ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಅಭಿವೃದ್ದಿಯನ್ನು ಸಹಿಸದ ಕಾಂಗ್ರೆಸ್‌ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಭ್ರಷ್ಟಾಚಾರದ ಮೂಲ ಕೇಂದ್ರ ಕಾಂಗ್ರೆಸ್‌ ಜನವರಿ ವೇಳೆಗೆ ಅರ್ಕಾವತಿ ಹಗರಣ ಬೆಳಕಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿದರು. 

ನಂಜನಗೂಡು (ಅ.30): ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರದ ಅಭಿವೃದ್ದಿಯನ್ನು ಸಹಿಸದ ಕಾಂಗ್ರೆಸ್‌ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಭ್ರಷ್ಟಾಚಾರದ ಮೂಲ ಕೇಂದ್ರ ಕಾಂಗ್ರೆಸ್‌ ಜನವರಿ ವೇಳೆಗೆ ಅರ್ಕಾವತಿ ಹಗರಣ ಬೆಳಕಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿದರು. ತಾಲೂಕಿನ ಮಹದೇವನಗರದಲ್ಲಿರುವ ಜಯಲಕ್ಷ್ಮೇ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ನಂಜನಗೂಡು ವಿಧಾನಸಭಾಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾಂಗ್ರೆಸ್‌ನ 60 ವರ್ಷಗಳ ಆಡಳಿತದಲ್ಲಿ ಲಾಲ್‌ ಬಹುದ್ದೂರ್‌ಶಾಸ್ತ್ರಿ ಮಾತ್ರ ಕಳಂಕ ರಹಿತ ರಾಜಕಾರಣಿ, ನೆಹರು ಕಾಲಘಟ್ಟದಿಂದ ಮನಮೋಹನ್‌ಸಿಂಗ್‌ವರೆಗೆ ಹಗರಣಗಳು ಹೆಚ್ಚಾಗಿವೆ. ಸಿದ್ದರಾಮಯ್ಯ ಕಾಲದಲ್ಲಿ ಬೆಡ್‌ಶೀಟ್‌, ಹಾಸಿಗೆ, ಮೊಟ್ಟೆಹಗರಣದ ಜೊತೆಗೆ ಎಸ್‌ಐ, ಶಿಕ್ಷಕರ ನೇಮಕಾತಿ ಹಗರಣವನ್ನು ಮುಚ್ಚಿ ಹಾಕಿದ್ದೀರಿ, ಅಲ್ಲದೆ ಜೈಲಿಗೆ ಹೋಗುತ್ತೇನೆ ಎಂಬ ಭಯದಿಂದ ಲೋಕಾಯುಕ್ತವನ್ನು ಮುಚ್ಚಿದರು. ಆದರೆ ಬಿಜೆಪಿ ಸರ್ಕಾರ ಎಸ್‌ಐ ಹಗರಣವನ್ನು ತನಿಖೆ ನಡೆಸಿ ಜೈಲಿಗೆ ಹಾಕುವ ಮೂಲಕ ಬೊಮ್ಮಾಯಿ ತಮ್ಮ ತಾಕತ್ತು ತೋರಿಸಿದ್ದಾರೆ. ನಿಮ್ಮ ಸರ್ಕಾರದ ದಾಖಲೆಗಳು ನಮ್ಮ ಬಳಿ ಇವೆ. 

Mysuru: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳೀಪಟ: ನಳಿನ್‌ಕುಮಾರ್‌ ಕಟೀಲ್‌

