* ಸ್ಯಾಂಟ್ರೋ ರವಿ ಯಾರೆಂಬುದು ನನಗೆ ಗೊತ್ತಿಲ್ಲ* ನಿಮ್ಮದು ಓರಿಜಿನಲ್ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್ ಪಕ್ಷ * ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ದಚಿತ್ರ ಪ್ರದರ್ಶನದ ಬಗ್ಗೆ ವಿವಾದ ಸಲ್ಲದು

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಜ.07): ಈವರೆಗೆ ನನಗೆ ಸ್ಯಾಂಟ್ರೋ‌ ರವಿ ಯಾರೆಂಬುದು ನನಗೆ ಗೊತ್ತಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾರೆಂದು ತಿಳಿಯಲಿ. ಅವರು ಯಾರಿಗೆ ಶಿಷ್ಯರಾಗಿದ್ದರು, ಯಾರಿಗೆ ಚಹಾ ಕೊಡುತ್ತಿದ್ದರೆಂದು ತಿಳಿದುಕೊಂಡು ಮಾತನಾಡಬೇಕು ಎಂದು ಸಂಸದ ಡಿ.ಕೆ. ಸುರೇಶ್‌ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೌಡಿ ಶೀಟರ್ ಸ್ಯಾಂಟ್ರೊ ರವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಸರ್ ಅನ್ನುತ್ತಾರೆಂಬ ಸಂಸದ ಡಿಕೆ ಸುರೇಶ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಡಿ.ಕೆ. ಶಿವಕುಮಾರ್‌ ಯಾರಿಗೆ ಶಿಷ್ಯರಾಗಿದ್ದು, ಚಹಾ ಕೊಡುತ್ತಿದ್ದರು. ಅವರ ಪೂರ್ವಾಶ್ರಮ ಏನು? ಎಂಬುದನ್ನು ನೋಡಿಕೊಂಡು ಡಿ.ಕೆ. ಸುರೇಶ್ ಮಾತನಾಡಬೇಕು ಎಂದು ಟಾಂಗ್‌ ನೀಡಿದರು. 

National Youth Festival 2023: ಯವಜನೋತ್ಸವ ವೆಬ್‌ ಪೋರ್ಟಲ್‌ಗೆ ಚಾಲನೆ

ಯಾರದ್ದೋ ಹೋರಾಟ ನಿಮ್ಮ ಲೆಕ್ಕಕ್ಕೆ ಬರೊಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಿಡಿಕಾರಿದ ಪ್ರಹ್ಲಾದ್ ಜೋಶಿ, ರಾಮಮಂದಿರ ಉದ್ಘಾಟಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಮೇಸ್ತ್ರಿನಾ?, ಗೌಂಡಿನಾ? ಎಂದು ಕೇಳಿದ್ದಾರೆ. ರಾಮಮಂದಿರ ಉದ್ಘಾಟಿಸುತ್ತೇವೆಂದರೆ ಯಾಕೆ ಹೊಟ್ಟೆ ಕಿಚ್ಚು. ರಾಮನ ಬಗ್ಗೆ, ಹಿಂದೂಗಳ ಬಗ್ಗೆ ಯಾಕಿಷ್ಟು ದ್ವೇಷ? ಖರ್ಗೆಗೆ 80 ವರ್ಷ ಅಂದರೆ 5 ವರ್ಷದವರಿದ್ದಾಗ ಸ್ವತಂತ್ರ ಹೋರಾಟ ಮಾಡಿದ್ದರಾ? ಯಾರೋ ಹೋರಾಟ ಮಾಡಿದ್ದು ನಿಮ್ಮ ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ ಎಂದು ವ್ಯಂಗ್ಯ ಮಾಡಿದರು.

ಸ್ತಬ್ದ ಚಿತ್ರದ ಬಗ್ಗೆ ವಿವಾದ ಸಲ್ಲದು: ಗಣ ರಾಜ್ಯೋತ್ಸವ ದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಸ್ತಬ್ಧ ಚಿತ್ರ ಸೆಲೆಕ್ಷನ್ ಗೆ ಒಂದು ವ್ಯವಸ್ಥೆ ಇದೆ. ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳು ಸೇರಿ ಒಟ್ಟು 36 ಸ್ತಬ್ದ ಚಿತ್ರಗಳಲ್ಲಿ 12 ಸ್ತಬ್ಧಚಿತ್ರ ಮಾತ್ರ ಸಲೆಕ್ಟ್ ಆಗುತ್ತವೆ. 13 ವರ್ಷ ಕರ್ನಾಟಕ ರಾಜ್ಯಕ್ಕೆ ಅವಕಾಶ ಸಿಕ್ಕಿದೆ. 36 ಸ್ತಬ್ದ ಚಿತ್ರ ಮೆರವಣಿಗೆಗೆ ಒಂದೂವರೆ ತಾಸು ಬದಲು 4 ತಾಸು ಆಗುತ್ತದೆ. ತಜ್ಞರ ಸಮಿತಿಯಿಂದ ಸ್ತಬ್ಧ ಚಿತ್ರದ ಆಯ್ಕೆ ನಡೆಯುತ್ತದೆ. ಎಲ್ಲವನ್ನೂ ವಿವಾದ ಮಾಡುವ ಕೆಲಸ ಆಗಲಾರದು ಎಂದರು. 

ಕಳಸಾ ಬಂಡೂರಿ, ಭದ್ರಾ ಯೋಜನೆ ಸೇರಿ ಜಲ ನೆಲ ಸಂಸ್ಕೃತಿಗೆ ಕೇಂದ್ರ ಮಾನ್ಯತೆ ನೀಡಿದೆ. ಈ ವಿಚಾರ ಕುರಿತು ಸಿಎಂ ಕೂಡ ಪ್ರಯತ್ನ ಮಾಡ್ತೀವಿ ಎಂದಿರೋದಕ್ಕೆ ರಿಯಾಕ್ಷನ್ ನೀಡಿದ ಅವರು, ನಾನು ಸಹ ಸ್ತಬ್ಧ ಚಿತ್ರಕ್ಕೆ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇನೆ. ಮೀಸಲಾತಿ ಬಗ್ಗೆ ಸಿಎಂ ಬೊಮ್ಮಾಯಿ ಉತ್ತಮ ಹೆಜ್ಜೆಯಿಟ್ಟಿದ್ದಾರೆ ಎಂದರು.

ಮೀಸಲಾತಿ ಒದಗಿಸಲು ಸಿಎಂ ದೃಢ ಹೆಜ್ಜೆ: ಕೇಂದ್ರ ಸಚಿವ ಜೋಶಿ

ನಿಮ್ಮದು ನಕಲಿ ಕಾಂಗ್ರೆಸ್‌ ಪಕ್ಷ: ನಿಮ್ಮ ಕಾಂಗ್ರೆಸ್ ಪಕ್ಷದಂತೆ ಸಣ್ಣಪುಟ್ಟ ಅಥವಾ ದೊಡ್ಡ ಪಾರ್ಟಿಗಳಿವೆ. ಇಂದಿರಾ, ನೆಹರು, ರಾಜೀವ್ ಗಾಂಧಿ ಹೆಸರು ಎಷ್ಟು ಕಡೆ ನಾಮಕರಣ ಮಾಡಿದಿರಿ, ಭಗತ್ ಸಿಂಗ್, ಅಂಬೇಡ್ಕರ್, ಲಾಲಾ ಲಜಪೂತ್ ರಾಯ್, ಸುಭಾಷ್ ಚಂದ್ರ ಭೋಷ್ ಹೆಸರಿಟ್ಟಿದ್ದೀರಾ ಓರಿಜಿನಲ್ ಕಾಂಗ್ರೆಸ್ ಅಲ್ಲ. ನಕಲಿ ಕಾಂಗ್ರೆಸ್ ಪಕ್ಷ ನಿಮ್ಮದು.‌ ರಾಹುಲ್ ಗಾಂಧಿ ಹಿಂದೆ ಓಡಾಡುವವರು ನೀವು ಸ್ವತಂತ್ಯ ಹೋರಾಟಕ್ಕಾಗಿ ಬಿಜೆಪಿ ನಾಯಿ ಸಿಕ್ಕಿಲ್ಲ ಎಂಬುದು ನಿಮಗೆ ಶೋಭೆ ತರಲ್ಲ ಎಂದು AICC ಖರ್ಗೆ ವಿರುದ್ದ ಪ್ರಹ್ಲಾದ್ ಜೋಶಿ ಕಿಡಿಕಾರಿದರು..