ಬಿಜೆಪಿ ಪಕ್ಷ, ನಾಯಕತ್ವಕ್ಕೆ ಯತ್ನಾಳ್ ಬದ್ಧರಾಗಲಿ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ವಿಜಯೇಂದ್ರ ಅವರಿಗಿರುವ ಜನರ ಸದಾಭಿಪ್ರಾಯವನ್ನು ಗಮನಿಸಿಯೇ ಪಕ್ಷದ ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಅದನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅರಿಯಬೇಕು. ಅಲ್ಲದೇ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. 

Let Basanagouda Patil Yatnal commit to the leadership of the BJP party Says MP Renukacharya gvd

ಕೊಟ್ಟೂರು (ಫೆ.16): ವಿಜಯೇಂದ್ರ ಅವರಿಗಿರುವ ಜನರ ಸದಾಭಿಪ್ರಾಯವನ್ನು ಗಮನಿಸಿಯೇ ಪಕ್ಷದ ವರಿಷ್ಠರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಅದನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅರಿಯಬೇಕು. ಅಲ್ಲದೇ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್‌ ಅವರು ಬಿಜೆಪಿಯ ಹಿರಿಯ ನಾಯಕರು. ಅವರು ತಮ್ಮ ಘನತೆಗೆ ತಕ್ಕಂತೆ ಪಕ್ಷದಲ್ಲಿ ಇರಬೇಕು. ಅಲ್ಲದೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಅನಗತ್ಯವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಪದೇ ಪದೇ ಟೀಕಿಸುವುದು ಸರಿಯಲ್ಲ. 

ಇಂಥ ನಡೆ ವರಿಷ್ಠರ ತೀರ್ಮಾನವನ್ನೇ ಟೀಕಿಸಿದಂತಾಗುತ್ತದೆ ಎಂದರು. ಎಲ್ಲರೂ ಒಗ್ಗಟ್ಟಾಗಿ ಇರಬೇಕೆಂಬ ಉದ್ದೇಶದಿಂದ ಯತ್ನಾಳ ಅವರ ವಿರುದ್ಧ ಯಾವುದೇ ಶಿಸ್ತಿನ ಕ್ರಮ ಕೈಗೊಂಡಿಲ್ಲ. ಹಾಗಂತ ವರಿಷ್ಠರು ದುರ್ಬಲರಲ್ಲ ಎಂದು ಸ್ಪಷ್ಟಪಡಿಸಿದರು. ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿ. ಇತರ ಮೂರ್ನಾಲ್ಕು ನಾಯಕರು ಆಕಾಂಕ್ಷಿಗಳಾಗಿದ್ದಾರೆ. ವರಿಷ್ಠರು ಯಾರಿಗೆ ಟಿಕೆಟ್‌ ನೀಡುತ್ತಾರೋ ಅದನ್ನು ಮನ್ನಿಸಿ ಪಕ್ಷದ ಪರ ಚುನಾವಣಾ ಪ್ರಚಾರ ಕೈಗೊಳ್ಳುತ್ತೇವೆ ಎಂದರು.

ಮೈಸೂರು ಲ್ಯಾಂಪ್ಸ್ ಖಾಸಗಿಯವರ ಪಾಲಾಗಲು ಬಿಡುವುದಿಲ್ಲ: ಸಚಿವ ಎಂ.ಬಿ.ಪಾಟೀಲ್‌

ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ: ದೇಶದ ಅಭಿವೃದ್ಧಿ ಹಾಗೂ ವಿಶ್ವಗುರು ಪಟ್ಟ ಸಿಗುವ ಸುಸಂದರ್ಭದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ದೇಶವಾಸಿಗಳ ಅಭಿಪ್ರಾಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಿ ಮಾತನಾಡಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣ ಮಾಡಿದ್ದಕ್ಕೆ ದೇಶ ಹಾಗೂ ವಿದೇಶಗಳಲ್ಲಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣದಿಂದ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿದವರಿಗೆ ಈಗ ಉತ್ತರ ಸಿಕ್ಕುತ್ತಿದೆ. 

ಉತ್ತರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ₹ 20 ಸಾವಿರ ಕೋಟಿ ಶ್ರೀರಾಮ ಮಂದಿರದಿಂದಲೇ ಬರಲಿದೆ ಎಂದು ಎಸ್‍ಬಿಐಯ ಸಮೀಕ್ಷೆಯಿಂದ ತಿಳಿದು ಬಂದಿದೆ. ಅಯೋಧ್ಯೆ ಶ್ರೀರಾಮ ಮಂದಿರವನ್ನು ಸುಪ್ರೀಂ ಕೋರ್ಟಿನ ತೀರ್ಪು ಬಂದ ಬಳಿಕ ಕಟ್ಟಿದ್ದೇವೆ, ಬಿಜೆಪಿ ಸಂವಿಧಾನಕ್ಕೆ ಗೌರವ ಕೊಡುವ ಪಕ್ಷ ಎಂದರು. 500 ವರ್ಷಗಳ ಸತತ ಹೋರಾಟದಲ್ಲಿ ಮೃತಪಟ್ಟಿದ್ದ ಲಕ್ಷಾಂತರ ಹಿಂದೂಗಳು ಹಾಗೂ ಕರಸೇವಕರಾಗಿ ಹೋಗಿದ್ದ ಹಲವು ಕರ ಸೇವಕರು ತಮ್ಮ ಪ್ರಾಣ ಕಳೆದುಕೊಂಡರು ಅಂತಹ ಎಲ್ಲರಿಗೂ ಆತ್ಮಶಾಂತಿ ಸಿಕ್ಕಿದೆ ಎಂದರು. ಒಂದು ಕಾಲಕ್ಕೆ ಭಾರತವೆಂದರೆ ಮೂಗು ಮುರಿಯುತ್ತಿದ್ದ ವಿದೇಶಿಗರು ಇಂದು ಅದೇ ರಾಷ್ಟ್ರಗಳು ಭಾರತ ಎಂದರೆ ಸಾಕು ನಮಸ್ಕಾರ ಮಾಡುವ ರೂಢಿ ಬೆಳೆಸಿಕೊಂಡಿದ್ದಾರೆ. 

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್‌ಡಿಕೆ ಸ್ಪರ್ಧೆ ಮಾಡಲ್ವಾ?: ಶಾಸಕ ಬಾಲಕೃಷ್ಣ

ಅಂತಹ ತಾಕತ್ತು ಮೋದಿ ಪ್ರಧಾನಿಯಾದ ಬಳಿಕ ಸಾಧ್ಯವಾಯಿತು, ಇಂತಹ ಪ್ರಧಾನಿ ಕಳೆದುಕೊಳ್ಳಲು ಯಾರೂ ಇಷ್ಟಪಡಲ್ಲ ಎಂದರು. ಬಿಜೆಪಿ ಚುನಾವಣೆಯ ಪ್ರಣಾಳಿಕೆಯಲ್ಲಿದ್ದ ಶ್ರೀ ರಾಮಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು, ತ್ರಿವಳಿ ತಲಾಖ್‌ ರದ್ದು ,ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಇತರ ಯೋಜನೆಗಳ ಪ್ರಣಾಳಿಕೆಯಂತೆ ಈಡೇರಿಸಿದ್ದೇವೆ. ಮೋದಿ ಪ್ರಧಾನಿಯಾದ ಬಳಿಕ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಪ್ರಗತಿ 5ನೇ ಸ್ಥಾನಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೇರಲಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios