ಸಿ.ಟಿ. ರವಿ ಪ್ರಕರಣ: ಸಿಎಂ, ಗೃಹ ಸಚಿವರು ಆತ್ಮಸಾಕ್ಷಿಯಾಗಿ ಹೇಳಲಿ, ಕೇಂದ್ರ ಸಚಿವ ಸೋಮಣ್ಣ

ಗಲಾಟೆ ನಡೆದ ದಿನ ಸಿ.ಟಿ ರವಿ ಜೊತೆ ಮಾಧ್ಯಮಗಳು ಇರದಿದ್ದರೇ ಸಿ.ಟಿ. ರವಿ ಕಥೆ ಏನಾಗುತ್ತಿತ್ತು ಎಂಬುದನ್ನು ಸ್ವಲ್ಪ ಊಹೇ ಮಾಡಿ. ಮಾಧ್ಯಮಗಳು ಇದ್ದಿದ್ದಕ್ಕೆ ಅವತ್ತು ರವಿ ಬಚಾವ್ ಆದ್ರು. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಶುರು ಮಾಡಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ರೀತಿಯ ರಾಜಕಾರಣ ಶುರುವಾಗಿರುವು ನನಗೆ ಬೇಸರ ಮೂಡಿಸುತ್ತಿದೆ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ 

Let the CM Siddaramaiah and Home Minister Parameshwar speak with conscience Says V Somanna grg

ಮೈಸೂರು(ಡಿ.24):  ಈ ಕೇಸ್ ಬೆಳೆಸುವುದು ಬೇಡ ಇದು ಸದನದ ವಿಚಾರ. ಅಲ್ಲಿಗೆ ಬಿಟ್ಟುಬಿಡಿ ಅಂಥ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಹೇಳಿಲ್ವ ಎಂಬುದನ್ನು ಅವರ ಆತ್ಮಸಾಕ್ಷಿ ಸಮೇತ ಹೇಳಲಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. 

ನಗರದಲ್ಲಿ ರೈತ ಪರ ಸಂಘಟನೆಗಳ ಒಕ್ಕೂಟ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಡನೆ ಮಾತನಾಡಿದರು. ಗಲಾಟೆ ನಡೆದ ದಿನ ಸಿ.ಟಿ ರವಿ ಜೊತೆ ಮಾಧ್ಯಮಗಳು ಇರದಿದ್ದರೇ ಸಿ.ಟಿ. ರವಿ ಕಥೆ ಏನಾಗುತ್ತಿತ್ತು ಎಂಬುದನ್ನು ಸ್ವಲ್ಪ ಊಹೇ ಮಾಡಿ. ಮಾಧ್ಯಮಗಳು ಇದ್ದಿದ್ದಕ್ಕೆ ಅವತ್ತು ರವಿ ಬಚಾವ್ ಆದ್ರು. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಶುರು ಮಾಡಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ರೀತಿಯ ರಾಜಕಾರಣ ಶುರುವಾಗಿರುವು ನನಗೆ ಬೇಸರ ಮೂಡಿಸುತ್ತಿದೆ. ಸದನದ ವಿಚಾರದಲ್ಲಿ ಸ್ಪೀಕರ್‌ ತೀರ್ಮಾನವೇ ಅಂತಿಮ. ಪ್ರಕರಣದಲ್ಲಿ ಯಾರದ್ದು ತಪ್ಪು ಇದೆ ಎಂಬುದನ್ನು ಸ್ಪೀಕರ್‌ತನಿಖೆ ಮಾಡಿಸಿ ಕ್ರಮ ಕೈಗೊಳ್ಳಲಿ ಎಂದು ಅವರು ಹೇಳಿದರು. 

ಅಂಬೇಡ್ಕರ್ ಬಗ್ಗೆ ಮಾತಾಡಲು ಕಾಂಗ್ರೆಸ್‌ಗೆ ಮುಖವಿಲ್ಲ: ಪ್ರತಾಪ್ ಸಿಂಹ ಟೀಕೆ

ನಮ್ಮದೇನು ಅಭ್ಯಂತರ ಇಲ್ಲ. ನಮ್ಮದೇ ತಪ್ಪಾಗಿದ್ದರು ನಾವು ಅದನ್ನು ಸ್ವೀಕರಿಸುತ್ತೇವೆ. ಆದರೆ ಇದನ್ನು ಬಿಟ್ಟು ಪೊಲೀಸರ ಮೂಲಕ ಸಿ.ಟಿ. ರವಿಗೆ ಈ ರೀತಿ ಹಿಂಸೆ ಕೊಡಿಸಿದ್ದು ಎಷ್ಟು ಸರಿ? ಏಳೆಂಟು ಗಂಟೆ ಸಿ.ಟಿ. ರವಿ ಅವರನ್ನು ಆ ರೀತಿ ಸುತ್ತಿಸುವ ಅವಶ್ಯಕತೆ ಇತ್ತಾ ಎಂದು ಪ್ರತಿಕ್ರಿಯಿಸಿದರು. 

ಅವರು ಖಾರವಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಬಹಳಷ್ಟು ಹುಳುಕುಗಳು ಶುರುವಾಗಿದೆ. ಈ ಹುಳುಕನ್ನು ಮುಚ್ಚಿಕೊಳ್ಳಲು ಈ ವಿಷಯವನ್ನು ದೊಡ್ಡದ್ದು ಮಾಡಲಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ವ‌ರ್ ಕೇಂದ್ರದಲ್ಲಿ ಯಾರಿಗೆ ಬೇಕಾದರೂ ದೂರು ಕೊಡಲಿ. ನಮಗೆ ಏನು ತೊಂದರೆ ಇಲ್ಲ. ಇದು ಸದನದ ವಿಚಾರ. ಅದನ್ನ ಎಲ್ಲಿ, ಹೇಗೆ ಮಾತನಾಡಬೇಕು ಎಂಬುದಕ್ಕೆ ಕಾ ನೂನು ಇದೆ. ಅದರ ವ್ಯಾಪ್ತಿಯಲ್ಲಿ ಎಲ್ಲರೂ ಇರಬೇಕು ಎಂದರು. 
ಕೇಂದ್ರ ಗೃಹ ಸಚಿವರ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮೋದಿ ಸರ್ಕಾರ ವಿರುದ್ದ ಅವರಿಗೆ ಏನು ವಿಚಾರ ಇಲ್ಲ. ಆದ್ದರಿಂದ ಜನರನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಉತ್ತರ ಭಾರತದಲ್ಲಿ ಈ ಹೋರಾಟದ ಸದ್ದು ಇಲ್ಲ. ದಕ್ಷಿಣ ಭಾರತದಲ್ಲಿ ಅಷ್ಟೇ ಈ ಸದ್ದು ನಡೆಯುತ್ತಿದೆ ಎಂದು ಅವರು ತಿಳಿಸಿದರು. 

ಕರ್ನಾಟಕದಲ್ಲಿ ಕಾಂಗ್ರೆಸ್ ಜನರನ್ನು ದಡ್ಡರು ಎಂದುಕೊಂಡು ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ. ಕರ್ನಾಟಕದ ಜನ ಒಂದು ಭಾರಿ ಕಾಂಗ್ರೆಸ್ ನ ಸುಳ್ಳು ನಂಬಿ ದಡ್ಡರಾಗಿದ್ದಾರೆ. ಇನ್ನೂ ಈ ಬಾರಿ ಆ ದಡ್ಡತನ ಮಾಡುವುದಿಲ್ಲ. ರಾಹುಲ್ ಗಾಂಧಿ ಸಂಸತ್ ಒಳಗೆ ಮಕ್ಕಳಂತೆ ವರ್ತಿಸುತ್ತಿದ್ದಾರೆ. ಇವರ ಈ ಯಾವ ಆಟಗಳು ನಡೆಯುವುದಿಲ್ಲ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios