Asianet Suvarna News Asianet Suvarna News

ಬರೀ ಮಾತಾಡೋದಲ್ಲ; ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪನೇ ಸ್ಪರ್ಧಿಸಿ ಗೆದ್ದು ತೋರಿಸಲಿ

ಸಿದ್ದರಾಮಯ್ಯ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಕಾರ್ಯಕರ್ತ ಬೇಡ, ನೀವೇ ನಿಂತು ಗೆದ್ದು ತೋರಿಸಿ ಎಂದು ಕೆಪಿಸಿಸಿ ಸದಸ್ಯ ವೈ.ಎಚ್‌. ನಾಗರಾಜ್‌ ಸವಾಲು ಹಾಕಿ​ದರು.

Let Eshwarappa win the election against Siddaramaiah says YH nagaraj rav
Author
First Published Jan 4, 2023, 7:50 AM IST

ಶಿವಮೊಗ್ಗ (ಜ.4) : ಸಿದ್ದರಾಮಯ್ಯ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಕಾರ್ಯಕರ್ತ ಬೇಡ, ನೀವೇ ನಿಂತು ಗೆದ್ದು ತೋರಿಸಿ ಎಂದು ಕೆಪಿಸಿಸಿ ಸದಸ್ಯ ವೈ.ಎಚ್‌. ನಾಗರಾಜ್‌ ಸವಾಲು ಹಾಕಿ​ದರು.

ಇಲ್ಲಿನ ಪ್ರೆಸ್‌ ಟ್ರಸ್ಟ್‌(Press trust) ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ​ರು, ಈಶ್ವರಪ್ಪ(KS Eshwarappa) ಅವರಿಗೆ ಸಿದ್ದರಾಮಯ್ಯ(Siddaramaiah)( ಅವರದೇ ಚಿಂತೆ. ಅವರು ಅಲೆಮಾರಿಯಂತೆ ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಸ್ಪರ್ಧಿಸುವ ತಾಕತ್ತು ಸಿದ್ದರಾಮಯ್ಯ ಅವರಿಗೆ ಇದೆ. ಆದರೆ, ಈಶ್ವರಪ್ಪ ಅವರು ಶಿವಮೊಗ್ಗ ನಗರದಲ್ಲಿ ಯಡಿಯೂರಪ್ಪ ಅವರ ಬೆಂಬಲ ಇಲ್ಲದೆ ಗೆದ್ದು ತೋರಿಸಲಿ ಸಾಕು ಎಂದು ಕುಟುಕಿದರು.

ಸಿದ್ದರಾಮಯ್ಯ ವಿರುದ್ಧ ಸಾಮಾನ್ಯ ಕಾರ‍್ಯಕರ್ತನ ನಿಲ್ಸಿ ಗೆಲ್ಲಿಸುತ್ತೇವೆ: ಕೆ.ಎಸ್‌.ಈಶ್ವರಪ್ಪ

ಈಶ್ವರಪ್ಪ ಅವರಿಗೆ ತಮ್ಮ ಕ್ಷೇತ್ರದ ಬಗ್ಗೆಯೇ ಇನ್ನೂ ಗ್ಯಾರಂಟಿ ಇಲ್ಲ. ಈಗಾಗಲೇ ಟಿಕೆಟ್‌ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಜೊತೆಗೆ ಟಿಕೆಟ್‌ ಸಿಕ್ಕರೂ ಸೋಲುವ ಭಯವಿದೆ. ಅವರು ಬಿ.ಎಸ್‌.ಯಡಿಯೂರಪ್ಪ ಅವರ ನೆರವಿಲ್ಲದೆ ಇಲ್ಲಿ ಗೆಲ್ಲುವುದು ಅಸಾಧ್ಯ. ಆದರೂ ತಾವು ಗೆದ್ದೇ ಗೆಲ್ಲುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮತದಾರರ ಓಲೈಕೆಗೆ ತೀರ್ಥಯಾತ್ರೆ:

ಮತದಾರರನ್ನು ಓಲೈಸಲು ಶಾಸಕ ಕೆ.ಎಸ್‌. ಈಶ್ವರಪ್ಪ ತೀರ್ಥಯಾತ್ರೆಗೆ ಕಳುಹಿಸುತ್ತಿದ್ದಾರೆ. ಯಾವುದೋ ಹಣದಿಂದ ಯಾತ್ರೆಗೆ ಕಳುಹಿಸಿದರೆ ದೇವರು ಮೆಚ್ಚುವುದಿಲ್ಲ. ಭಕ್ತಿಯ ಹೆಸರಲ್ಲಿ ಜನರಿಗೆ ಮೋಸ ಮಾಢುವುದು ಸರಿಯಲ್ಲ. ಈಶ್ವರಪ್ಪ ಅವರನ್ನು ಇದೇ ಮತದಾರರು ಚುನಾವಣೆಯಲ್ಲಿ ಸೋಲಿಸುವ ಮೂಲಕ ತೀರ್ಥಯಾತ್ರೆಗೆ ಹೋಗುವಂತೆ ಮಾಡುತ್ತಾರೆ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಿರಣ್‌ ಫರ್ನಾಂಡಿಸ್‌, ಲಾರೆನ್ಸ್‌ ಡಿಸೋಜಾ, ಹಮೀದ್‌, ಹೆಚ್‌.ಪಿ. ರುದ್ರೇಶ್‌, ಬಾಷಾ ಇದ್ದರು.

\ತುಂಗಾನದಿಗೆ ಮಲಿನ ನೀರು ಸೇರ​ದಂತೆ ಅಗತ್ಯ ಕ್ರಮ: ಕೆ.ಎಸ್‌.ಈಶ್ವರಪ್ಪ

ಚುನಾವಣಾ ಸಮಯ ಬರುತ್ತಿದೆ. ಈಶ್ವರಪ್ಪ ಭಕ್ತಿಯನ್ನು ಮತವನ್ನಾಗಿ ಮಾರ್ಪಡಿಸಲು ಹೊರಟಿದ್ದಾರೆ. ಸಾವಿರಾರು ಮತದಾರರನ್ನು ಓಂ ಶಕ್ತಿಯ ಹೆಸರಿನಲ್ಲಿ ತೀರ್ಥಕ್ಷೇತ್ರಕ್ಕೆ ಕಳುಹಿಸುತ್ತಿದ್ದಾರೆ. ಹೀಗೆ ಕಳುಹಿಸುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ. ಅಕಸ್ಮಾತ್‌ ಕಳಿಸುವುದೇ ಆದರೆ ಶಿವಮೊಗ್ಗದ ಎಲ್ಲಾ ಧರ್ಮದವರ್ನು ಅವರವರ ಧರ್ಮಕ್ಷೇತ್ರಕ್ಕೆ ಯಾತ್ರೆಗೆ ಕಳುಹಿಸಲಿ. ಆಗ ಅವರನ್ನು ಒಪ್ಪಿಕೊಳ್ಳಬಹುದು. ಆದರೆ, ಸ್ವಾರ್ಥದ ಭಕ್ತಿಯನ್ನು ದೇವರು ಮೆಚ್ಚುವುದಿಲ್ಲ

- ವೈ.ಎ​ಸ್‌.​ನಾ​ಗ​ರಾಜ್‌, ಸದಸ್ಯ, ಕೆಪಿ​ಸಿ​ಸಿ

Follow Us:
Download App:
  • android
  • ios