನ್ಯ-ಸಹನೆ ಇಡೀ ವಿಧಾನ ಮಂಡಲ ಹೊಂದಬೇಕಾದ ಸಂದರ್ಭ ಹಾಗೂ ಜನಾಪೇಕ್ಷೆ ಸ್ಪಷ್ಟವಾಗಿ ಕಾಣುತ್ತಿದೆ.   

ಈ ಘಟನೆಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೌಲ್ಯಗಳಿಗೆ, ಸತ್ಸಂಪ್ರದಾಯಗಳಿಗೆ ತೀವ್ರವಾದ ಕೊಡಲಿ ಪೆಟ್ಟು ಬಿದ್ದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಾನಸಭೆಯ ಘನತೆ, ಗೌರವಕ್ಕೆ ತೀವ್ರವಾದ ಧಕ್ಕೆಯುಂಟಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧ:ಪತನವನ್ನು ನಿಯಂತ್ರಿಸಲು ತೀವ್ರವಾಗಿ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಭಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.  ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಈ ಕೆಳಕಂಡ ನಿಯಮಗಳನ್ವಯ ಕ್ರಮ ಕೈಗೊಳ್ಳಬೇಕೆಂದು ಸಚಿವರು ಒತ್ತಾಯಿಸಿದ್ದಾರೆ. 

“196 ಸಮಿತಿಯ ಮುಂದೆ ಹಕ್ಕುಬಾದ್ಯತೆ ಪ್ರಶ್ನೆಯನ್ನು ಕಳುಹಿಸಲು ಅಧ್ಯಕ್ಷರ ಅಧಿಕಾರ: ಈ ನಿಯಮಗಳಲ್ಲಿ ಏನೇ ಹೇಳಿದ್ದರೂ, ಅಧ್ಯಕ್ಷರು ಹಕ್ಕುಬಾದ್ಯತೆಯ ಯಾವುದೇ ಪ್ರಶ್ನೆಯನ್ನು ಪರಿಶೀಲನೆಗಾಗಿ, ತನಿಖೆಗಾಗಿ ಅಥವಾ ವರದಿಗಾಗಿ ಹಕ್ಕುಬಾದ್ಯತೆ ಸಮಿತಿಗೆ ಕಳುಹಿಸಬಹುದು” ಅದು ಅಲ್ಲದೇ ನಿಯಮ 273(I) ಸಮಿತಿಯಿಂದ ಪ್ರಶ್ನೆಗಳ ಪರಿಶೀಲನೆ: ತನಗೆ ಒಪ್ಪಿಸುವ ಪ್ರತಿಯೊಂದು ವಿಷಯವನ್ನು ಸಮಿತಿಯು ಪರಿಶೀಲಿಸತಕ್ಕದ್ದು ಮತ್ತು ಪ್ರತಿಯೊಂದು ಸಂದರ್ಭದ ಸತ್ಯಾಂಶಗಳನ್ನು ನೋಡಿ, ಹಕ್ಕುಬಾದ್ಯತೆಯ ಉಲ್ಲಂಘನೆಯು ನಡೆದಿದೆಯೇ ಎಂಬುದನ್ನು ನಿರ್ಧರಿಸತಕ್ಕದ್ದು. 

ಕಲಬುರಗಿಯಲ್ಲಿ ಅಣ್ಣನ ಪ್ರೀತಿಯ ವಿವಾದ: ತಮ್ಮನ ಕೊಲೆಯಲ್ಲಿ ಅಂತ್ಯ

ಉಲ್ಲಂಘನೆಯಾಗಿದ್ದರೇ ಉಲ್ಲಂಘನೆಯ ಸ್ವರೂಪ, ಉಲ್ಲಂಘನೆಗೆ ಅವಕಾಶ ಕೊಟ್ಟಿರುವಂತಹ ಸಂದರ್ಭಗಳು ಇವುಗಳನ್ನು ನಿರ್ಧರಿಸತಕ್ಕುದು ಮತ್ತು ಈ ಸಂದರ್ಭದಲ್ಲಿ ತಾನು ಯುಕ್ತವೆಂದು ತಿಳಿಯುವಂಥ ಶಿಫಾರಸ್ಸುಗಳನ್ನು ಮಾಡತಕ್ಕುದು. ನಿಯಮ 273 (II) ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನು ಸಹ ತನ್ನ ವರದಿಯಲ್ಲಿ ತಿಳಿಸಬಹುದು. ಮೇಲ್ಕಂಡ ನಿಯಮಗಳಂತೆ ಕ್ರಮ ಕೈಗೊಂಡು ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಚಿವರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios