Asianet Suvarna News Asianet Suvarna News

‘ಇಂಡಿಯಾ’ ಒಕ್ಕೂಟ ದೇಶದ ಕ್ಷಮೆ ಯಾಚಿಸಲಿ: ಶಾಸಕ ವೇದವ್ಯಾಸ್‌ ಕಾಮತ್‌

ಉಪರಾಷ್ಟ್ರಪತಿ ಹುದ್ದೆಯು ಸಂವಿಧಾನ ಬದ್ಧವಾದದ್ದು. ಅದಕ್ಕೆ ಅಗೌರವ ತೋರಿದ ಸಂಸದರೊಬ್ಬರ ಅನಾಗರಿಕ ವರ್ತನೆಯನ್ನು ಖಂಡಿಸುವ ಬದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಫೋನ್‌ನಲ್ಲಿ ಚಿತ್ರೀಕರಣ ಮಾಡಿ ಇನ್ನಷ್ಟು ಹುರಿದುಂಬಿಸಿದ್ದು ಅವರ ಪ್ರಬುದ್ಧತೆಯ ಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ವೇದವ್ಯಾಸ್‌ ಕಾಮತ್‌ 

Let INDIA Apologize to the Country Says BJP MLA Vedavyas Kamath grg
Author
First Published Dec 22, 2023, 3:00 AM IST

ಮಂಗಳೂರು(ಡಿ.22):  ಭಾರತದ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಜಗದೀಪ್ ಧನ್‌ಕರ್ ಅವರ ದೈಹಿಕತೆ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿಯವರು ಸಂಸತ್ತಿನ ಹೊರಗೆ ಪ್ರತಿಭಟನೆಯಲ್ಲಿ ಮಿಮಿಕ್ರಿ ಮಾಡಿ ಅಪಹಾಸ್ಯ ಮಾಡಿದ ಕುರಿತಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದಕ್ಕಾಗಿ ಕಾಂಗ್ರೆಸ್ ನೇತೃತ್ವದ I. N. D. I. A ಬಣ ಕೂಡಲೇ ದೇಶದ ಕ್ಷಮೆಯಾಚಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ. 

ಉಪರಾಷ್ಟ್ರಪತಿ ಹುದ್ದೆಯು ಸಂವಿಧಾನ ಬದ್ಧವಾದದ್ದು. ಅದಕ್ಕೆ ಅಗೌರವ ತೋರಿದ ಸಂಸದರೊಬ್ಬರ ಅನಾಗರಿಕ ವರ್ತನೆಯನ್ನು ಖಂಡಿಸುವ ಬದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಫೋನ್‌ನಲ್ಲಿ ಚಿತ್ರೀಕರಣ ಮಾಡಿ ಇನ್ನಷ್ಟು ಹುರಿದುಂಬಿಸಿದ್ದು ಅವರ ಪ್ರಬುದ್ಧತೆಯ ಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಆಕ್ರೋಶ ವ್ಯಕ್ತಪಡಿಸಿದರು.

ಜ.1 ರಿಂದ ಮನೆಗಳಿಗೆ ಶ್ರೀರಾಮನ ಮಂತ್ರಾಕ್ಷತೆ ವಿತರಣೆ ಅಭಿಯಾನ

ಸ್ವತಃ ಜಗದೀಪ್ ಧನ್‌ಕರ್ ಅವರು ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿ, ತಾನು ಬುಡಕಟ್ಟು ಸಮುದಾಯದಿಂದ ಬಂದ ರೈತನಾಗಿದ್ದು ನನ್ನ ಈ ಹಿನ್ನೆಲೆಯನ್ನು ಅವಮಾನಿಸಬೇಡಿ ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸಿನ ಮಾನಸಿಕ ಸ್ಥಿತಿಯೇ ದೇಶದಲ್ಲಿ ತಳಮಟ್ಟದಿಂದ ಮೇಲೆ ಬಂದವರನ್ನು ಅವಮಾನಿಸುವುದಾಗಿದೆ. ಅದನ್ನೇ ಅದರ ಮಿತ್ರಪಕ್ಷಗಳು ಮುಂದುವರಿಸಿವೆ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

Follow Us:
Download App:
  • android
  • ios