ಕರ್ನಾಟಕದಲ್ಲಿನ ತಾಲಿಬಾನ್ ಸರ್ಕಾರ ಬಗ್ಗು ಬಡಿತೇವೆ: ಅಶೋಕ್ ವಾಗ್ದಾಳಿ
ಇಡೀ ಕರ್ನಾಟಕವನ್ನು ಕಾಂಗ್ರೆಸ್ ಅವರು ತಾಲಿಬಾನ್ ಮಾಡೋಕೆ ಹೊರಟಿದ್ದಾರೆ. ಈ ತಾಲಿಬಾನ್ ಸರ್ಕಾರವನ್ನು ಬಗ್ಗು ಬಡಿತೇವೆ, ಇನ್ನು ಮುಗಿತು ಅವರ ಕತೆ. ಕರ್ನಾಟಕ ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್
ಮಂಗಳೂರು(ಜೂ.12): ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಕೋಮ ಸೌಹಾರ್ದತೆ ಹಾಳು ಮಾಡ್ತಿದೆ. ತಾಲಿಬಾನ್ ಸರ್ಕಾರದ ರೀತಿ ನಡೆದುಕೊಳ್ತಿದೆ. ಕರ್ನಾಟಕದಲ್ಲಿ ಇರೋದು ಮುಸಲ್ಮಾನರ ಸರ್ಕಾರ ಎಂದು ಡಿಕೆಶಿ ಹೇಳಿದ್ದಾರೆ. ಇದು ಈಗ ನಿಜ ಆಗ್ತಿದೆ, ಮಂಗಳೂರಿನಲ್ಲಿ ಗಲಾಟೆ ಆಗಿದೆ. ಇಡೀ ಕರ್ನಾಟಕವನ್ನು ಕಾಂಗ್ರೆಸ್ ಅವರು ತಾಲಿಬಾನ್ ಮಾಡೋಕೆ ಹೊರಟಿದ್ದಾರೆ. ಈ ತಾಲಿಬಾನ್ ಸರ್ಕಾರವನ್ನು ಬಗ್ಗು ಬಡಿತೇವೆ, ಇನ್ನು ಮುಗಿತು ಅವರ ಕತೆ. ಕರ್ನಾಟಕ ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ನಾಳೆ ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಒಟ್ಟಿಗೆ ಸೇರುತ್ತೇವೆ. ವಿಧಾನಸಭೆಯಲ್ಲಿಯೂ ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಸ್ಪೀಕರ್ ಕ್ಷೇತ್ರದಲ್ಲೇ ಈ ಘಟನೆ ಆಗಿದೆ. ಪಾಕಿಸ್ತಾನದ ಕುನ್ನಿಗಳು ಎಂದು ಘೋಷಣೆ ಕೂಗಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ. ಕಮೀಷನರ್‌ಗೆ ಎರಡು ಗಂಟೆಗೆ ಬರೋದಕ್ಕೆ ಹೇಳಿದ್ದೇನೆ, ಅವರ ಬಳಿ ದಾಖಲೆಗಳನ್ನು ಕೇಳ್ತೆನೆ ಎಂದು ಹೇಳಿದ್ದಾರೆ.
ಅಶೋಕ್ ‘ಗ್ಯಾರಂಟಿ’ ಏಟಿಗೆ ಸಿದ್ದರಾಮಯ್ಯ ಎದಿರೇಟು: ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ!
ಹಾಗೆ ಅಂದ್ರೆ ನಿಮಗ್ಯಾಕೆ ಸಿಟ್ಟು, ಆ ರೀತಿ ಯಾವುದೇ ಘೋಷಣೆ ಹೇಳಿಲ್ಲ. ಆ ರೀತಿಯ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ. ಯಾರದ್ದೋ ಒತ್ತಡಕ್ಕೆ ಆ ರೀತಿ ಹೇಳಬೇಡಿ, ಸುಮ್ ಸುಮ್ಮನೆ ಕೇಸ್ ಹಾಕಿದ್ದೀರಿ. ಹಾಕಿರುವ ಕೇಸ್ ವಾಪಾಸು ಪಡೆಯಬೇಕು. ಒಂದೇ ವರ್ಷದಲ್ಲಿ 40% ಕ್ರೈಂ ರೇಟ್ ಜಾಸ್ತಿಯಾಗಿದೆ. ಕಾಂಗ್ರೆಸ್ ಬಂದ್ರೆ ಗೂಂಡಾಗಳಿಗೆ ಹಬ್ಬ ಎಂಬತಾಗಿದೆ. ಕಾಂಗ್ರೆಸ್ ನಲ್ಲಿ ಕೆಲವರು ರೌಡಿಸಂ ಮಾಡಿಯೇ ಬಂದಿರೋರು ಇದ್ದಾರೆ. ಇವರಿಗೆ ರೌಡಿಗಳ ಜೊತೆ ಹಳೇ ನಂಟಿದೆ ಎಂದು ದೂರಿದ್ದಾರೆ.
ನಿಮ್ಮ ಗ್ಯಾರಂಟಿಗಳು ಏನಾಯ್ತು, ನಿಮ್ಮ ಶಾಸಕರೇ ಹಾದಿ ಬೀದಿಲಿ ಉಗುಳುತ್ತಾ ಇದ್ದಾರೆ. ನಾಳೆ ಸಭೆ ಸೇರುತ್ತಿದ್ದೇವೆ. ಇದಕ್ಕೆ ಯಾವ ರೀತಿ ಹೋರಾಟ ಎಂಬ ತೀರ್ಮಾನ ಮಾಡುತ್ತೇವೆ. ನಮ್ಮ ಕಾರ್ಯಕರ್ತರ ಪರವಾಗಿ ಬಿಜೆಪಿ ನಿಲ್ಲುತ್ತದೆ. ಗಾಯಾಳುಗಳ ಪೂರ್ತಿ ಆಸ್ಪತ್ರೆ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.
ನಟ ದರ್ಶನ್ ಗ್ಯಾಂಗ್‌ನಿಂದ ಕೊಲೆ ಪ್ರಕರಣ
ನಟ ದರ್ಶನ್ ಗ್ಯಾಂಗ್‌ನಿಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅದರಲ್ಲಿ ದರ್ಶನ್ ಪ್ರಕರಣವೂ ಒಂದು ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.