Asianet Suvarna News Asianet Suvarna News

ಕಾಂಗ್ರೆಸಿನವರು ಭ್ರಷ್ಟಾಚಾರದ ಸಾಕ್ಷಿ ತೋರಿಸಲಿ: ಜಾರಕಿಹೊಳಿ ಸವಾಲು

ಕಾಂಗ್ರೆಸ್‌ ಪಕ್ಷ ಮತಗಳಿಗಾಗಿ ಸಮಾಜಗಳ ನಡುವೆ ಜಗಳ ಹಚ್ಚುವ ಮೂಲಕ ನಿಜವಾದ ಕೋಮುವಾದಿ ಪಕ್ಷವಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು ಅದನ್ನು ಸಾಕ್ಷಿ ಸಮೇತ ತೋರಿಸಲಿ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸವಾಲು ಹಾಕಿದರು.

Let Congress show evidence of corruption ramehs Jarakiholi challenge at belgum rav
Author
First Published Apr 28, 2023, 8:19 AM IST

ಗೋಕಾಕ (ಏ.28) : ಕಾಂಗ್ರೆಸ್‌ ಪಕ್ಷ ಮತಗಳಿಗಾಗಿ ಸಮಾಜಗಳ ನಡುವೆ ಜಗಳ ಹಚ್ಚುವ ಮೂಲಕ ನಿಜವಾದ ಕೋಮುವಾದಿ ಪಕ್ಷವಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು ಅದನ್ನು ಸಾಕ್ಷಿ ಸಮೇತ ತೋರಿಸಲಿ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh jarkiholi) ಸವಾಲು ಹಾಕಿದರು.

ಗೋಕಾಕ ಮತಕ್ಷೇತ್ರದ(Gokak assembly consittuency) ಮಮದಾಪುರ ಹಾಗೂ ಮಕ್ಕಳಗೇರಿ ಜಿಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಗುರುವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಾವಿರಾರು ಕೋಟಿ ರುಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಕೇವಲ ಮತಕ್ಕಾಗಿ ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಜನತೆ ಕಿವಿಗೊಡದೇ ಎಲ್ಲ ಸಮಾಜಗಳನ್ನು ಸಂಘಟಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿಗೆ ಮತ ನೀಡಿ ಎಂದು ಕೋರಿದರು.

 

ಕಾಂಗ್ರೆಸ್‌ನ ಸುಳ್ಳು ಭರವಸೆಗಳಿಗೆ ಕಿವಿಗೊಡಬೇಡಿ: ರಮೇಶ ಜಾರಕಿಹೊಳಿ

ಕ್ಷೇತ್ರದ ಜನತೆಯ ಆಶೀರ್ವಾದವೇ ನನ್ನ ಶಕ್ತಿಯಾಗಿದ್ದು, ಈ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ ತಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು. ಕಳೆದ 6 ಬಾರಿ ಆಶೀರ್ವದಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದಿರಿ. ಈ ಬಾರಿಯೂ ಆಶೀರ್ವದಿಸಿ ಇನ್ನೂ ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.

ದೇಶದ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿಯತ್ತ ಇಂದಿನ ಯುವಪೀಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಬಿಜೆಪಿ ಪಕ್ಷವನ್ನೇ ಬೆಂಬಲಿಸಿ ಎಂದರು.

ಮಾಲದಿನ್ನಿ, ಉಪ್ಪಾರಹಟ್ಟಿ, ಮಮದಾಪೂರ, ಮರಡಿಶಿವಾಪುರ, ಅಜ್ಜನಕಟ್ಟಿ, ದುಂಡಾನಟ್ಟಿ, ಪಂಚನಾಯ್ಕನಹಟ್ಟಿ, ಚಿಕ್ಕನಂದಿ, ಹಿರೇನಂದಿ, ಮಕ್ಕಳಗೇರಿ, ಹಿರೇಹಟ್ಟಿ, ಜಮನಾಳ, ಶಿಲ್ತಿಭಾವಿ, ಪುಡಕಲಕಟ್ಟಿ, ಗಿಳಿ ಹೊಸೂರ, ಖನಗಾಂವ, ನಭಾಪೂರ, ದೇವಗೌಡನಹಟ್ಟಿ, ಗುದನಟ್ಟಿಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಎಲ್ಲ ಗ್ರಾಮಗಳಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಜಯಘೋಷ ಹಾಕುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮಾಜಿ ಜಿಪಂ ಸದಸ್ಯರಾದ ಟಿ.ಆರ್‌.ಕಾಗಲ, ಮಡ್ಡೆಪ್ಪ ತೋಳಿನವರ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಕೆಪಿಎಸ್‌ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಗ್ರಾಮಗಳ ಹಿರಿಯರು, ಮುಖಂಡರು ಸೇರಿದಂತೆ ಅನೇಕರು ಇದ್ದರು.

ರಮೇಶ ಪರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಮತಯಾಚನೆ

ಗೋಕಾಕ: ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಬಿಜೆಪಿ ಕಾರ್ಯಕರ್ತರು ಗುರುವಾರ ವಾರ್ಡ್‌ ನಂ.19 ಮತ್ತು 20ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾವಿ, ತಾಹೀರ್‌ ಪೀರಜಾದೆ, ಆನಂದ ಪವಾರ, ಯಲ್ಲಪ್ಪ ಜಾಡರ, ಸುರೇಶ ಕುಮರೇಶಿ, ದೀಪಕ ಗೋರ್ಪಡೆ, ನಿತ್ಯಾನಂದ ಅಮ್ಮಿನಭಾವಿ, ಮಹೇಶ ತಳವಾರ, ಮಾಂತು ತೇಗೂರ, ಕೆಂಪಣ್ಣ, ಪ್ರಶಾಂತ ಹಂಚಿನಮನಿ, ಪ್ರದೀಪ ಹಂಚಿನಮನಿ, ಸಂಜು ಸಾಯನ್ನವರ, ಗಣೇಶ ಮಾಸ್ತಮರಡಿ, ಸುನೀಲ ಮೇಸ್ತ್ರಿ, ಇಮಾದ ಬೆಟಗೇರಿ, ಅಶೋಕ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ಸೊಕ್ಕಿನ ಮನುಷ್ಯ ಸೋಲು ಕಾಣಬೇಕು; ಲಕ್ಷ್ಮಣ ಸವದಿ ವಿರುದ್ಧ ಗುಡುಗಿದ ಸಾಹುಕಾರ

ಅಂಬಿರಾವ ಪಾಟೀಲ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ

ಗೋಕಾಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಇಲ್ಲಿಯ ಕಾಂಗ್ರೆಸ್‌ ಇಂಟೆಕ್‌ ಬ್ಯಾಕ್‌ ಅಧ್ಯಕ್ಷ ಮದರಸಾಹೇಬ್‌ ಕಾಲಿಬಾಯಿ ತಮ್ಮ 40 ಜನ ಕಾರ್ಯಕರ್ತರೊಂದಿಗೆ ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು. ಈ ಸಂದರ್ಭದಲ್ಲಿ ತಾಕೀರ್‌ ಜಮಾದಾರ, ಸಾದೀಕ್‌ ಸನದಿ, ಮಹ್ಮದ ಕಾಲಾ, ಇರ್ಫಾನ್‌ ಕಾಲಿಬಾಯಿ, ಫಯಾಜ ತಳವಾರ, ನವಾಜ್‌, ಅನೀಸ್‌ ಜಮಾದಾರ್‌, ಇಮ್ರಾನ್‌ ಮುಜಾವರ, ಅತ್ತಾವುಲ್ಲ ಹುಕ್ಕೇರಿ, ಸಮೀವುಲ್ಲಾ ಜಮಾದಾರ, ಮಂಜು ಕಣವಾಡ, ಫಾರೂಕ್‌ ಅಂಕಲಗಿ, ಇಮ್ರಾನ್‌ ಅಂಕಲಗಿ, ಮಹ್ಮದ ಜಮಾದಾರ ಸೇರಿದಂತೆ ಅನೇಕರು ಬಿಜೆಪಿ ಪಕ್ಷ ಸೇರಿದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಇದ್ದರು.

Follow Us:
Download App:
  • android
  • ios