ಜನವರಿ ವೇಳೆಗೆ ಅರ್ಕಾವತಿ ಪ್ರಕರಣ ಬೆಳಕಿಗೆ ಬರಲಿದೆ. ನಿಮಗೆ ತಾಕತ್ತಿದ್ದರೆ. ಶೇ. 40 ಕಮಿಷನ್‌ ಎಂಬ ಬಗ್ಗೆ ದಾಖಲೆ ನೀಡಿ ಎಂದು ಸವಾಲೆಸೆದರು. ಕಾಂಗ್ರೆಸ್‌ ನಾಯಕರು ಬೇಲ್‌ನಲ್ಲಿದ್ದಾರೆ: ಈ ಹಿಂದೆ ಕೋರ್ಟ್‌ನಲ್ಲಿ ಕೋಳಿಚಿಕ್ಕಣ್ಣ, ಚೂರಿ ಫಸೆಲ್‌ ಎಂದು ಕೂಗುತ್ತಿದ್ದರು, ಈಗ ಸೋನಿಯಾ, ರಾಹುಲ್‌, ವಾದ್ರ, ಚಿದಂಬರಂ, ಡಿಕೆಶಿ ಕೋರ್ಟ್‌ನಲ್ಲಿದ್ದಾರೆ, ಅವರೆಲ್ಲ ಬೇಲ್‌ನಲ್ಲಿ ಹೊರಗಿದ್ದಾರೆ ಎಂದು ಕುಟುಕಿದರು. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಟಿಕೆಟ್‌ ಇಲ್ಲ - ದಲಿತ ಮುಖ್ಯಮಂತ್ರಿಯಾಗುತ್ತಾರೆ ಎಂದು ಅಡ್ಡಗಾಲ ಹಾಕಿ ಖರ್ಗೆ ಮತ್ತು ಪರಮೇಶ್ವರ್‌ ಅವರನ್ನು ಸೋಲಿಸಿದಿರಿ ನಿಮಗೆ ಖರ್ಗೆ ಮತ್ತು ಪರಮೇಶ್ವರ್‌ ಶಾಪವಿದೆ. ಮಲ್ಲಿಕಾರ್ಜುನ ಖರ್ಗೆ ಈಗ ಎಐಸಿಸಿ ಅಧ್ಯಕ್ಷರಾಗಿದ್ದು, ನಿಮಗೆ ಟಿಕೆಟ್‌ ಇಲ್ಲವಾಗಿದೆ. 

ವೈದ್ಯರ ಹಾಜರಾತಿ ಮೇಲೆ ನಿಗಾಕ್ಕೆ ಬಯೋಮೆಟ್ರಿಕ್‌: ಸಚಿವ ಸುಧಾಕರ್‌

ಆದ್ದರಿಂದ ಜೋಡೋ ಯಾತ್ರೆಯಲ್ಲಿ ಸಿದ್ದರಾಮಯ್ಯ ರಾಹುಲ್‌ ಮೇಲಿನ ಪ್ರೀತಿಯಿಂದ ಭಾಗವಹಿಸಿಲ್ಲ, ಯಾತ್ರೆ ಮೂಲಕ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಚಾಮುಂಡೇಶ್ವರಿ, ವರುಣದಿಂದ ಜನರು ಓಡಿಸಿದ್ದಾರೆ, ಬಾದಾಮಿಯಲ್ಲಿ ನಿಲ್ಲುವುದು ಬೇಡ ಎಂದಿದ್ದಾರೆ. ಕೋಲಾರದಲ್ಲಿ ಕತ್ತಿ, ಮೈಸೂರಿನಲ್ಲಿ ಬೆತ್ತ ಹಿಡಿದು ನಿಂತಿದ್ದಾರೆ. ಹುಲಿಯಾ ಕಾಡಿನೊಳಗೆ ಹೋಗುತ್ತದೆ ಎಂದು ಜರಿದರು. ಶ್ರೀರಾಮ ಮಂದಿರ ತಲೆ ಎತ್ತುತ್ತಿದೆ, ಇತ್ತ ಕಾಶಿ ಕಾರಿಡಾರ್‌ ಸಿದ್ದವಾಗಿದೆ, ಉಜೈನಿ, ಕಾಶ್ಮೀರದಲ್ಲಿ ಅಭಿವೃದ್ದಿ ಕೆಲಸ ಮಾಡಿ ಮೋದಿ ಅವರು ಭಾರತವನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ರಾಹುಲ್‌ಗಾಂಧಿ ಮಾಡಿಲ್ಲ ಎಂದರು. ಶಾಸಕ ಬಿ. ಹರ್ಷವರ್ಧನ್‌ ಮೊದಲಾದವರು ಇದ್ದರು.