ರಾಜಕಾರಣದಲ್ಲಿ ಧರ್ಮವಿರಲಿ, ನಾವು ಮಠಗಳ ಜೊತೆ ಇದ್ದೇವೆ: ಡಿ.ಕೆ.ಶಿವಕುಮಾರ್
ಧರ್ಮ ಎಲ್ಲರನ್ನು ಕಟ್ಟುವ ಮಾರ್ಗ, ಧರ್ಮ ಅಂದರೆ ಎಲ್ಲರನ್ನು ಪ್ರೀತಿಸುವ ಮಾರ್ಗ. ಸಮಾನತೆಯಿಂದ ಎಲ್ಲರ ನೋಡುವ ಮಾರ್ಗ ಧರ್ಮ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮಾತನಾಡಿದರು.
ವಿಜಯಪುರ (ಫೆ.04): ಧರ್ಮ ಎಲ್ಲರನ್ನು ಕಟ್ಟುವ ಮಾರ್ಗ, ಧರ್ಮ ಅಂದರೆ ಎಲ್ಲರನ್ನು ಪ್ರೀತಿಸುವ ಮಾರ್ಗ. ಸಮಾನತೆಯಿಂದ ಎಲ್ಲರ ನೋಡುವ ಮಾರ್ಗ ಧರ್ಮ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮಾತನಾಡಿದ ಅವರು, ಶಾಂತಿ ನೆಮ್ಮದಿ ಮೂಡಿಸಿಕೊಳ್ಳಲು ಇಲ್ಲಿ ಬಂದಿದ್ದೇವೆ. ಇಲ್ಲಿ ಬಂದಿರೋದೆ ಪುಣ್ಯ. ನಮಗೆ ಜ್ಞಾನದಿಂದ ಅರಿವು ಮೂಡಿಸುವ ಸಂದರ್ಭವಿದು. 50 ವರ್ಷದಲ್ಲೆ ಕೊಪ್ಪಳದಂತ ಜಾತ್ರೆಯನ್ನು ಕಂಡಿಲ್ಲ. 10 ಲಕ್ಷ ಜನರು ಜಾತ್ರೆಯಲ್ಲಿದ್ದರು. ಮನೆ ಕಾಪಾಡಿದಂತೆ, ಮಠವನ್ನು ನಾವು ಕಾಪಾಡಬೇಕು. ಮನೆ ಮಠವನ್ನು ನೋಡಿಕೊಳ್ಳಬೇಕು. ಮಠಗಳಿಗೆ ಭಕ್ತರು ಸಹಕಾರ ನೀಡಬೇಕು ಎಂದರು.
ಧರ್ಮದಲ್ಲಿ ರಾಜಕಾರಣ ಮಾಡ್ತಿದ್ದಾರೆ. ರಾಜಕಾರಣದಲ್ಲಿ ಧರ್ಮವಿರಲಿ, ಧರ್ಮದಲ್ಲಿ ರಾಜಕಾರಣ ಮಾಡಬಾರದು. ಈ ಬಗ್ಗೆ ಈಗ ನಾನು ಮಾತನಾಡಲ್ಲ. ಈಗ ಧರ್ಮದಲ್ಲಿ ರಾಜಕಾರಣ ಬೆರೆಸುತ್ತಿದ್ದಾರೆ. ಗ್ಯಾರಂಟಿ ಮಾಡಿದ್ದು ನಾನು ಅಂತ ಹೇಳಲ್ಲ. ಬಸ್ ಪ್ರೀ, ಕರೆಂಟ್ ಪ್ರೀ.. ಎಂದಾದರೂ ಇಂಥದ್ದು ಕಂಡಿದ್ದೀರಾ? ಜನರ ಅಕೌಂಟ್‌ಗೆ ತಿಂಗಳಿಗೆ ಮೂರರಿಂದ ₹5 ಸಾವಿರ ಅಕೌಂಟ್‌ಗೆ ನೀಡುತ್ತಿದ್ದೇವೆ. ರೈತರನ್ನು ಬದುಕಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕ ಸರ್ಕಾರ ನಿಮ್ಮ ರಕ್ಷಣೆಗೆ ಬದ್ಧವಾಗಿದೆ. ಮಠಗಳ ಜೊತೆಯಲ್ಲಿ ಇದ್ದೇವೆ ಎಂದು ಹೇಳಲು ನಾವು ಬಂದಿದ್ದೇವೆ. ಇತಿಹಾಸ ಯಾರು ಮರೆಮಾಚಲು ಸಾಧ್ಯವಿಲ್ಲ. ನಾನು ಸಹ ಈ ಮಠದ ಭಕ್ತ. ನಾನು ಡಿಸಿಎಂ ಅನ್ನೋದು ಬದಿಗಿಡಿ, ಈ ಮಠದ ಭಕ್ತ ಅಂತ ನೋಡಿ ಎಂದರು.
'ಹೇ ಪೂನಂ ಪಾಂಡೆ... ನೀವು ಇಟ್ಟಿರುವ ಹೆಜ್ಜೆಗೆ ಸೆಲ್ಯೂಟ್': ನಿರ್ದೇಶಕ ರಾಮ್ ಗೋಪಾಲ್ ವರ್ಮಾ!
ಒಗ್ಗಟ್ಟಿಗಾಗಿ ಪ್ರತ್ಯೇಕ ದೇಶದ ಹೇಳಿಕೆ ನೀಡಿರಬಹುದು: ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರ ಮಾಡಬೇಕೆಂಬ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಸುರೇಶ್ ಕುಮಾರ್ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ದೇಶವನ್ನು ಒಗ್ಗಟ್ಟಾಗಿಡಬೇಕು, ರಾಜ್ಯಗಳಿಗೆ ಸಮಾನವಾಗಿ ಹಣ ಹಂಚಬೇಕೆಂಬ ಉದ್ದೇಶದಿಂದ ಆ ರೀತಿಯ ಹೇಳಿಕೆ ನೀಡಿದ್ದಾರೆಂದು ಡಿ.ಕೆ.ಸುರೇಶ್ ಹೆಸರೆತ್ತದೆ ತಿಳಿಸಿದರು. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಭಾರತವನ್ನು ಒಟ್ಟುಗೂಡಿಸುವ ಕೆಲಸ ಮಾಡಿದೆ. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಕೇಂದ್ರ ಸರ್ಕಾರ ದೇಶದ ಎಲ್ಲ ರಾಜ್ಯಗಳಿಗೆ ಸಮಾನವಾಗಿ ಹಣ ಹಂಚಬೇಕು, ದೇಶವನ್ನು ಒಂದಾಗಿಡಬೇಕು ಎಂಬುದನ್ನು ಒತ್ತಿ ಹೇಳುವಾಗ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿರಬಹುದು ಎಂದರು.