ಕಾಂಗ್ರೆಸ್ ಸರಕಾರ ಇರೋದೆ ಮೂರು ರಾಜ್ಯದಲ್ಲಿ ಮಾತ್ರ. ಆ ಮೂರು ಸರಕಾರದಲ್ಲಿ ಇವರು ಟ್ರಬಲ್ ಶೂಟರ್. ಹಾಗೇನಾದ್ರೂ ಇವರು ಟ್ರಬಲ್‌ಶೂಟ‌ರ್ ಆಗಿದ್ರೆ, ದೇಶಾದ್ಯಂತ ಕಾಂಗ್ರೆಸ್‌ಗೆ ಆಗಿರುವ ಟ್ರಬಲ್ ಶೂಟ್ ಮಾಡಲಿ. ಕಾಂಗ್ರೆಸ್ 40-50 ಕ್ಷೇತ್ರಗಳನ್ನೂ ಗೆಲ್ಲಲ್ಲ, ಅದನ್ನು ಗೆದ್ದರೆ ಇವು ಟ್ರಬಲ್ ಶೂಟರ್‌ಎಂದು ಒಪ್ಪುತ್ತೇನೆ ಎಂದು ಎಂದು ವ್ಯಂಗ್ಯವಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 

ನವದೆಹಲಿ(ಮಾ.01):  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಅವರು ಮೊದಲಿಗೆ ಕಾಂಗ್ರೆಸ್‌ನ ಟ್ರಬಲ್ ಶೂಟ್ ಮಾಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಕೆಶಿಯವರು ಹಿಮಾಚಲಕ್ಕೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರಕಾರ ಇರೋದೆ ಮೂರು ರಾಜ್ಯದಲ್ಲಿ ಮಾತ್ರ. ಆ ಮೂರು ಸರಕಾರದಲ್ಲಿ ಇವರು ಟ್ರಬಲ್ ಶೂಟರ್. ಹಾಗೇನಾದ್ರೂ ಇವರು ಟ್ರಬಲ್‌ಶೂಟ‌ರ್ ಆಗಿದ್ರೆ, ದೇಶಾದ್ಯಂತ ಕಾಂಗ್ರೆಸ್‌ಗೆ ಆಗಿರುವ ಟ್ರಬಲ್ ಶೂಟ್ ಮಾಡಲಿ. ಕಾಂಗ್ರೆಸ್ 40-50 ಕ್ಷೇತ್ರಗಳನ್ನೂ ಗೆಲ್ಲಲ್ಲ, ಅದನ್ನು ಗೆದ್ದರೆ ಇವು ಟ್ರಬಲ್ ಶೂಟರ್‌ಎಂದು ಒಪ್ಪುತ್ತೇನೆ ಎಂದು ಎಂದು ವ್ಯಂಗ್ಯವಾಡಿದರು. 

ಕಳಸಾ-ಬಂಡೂರಿ: ವನ್ಯಜೀವಿ ಮಂಡಳಿ ಕೇಳಿದ ಮಾಹಿತಿ ಕರ್ನಾಟಕ ನೀಡಿಲ್ಲ, ಪ್ರಹ್ಲಾದ್ ಜೋಶಿ

ಪಾಕ್‌ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲ ಮಾಧ್ಯಮದಲ್ಲೂ ವಿಚಾರ ಬಂದಿದೆ. ಆ ವ್ಯಕ್ತಿಯನ್ನು ಸರ್ಕಲ್ ಮಾಡಿ ಗುರುತಿಸಲಾಗಿದೆ. ಆದರೆ, ಸರಕಾರ ಈ ವ್ಯಕ್ತಿಯನ್ನು ವಿಚಾರಣೆ ಮಾಡಿಲ್ಲ. ಇದು ತುಷ್ಟಿಕರಣ ರಾಜಕಾರಣದ ಪರಾಕಾಷ್ಠೆಯಾಗಿದೆ ಎಂದು ಗುಡುಗಿದರು.