ಈಗ ನಡೆಯುತ್ತಿರುವುದು ಪ್ರಧಾನಿ ಮೋದಿ ಹವಾ. ಚುನಾವಣೆಗೆ ಅನೇಕ ಸಚಿವರು ಸ್ಪರ್ಧಿಸು ವುದಿಲ್ಲ. ಮುಖಭಂಗಕ್ಕಿಂತ ಸ್ಪರ್ಧೆ ಮಾಡುವುದೇ ಬೇಡ ಎಂಬ ತೀರ್ಮಾನಕ್ಕೆ ಸಚಿವರು ಬಂದಿದ್ದಾರೆ ಎಂದು ಲೇವಡಿ ಮಾಡಿದ ಮಾಜಿ ಸಚಿವ ಸಿ.ಟಿ.ರವಿ
ಬೆಂಗಳೂರು(ಜ.13): ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ಅವರು ಒಂದೊಂದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಪ್ರಕಟಿಸುವ ಮೂಲಕ ತಮ್ಮ ಸಂಪುಟದ ಇತರ ಸಚಿವರಿಗೆ ಮೇಲ್ಪಂಕ್ತಿ ಹಾಕಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಗಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಡೆಯುತ್ತಿರುವುದು ಪ್ರಧಾನಿ ಮೋದಿ ಹವಾ. ಚುನಾವಣೆಗೆ ಅನೇಕ ಸಚಿವರು ಸ್ಪರ್ಧಿಸು ವುದಿಲ್ಲ. ಮುಖಭಂಗಕ್ಕಿಂತ ಸ್ಪರ್ಧೆ ಮಾಡುವುದೇ ಬೇಡ ಎಂಬ ತೀರ್ಮಾನಕ್ಕೆ ಸಚಿವರು ಬಂದಿದ್ದಾರೆ ಎಂದು ಲೇವಡಿ ಮಾಡಿದರು.
ಎಸ್‌ಡಿಪಿಐ, ಪಿಎಫ್ಐ ಕೇಸ್ ವಾಪಸ್, ಹಿಂದೂ ಸಂಘಟನೆ ಕೇಸ್ ರೀ ಓಪನ್: ಸಿ.ಟಿ.ರವಿ ಕೆಂಡಾಮಂಡಲ
ಒಂದು ವೇಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಿಸಲು ಮುಂದಾದರೆ ಉಳಿದ ಸಚಿವರೂ ಸ್ಪರ್ಧೆ ಮಾಡಬಹುದು ಎಂದರು.
