Asianet Suvarna News Asianet Suvarna News

10 ಶಾಸಕರ ಸಸ್ಪೆಂಡ್‌ ಮಾಡಿದ ಸ್ಪೀಕರ್‌ ಕ್ಷಮೆ ಕೇಳಲಿ: ಈಶ್ವರಪ್ಪ

ಅಧಿವೇಶನದಲ್ಲಿ ದಾದಾಗಿರಿ ನಡೆಸಿದ ಕಾಂಗ್ರೆಸ್‌ ಸರ್ಕಾರವು ಪ್ರತಿಭಟನಾನಿರತ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್‌ಗಳ ಮೂಲಕ ಹೊರಗೆ ಹಾಕಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ: ಈಶ್ವರಪ್ಪ

Let the Speaker Apologize for Suspend 10 MLAs Says KS Eshwarappa grg
Author
First Published Jul 24, 2023, 12:00 AM IST

ಹೂವಿನಹಡಗಲಿ(ಜು.24): ವಿಧಾನಸಭೆಯ ಅಧಿವೇಶನದಲ್ಲಿ 10 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್‌ ಕೂಡಲೇ ಕ್ಷಮೆ ಕೇಳಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ದಾದಾಗಿರಿ ನಡೆಸಿದ ಕಾಂಗ್ರೆಸ್‌ ಸರ್ಕಾರವು ಪ್ರತಿಭಟನಾನಿರತ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್‌ಗಳ ಮೂಲಕ ಹೊರಗೆ ಹಾಕಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸಂವಿಧಾನಕ್ಕೆ ಮಾಡಿರುವ ಅಪ ಚಾರವಾಗಿದ್ದು, ಈ ಹಿಂದೆ ಸ್ಪೀಕರ್‌ ಆಗಿದ್ದ ಭೋಜಗೌಡ ಅವರನ್ನು ಸ್ಪೀಕರ್‌ ಆಸನದಿಂದಲೇ ಎಳೆದಾಡಿದ್ದು ಇದೇ ಕಾಂಗ್ರೆಸ್‌ನವರು. ಇದೀಗ ಬಿಜೆಪಿಯವರಿಗೆ ಸಂವಿಧಾನದ ಪಾಠ ಹೇಳಲು ಬರುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು. 

ಗೃಹಜ್ಯೋತಿ, ಗೃಹಲಕ್ಷ್ಮಿಯಿಂದ ಬಡವರಿಗೆ ಸಹಾಯ: ಸಚಿವ ನಾಗೇಂದ್ರ

ಸ್ಪೀಕರ್‌ ಆದವರು ನೂತನ ಶಾಸಕರಿಗೆ ತರಬೇತಿ ನೀಡುತ್ತಾರೆ. ಅದರ ಬದಲಿಗೆ ಈ ಸ್ಪೀಕರ್‌ ಖಾದರ್‌ ತಾವೇ ತರಬೇತಿ ಪಡೆಯುವುದು ಅಗತ್ಯವಿದೆ. ಈಗ ಕಾಂಗ್ರೆಸ್‌ನವರು ರುದ್ರಪ್ಪ ಲಮಾಣಿ ಅವರನ್ನು ಉಪ ಸ್ಪೀಕರ್‌ ಮಾಡಿದ್ದಾರೆ. ಆ ಮೂಲಕ ದಲಿತ ಅಸ್ತ್ರ ಬಳಕೆ ಮಾಡುತ್ತಿದ್ದಾರೆ ಎಂದರು.

Follow Us:
Download App:
  • android
  • ios