ಸ್ವಾಮೀಜಿಗಳು ಬೇಕಿದ್ರೆ ನೇರವಾಗಿ ಹೈಕಮಾಂಡ್‌ಗೆ ಮಾತನಾಡಲಿ: ಸಚಿವ ಚಲುವರಾಯಸ್ವಾಮಿ
ಸ್ವಾಮೀಜಿಗಳ ಬಗ್ಗೆ ನಾವು ಮಾತನಾಡೋದು ಸೂಕ್ತ ಅಲ್ಲ, ಇನ್ನು ಅನಾವಶ್ಯಕ ಚರ್ಚೆ ರಾಜಕೀಯದಲ್ಲಿ ಯಾವಾಗಲೂ ನಡೆಯುತ್ತವೆ. ಅತ್ತ ಗಮನಹರಿಸುವ ಅವಶ್ಯಕತೆಯೂ ಇಲ್ಲ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು, ಹೈಕಮಾಂಡ್ ಭದ್ರವಾಗಿದೆ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ
ಬೀದರ್(ಜೂ.30): ರಾಜಕೀಯ ವಿಷಯಗಳನ್ನು ಸ್ವಾಮೀಜಿಗಳು ಸಾರ್ವಜನಿಕವಾಗಿ ಮಾತನಾಡೋದು ಸರಿಯೋ ತಪ್ಪೋ ಎಂಬುವದನ್ನು ಅವರೇ ಯೋಚನೆ ಮಾಡಬೇಕು. ಏನಾದರೂ ಇದ್ದರೆ ಸ್ವಾಮೀಜಿಗಳೇ ನೇರವಾಗಿ ಹೈಕಮಾಂಡ್ ಜೊತೆ ಚರ್ಚೆ ಮಾಡಿದರೆ ಸೂಕ್ತ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಸ್ವಾಮೀಜಿಗಳ ಬಗ್ಗೆ ನಾವು ಮಾತನಾಡೋದು ಸೂಕ್ತ ಅಲ್ಲ, ಇನ್ನು ಅನಾವಶ್ಯಕ ಚರ್ಚೆ ರಾಜಕೀಯದಲ್ಲಿ ಯಾವಾಗಲೂ ನಡೆಯುತ್ತವೆ. ಅತ್ತ ಗಮನಹರಿಸುವ ಅವಶ್ಯಕತೆಯೂ ಇಲ್ಲ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು, ಹೈಕಮಾಂಡ್ ಭದ್ರವಾಗಿದೆ ಎಂದರು.
ಮುಸ್ಲಿಂಮರ ಕೆಲಸವನ್ನು ಸಚಿವ ಖಂಡ್ರೆ ತಲೆಬಾಗಿ ಮಾಡಬೇಕು: ಜಮೀರ್ ವಿವಾದಾತ್ಮಕ ಹೇಳಿಕೆ
ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅವರ ಜೊತೆ ಬಹಳ ಅನ್ಯೋನ್ಯವಾಗಿದ್ದಾರೆ. 3 ವರ್ಷದಿಂದ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಚನ್ನಾಗಿಯೇ ಇದ್ದಾರೆ. ಯಾವುದೇ ವಿಷಯ ಇದ್ದರೂ ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಸ್ವಾಮೀಜಿಯವರು ಒಕ್ಕಲಿಗರಿಗೆ ಒಂದು ಅವಕಾಶ ಕೊಡಿ ಅಂತ ಹೇಳಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ. ಇದಕ್ಕೆಲ್ಲ ವಿರೋಧ ಪಕ್ಷದವರು ಅನಗತ್ಯವಾಗಿ ಮಾತು ಬೆಳೆಸುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಆರೋಪಿಸಿದರು.