ಸಿದ್ದರಾಮಯ್ಯಗೆ ಧಮ್ ಇದ್ದರೆ ಬಾದಾಮಿಯಿಂದ ಸ್ಪರ್ಧೆ ಮಾಡಲಿ; ಕಟೀಲ್ ಸವಾಲ್!

ಧಮ್ ಇದ್ದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಫರ್ಧೆ ಮಾಡಲಿ; ಇಲ್ಲವೆ ಚಾಮುಂಡಿ ಕ್ಷೇತ್ರಕ್ಕೆ ಬಂದು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸವಾಲು ಹಾಕಿದ್ದಾರೆ.

 Let Siddaramaiah stand for election from Badami

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ..

ಬಾಗಲಕೋಟೆ (ಅ.31) :  ಧಮ್ ಇದ್ದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಫರ್ಧೆ ಮಾಡಲಿ; ಇಲ್ಲವೆ ಚಾಮುಂಡಿ ಕ್ಷೇತ್ರಕ್ಕೆ ಬಂದು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸವಾಲು ಹಾಕಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿ,  ಸಿಎಂ ಆದವರಿಗೆ ಅವರ ಕ್ಷೇತ್ರದಲ್ಲಿ ನಿಲ್ಲಲು ಯೋಗ್ಯತೆ ಇಲ್ಲವೆಂದಾದರೆ ಇವರಿಗೆ ಬೇರೆಯವರ ಬಗ್ಗೆ ಮಾತನಾಡೋ ಹಕ್ಕೇನಿದೆ ಎಂದು ಅವರು ಪ್ರಶ್ನಿಸಿದ ಅವರು, ಕ್ಷೇತ್ರ ಹುಡುಕುವ ದುಸ್ಥಿತಿಗೆ ಬಂದಿರುವುದಕ್ಕೆ ನೋಡಿದರೆ ಕನಿಕರವೆನಿಸುತ್ತದೆ ಎಂದರು.

ಜನವರಿ ವೇಳೆಗೆ ಅರ್ಕಾವತಿ ಹಗರಣ ಬೆಳಕಿಗೆ ಬರಲಿದೆ: ನಳೀನ್‌ಕುಮಾರ್‌ ಕಟೀಲ್‌

ಕಳೆದ ಬಾರಿ ಅಧಿಕಾರದಲ್ಲಿದ್ದು ಸಿದ್ದರಾಮಯ್ಯ ಚಾಮುಂಡಿಯಲ್ಲಿ ಸೋಲುಂಡರು. ಸಿದ್ದರಾಮಯ್ಯ ಜೊತೆ ಜನರಿಲ್ಲ. ಬಾದಾಮಿಯಲ್ಲೂ ನಿಲ್ಲುವ ಪರಿಸ್ಥಿತಿ ಇಲ್ಲ. ಮಾಜಿ ಸಿಎಂ ಆಗಿ ಇಂದು ಕ್ಷೇತ್ರ ಹುಡುಕಾಡ್ತಾ ಇದ್ದಾರೆ. ಒಬ್ಬ ಮಾಜಿ ಸಿಎಂ ಕ್ಷೇತ್ರ ಹುಡುಕುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ ಎಂದು ವ್ಯಂಗ್ಯವಾಡಿದರು.

ಮೋದಿ ಹೋದಲ್ಲಿ ಗೆಲ್ತಾರೆ, ಸಿದ್ರಾಮಣ್ಣ, ರಾಹುಲ್ ಹೋದಲ್ಲೆಲ್ಲಾ ಸೋಲ್ತಾರೆ!

ಈ ಮಧ್ಯೆ ಮಾತನಾಡಿದ ಕಟೀಲ್ ಅವರು,  ಮೋದಿಯವರ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. ಮೋದಿ ಹೋದಲ್ಲಿ ಗೆಲ್ತಾರೆ, ಸಿದ್ರಾಮಣ್ಣ, ರಾಹುಲ್ ಹೋದಲ್ಲೆಲ್ಲಾ ಸೋಲ್ತಾರೆ. ಸಿದ್ದು ಚಾಮುಂಡಿ, ಬಾದಾಮಿ ಆಯ್ತು ಈಗ ಕೋಲಾರ ಕಡೆ ನೋಡ್ತಿದ್ದಾರೆ. ಅವರಿಗೆ ಸ್ಥಿರ ಕ್ಷೇತ್ರವಿಲ್ಲ. ಸಿದ್ದರಾಮಯ್ಯ ಒಬ್ಬ ರಾಜಕೀಯ ಮುತ್ಸದ್ದಿ ಅಂತಾದರೆ ಎದೆ ತಟ್ಟಿ ಹೇಳಬೇಕು. ಕಾಂಗ್ರೆಸ್ ಕಡಿಮೆ ಅಂತರದಿಂದ ಗೆಲ್ಲುವ ಕ್ಷೇತ್ರದಿಂದ ಗೆಲ್ತೇನೆ ಅಂತ ಹೇಳಬೇಕು ಎಂದರು.

 ಮೋದಿ ಅವರು ಬಿಜೆಪಿ ವೀಕ್ ಪ್ಲೇಸ್ ವಾರಣಾಸಿಗೆ ಹೋಗಿ ಅತಿಹೆಚ್ಚು ವೋಟ್ ಗಳಿಸಿದ್ರು. ಯಡಿಯೂರಪ್ಪ ನವರು ನಿರಂತರವಾಗಿ ಶಿಕಾರಿಪುರದಿಂದಲೇ ಗೆದ್ರು, 
ಒಂದು ದಿನ ಕ್ಷೇತ್ರ ಬಿಡಲಿಲ್ಲ. ಇದು ಯಡಿಯೂರಪ್ಪ ಅವರ ತಾಕತ್ತು ಎಂದು ಹೇಳಿದರು. ಕ್ಷೇತ್ರ ಹುಡುಕುವ ನಾಯಕರಿಂದ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ಇಷ್ಟಿದ್ದರೂ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಸಿದ್ದು ಮುಂದಾಗಿ ಪೈಪೋಟಿ ನಡೆಸಿರುವುದನ್ನು ಅವರು ಲೇವಡಿ ಮಾಡಿದರು.

ಖರ್ಗೆ, ಸಿದ್ದು ಅವರನ್ನು ರಾಜಕೀಯವಾಗಿ ಮುಗಿಸಲಿದ್ದಾರೆ: ಕಟೀಲ್

 ಕಾಂಗ್ರೆಸ್ ನಲ್ಲಿ ಈ ಬಾರಿ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಕೊಡಲ್ಲ ಎಂದ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್,  ಖರ್ಗೆ ಅವರು ಸ್ವಾಭಿಮಾನಿ ನಾಯಕ ಅಂತಾದ್ರೆ, ಸಿದ್ದರಾಮಯ್ಯ ಅವ್ರನ್ನ ರಾಜಕೀಯವಾಗಿ ಮುಗಿಸ್ತಾರೆ ಎಂದರು. ಸಿದ್ದರಾಮಯ್ಯ ಅವರ ಭಯ ಬಿಜೆಪಿಗರಿಗೆ ಬಹಳ ಆವರಿಸಿದೆ ಎನ್ನುವ‌ ಪ್ರಶ್ನೆಗೆ ಉತ್ತರಿಸಿದ ಅವರು
ಸಿದ್ದರಾಮಯ್ಯ ಭಯವೇ ಇಲ್ಲ ನಮಗೆ ಬಹಳ ಖುಷಿ ಇದೆ. ಬಿಜೆಪಿಗೆ ಹೆಚ್ಚು ವೋಟ್ ಬರುವುದೇ ಸಿದ್ದರಾಮಯ್ಯ ಮಾತಿನಿಂದ. ಎಲ್ಲಿಯವರೆಗೆ ರಾಹುಲ್ ಇರ್ತಾರೋ ಅಲ್ಲಿಯವರೆಗೆ ಕೇಂದ್ರದಲ್ಲಿ ಬಿಜೆಪಿ ಇರುತ್ತೆ, ಎಲ್ಲಿಯವರೆಗೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇರ್ತಾರೋ ಅಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತೆ. ಕಾಂಗ್ರೆಸ್ ನಲ್ಲಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡ್ತಿದಾರೆ ಎಂದರು.

ಕಾಂಗ್ರೆಸ್‌ನವರು ರಾಜಕಾಣದ ಪ್ರತಿ ಹಂತದಲ್ಲೂ ದ್ರೋಹದ ರಾಜಕಾರಣ ಮಾಡಿದ್ದಾರೆ. ಹಾಗಾಗಿ ಈ ರಾಜ್ಯದ ರಾಜಕೀಯ ಖಳನಾಯಕ ಯಾರು ಅಂದ್ರೆ ಅದು ಸಿದ್ದರಾಮಯ್ಯ ಎಂದು ಕಿಡಿಕಾರಿದರು. ಮುಂದುವರಿದು ಇದೇ ಕಾರಣಕ್ಕಾಗಿ ನಮ್ಮ ಟಾರ್ಗೆಟ್ ಸಿದ್ದರಾಮಯ್ಯ ಅವ್ರೇ ಆಗಬೇಕಲ್ವ. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅನ್ನೋದು ಈಗ ಡಿಕೆಶಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ರಾಜಕೀಯವಾಗಿ ಹಾಳಾಗ್ತಾರೆ ಹಾಳಾಗ್ಲಿ ಅಂತಾ ಡಿಕೆಶಿ ಬಿಟ್ಟಿದ್ದಾರೆ ಎಂದರು.

ದೇವೇಗೌಡರು ಸಿದ್ದರಾಮಯ್ಯ ಅವರ ರಾಜಕೀಯ ಗುರುಗಳು:

ಇನ್ನು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ ಕಟೀಲ್ ಅವರು, ದೇವೇಗೌಡರು ಸಿದ್ದರಾಮಯ್ಯ ಅವರ ರಾಜಕೀಯ ಗುರುಗಳು ಸಿಎಂ ಸ್ಥಾನಕ್ಕಾಗಿ ಜೆಡಿಎಸ್ ನಿಂದ ಹೊರಬಂದು, ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಗೆ ಅತೀ ಹೆಚ್ಚು ಕೆಟ್ಟ ಶಬ್ದ ಬಳಸಿದ್ದು ಸಿದ್ದರಾಮಯ್ಯ, ಅದೇ ಸೋನಿಯಾ ಗಾಂಧಿ ಕಾಲು ಹಿಡಿದ್ರು. ಯೋಗ್ಯತೆ, ನೈತಿಕತೆ, ಸ್ವಾಭಿಮಾನ ಇದ್ದಲ್ಲಿ, ಕಾಲಿಗೆ ಬಿದ್ದು ಸಿಎಂ ಆಗುವ ಅವಶ್ಯಕತೆ ಸಿದ್ದರಾಮಯ್ಯ ಯಾಕಿತ್ತು ಎಂದು ಪ್ರಶ್ನಿಸಿದರು.

ರಾಹುಲ್‌ ಗಾಂಧಿ ಕಾಲಿಟ್ಟ ಕಡೆಯಲ್ಲ ಕಾಂಗ್ರೆಸ್‌ಗೆ ಸೋಲು: ನಳಿನ್‌ ಕುಮಾರ್‌ ಕಟೀಲ್‌

ಮುಂದೆ ಖರ್ಗೆಯವ್ರನ್ನ ಸೋಲಿಸಿದರು. ಪರಮೇಶ್ವರ ಅವ್ರನ್ನ ಸೋಲಿಸಿದರು.ಇಬ್ರನ್ನು ಸೋಲಿಸಿ ಮತ್ತೆ ಸಿಎಂ ಆಗಬೇಕು ಅಂದರು. ಜನ ಆಶೀರ್ವಾದ ಮಾಡಲಿಲ್ಲ. 2018 ರಲ್ಲಿ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತಾ ತಮಗೆ ವೈರಿಯಾದ ಕುಮಾರಸ್ವಾಮಿ ಜೊತೆ ಸೇರಿ ಸರ್ಕಾರ ಮಾಡಿದರು. ಒಂದೇ ವರ್ಷದಲ್ಲಿ ಕುಮಾರಸ್ವಾಮಿಗೆ ದ್ರೋಹ ಮಾಡಿದರು. ಹಾಗಾಗಿ ಈ ರಾಜ್ಯದ ರಾಜಕೀಯ ಖಳನಾಯಕ ಯಾರು ಅಂದ್ರೆ ಅದು ಸಿದ್ದರಾಮಯ್ಯ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಬಿಜೆಪಿ ಮುಖಂಡ ಬಸವರಾಜ್ ಯಂಕಂಚಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios