ಅಭಿಮಾನ, ಶಿಳ್ಳೆ ಮತವಾಗಿ ಪರಿವರ್ತನೆಯಾಗಲಿ; ಸಿದ್ದರಾಮಯ್ಯ

  • ಅಭಿಮಾನ, ಶಿಳ್ಳೆ ಮತವಾಗಿ ಪರಿವರ್ತನೆಯಾಗಲಿ
  • ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ 68ನೇ ಹುಟ್ಟುಹಬ್ಬ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕರೆ
Let admiration and applause be converted into votes says siddaramaiah rav

ಹೊಸದುರ್ಗ (ಅ.21) : ಕಾರ್ಯಕರ್ತರ ಅಭಿಮಾನ ಕೇವಲ ಕೇಕೇ, ಶಿಳ್ಳೆಗಳಿಗೆ ಸೀಮಿತವಾಗಬಾರದು. 2023ರ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

40% ಕಮಿಷನ್ ಹೊಡೆಯುವುದರಲ್ಲಿ ಬಿಜೆಪಿ ಸರ್ಕಾರ ಮುಳುಗಿದೆ: ಸಿದ್ದರಾಮಯ್ಯ

ಪಟ್ಟಣದ ಕಾಂಗ್ರೆಸ್‌ ಕಾರ್ಯಕರ್ತರು ಆಯೋಜಿಸಿದ್ದ ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ ಅವರ 68 ನೇ ಹುಟ್ಟುಹಬ್ಬ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸುದೀರ್ಘವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಬಿ.ಜಿ. ಗೋವಿಂದಪ್ಪ ನಾನು ಕಂಡ ಕೆಲವೇ ಕೆಲವು ಸರಳ ಸಜ್ಜನಿಕೆಯ ರಾಜಕಾರಣಿಗಳಲ್ಲೊಬ್ಬರು. 2013ರಿಂದ 2018ರವರೆಗೆ ಶಾಸಕರಾಗಿದ್ದ ಗೋವಿಂದಪ್ಪ ಎಂದೂ ನನ್ನನ್ನು ಸಚಿವನ್ನಾಗಿ ಮಾಡಿ ಎಂದು ಕೇಳಲಿಲ್ಲ. ತಾಲೂಕಿಗೆ ಸಾಕಷ್ಟುಅನುದಾನ ತಂದಿದ್ದಾರೆ ಎಂದರು. ನೀರು ಕೊಟ್ಟಗೋವಿಂದಪ್ಪನವರಿಗೆ ಆಧುನಿಕ ಭಗೀರಥ ಎನ್ನುತ್ತಾರೆ. ಆದರೆ ಅದಕ್ಕೆ ಅನುದಾನ ಕೊಟ್ಟನನ್ನನ್ನು ಭಗೀರಥ ಎನ್ನಲ್ಲ ಎಂದು ಹಾಸ್ಯ ಮಾಡಿದ ಸಿದ್ದರಾಮಯ್ಯ ಅಭಿಮಾನಕ್ಕೆ ಅಂಕುಶವಿರಬೇಕು. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಶಿಸ್ತು ಮುಖ್ಯ ಎಂದರು

ತಾಕತ್ತಿದ್ದರೆ ತನಿಖೆ ಮಾಡಿಸಿ:

ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅದನ್ನು ಪ್ರಶ್ನಿಸಿದರೆ ನಿಮ್ಮ ಸರ್ಕಾರದ ಭ್ರಷ್ಟಾಚಾರ ತನಿಖೆ ಮಾಡಿಸುತ್ತೇನೆ ಎನ್ನುತ್ತಾರೆ. ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ 2013ರಿಂದ ಇಲ್ಲಿಯವರೆಗೂ ನಡೆದ ಭ್ರಷ್ಟಾಚಾರದ ಕುರಿತು ತನಿಖೆ ಮಾಡಿಸಿ ಎಂದು ಓಪನ್‌ ಚಾಲೆಂಜ್‌ ಮಾಡುತ್ತೇನೆ. ಆದರೆ ಅವರಿಗೆ ತನಿಖೆ ಮಾಡಿಸಲು ದಮ್ಮು ಇಲ್ಲ, ಧೈರ್ಯನೂ ಇಲ್ಲ ಎಂದು ಲೇವಡಿ ಮಾಡಿದರು.

ಸಂಕಲ್ಪ ಯಾತ್ರೆ ಯಾತಕ್ಕಾಗಿ:

ಚುನಾವಣೆ ಹತ್ತಿರವಾಗುತ್ತಿರುವಾಗ ಸಂಕಲ್ಪಯಾತ್ರೆ ಮಾಡಲು ಹೊರಟಿದ್ದಾರೆ. ಯಾತಕ್ಕಾಗಿ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ? ಮನೆಕೊಟ್ಟಿಲ್ಲ ಅಂತ ಸಂಕಲ್ಪನಾ, ರಸ್ತೆ ಗುಂಡಿ ಮುಚ್ಚಿಲ್ಲಾ ಅಂತಾ ಸಂಕಲ್ಪನಾ, ನೀರಾವರಿ ಯೋಜನೆ ಮಾಡಿಲ್ಲ ಅಂತಾ ಸಂಕಲ್ಪನಾ ಎಂದು ಲೇವಡಿ ಮಾಡಿದ ಅವರು, ಈ ಸರ್ಕಾರ ಏನೂ ಮಾಡಿಲ್ಲ. ಬರೀ ಲೂಟಿ ಹೊಡೆಯುವ ಕೆಲಸ ಮಾಡಿದೆ. ಇದು ನಾನು ಹೇಳಿದ್ದಲ್ಲ ಕಂಟ್ರ್ಯಾಕ್ಟರ್‌ ಅಸೋಸಿಯಷನ್‌ನವರು ಮಾಡಿದ ಆರೋಪ ಎಂದರು.

ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದ್ರೆ ಆರ್‌ಎಸ್‌ಎಸ್‌ ನಾಯಕರ ಪಾದ ಪೂಜೆ ಮಾಡಲೇಬೇಕು: ಸಿಎಂಗೆ ಸಿದ್ದು ಗುದ್ದು

ಒಂದು ಮನೆ ಕೊಟ್ಟಿಲ್ಲ:

ಕಳೆದ 4 ವರ್ಷದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ ಒಂದು ಮನೆಯನ್ನು ಕೊಟ್ಟಿಲ್ಲ. ಇವರು ಜನರಿಗೆ ದ್ರೋಹ ಬಗೆದಿದ್ದಾರೆ. ನಾನು ನನ್ನ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನೀಡಿದ್ದೇನೆ. ನಾವು ನೀಡಿದ ಮನೆಗಳಿಗೆ ಅನುದಾನ ಕೋಡಲು ಇವರಿಗೆ ಯೋಗ್ಯತೆ ಇಲ್ಲ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ವಿಧಾನಸಭೆಯಲ್ಲಿ ಒಳ್ಳೆ ಜನ ಇರಬೇಕು. ಗೋವಿಂದಪ್ಪ ಬಳಿ ಹಣವಿಲ್ಲ ಕೆಲಸ ಮಾಡುವ ಗುಣವಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಜಾತಿ ಪಂಥ ನೋಡದೆ ಗೋವಿಂದಪ್ಪನÜನ್ನು ಗೆಲ್ಲಿಸಿಕೊಡಬೇಕು ಎಂದರು.

Latest Videos
Follow Us:
Download App:
  • android
  • ios