Asianet Suvarna News Asianet Suvarna News

ಮೋದಿ ಒಬ್ಬ ಸುಳ್ಳಿನ ಸರದಾರ: ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

*  ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗೆ ಮೋದಿ ಒಂದೇ ಒಂದು ದಿನವೂ ತಯಾರಿಲ್ಲ
*  ಬರೀ ಸುಳ್ಳು ಹೇಳಿ ಜನರನ್ನ ಮರಳು ಮಾಡುವುದರಲ್ಲಿ ಮಾತ್ರ ಮೋದಿ ನಿಸ್ಸೀಮರು
*  ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡಲು ಹೊರಟಿರುವ ಮೋದಿ 
 

Leader of Opposition Rajya Sabha Mallikarjun Kharge Slams on PM Narendra Modi grg
Author
Bengaluru, First Published Oct 3, 2021, 1:46 PM IST

ಕಲಬುರಗಿ(ಅ.03):  ಪ್ರಧಾನಿ ನರೇಂದ್ರ ಮೋದಿ(Narendra Modi) ಒಬ್ಬ ಸುಳ್ಳಿನ ಸರದಾರನಾಗಿದ್ದಾರೆ. ಪೆಟ್ರೋಲ್, ಡೀಸಲ್, ಗ್ಯಾಸ್ ದರ ಮಿತಿ ಮೀರಿದೆ. ಹಿಂದೆ ನಮ್ಮ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ರಿಂದ 130 ಡಾಲರ್‌ಗೆ ಹೋಗಿತ್ತು. ಆಗ ನಾವು ಲೀಟರ್‌ ಪೆಟ್ರೋಲ್ 60 ರಿಂದ 70 ರೂ. ಗೆ ಕೊಟ್ಟಿದ್ವಿ, ಈಗ ಕಚ್ಚಾ ತೈಲ ಬೆಲೆ ಲೀಟರ್‌ಗೆ 50 ರೂ. ಆಸುಪಾಸಿನಲ್ಲಿದೆ. ಆದ್ರೆ ಪೆಟ್ರೋಲ್(Petrol) ದರ ನೂರು ರೂಪಾಯಿ ದಾಟಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ(Mallikarjun Kharge) ನಡೆಸಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ(Loksabha) ಚರ್ಚೆಗೆ ಪ್ರಧಾನಿ ಮೋದಿ ಒಂದೇ ಒಂದು ದಿನವೂ ತಯಾರಿಲ್ಲ. ಬರೀ ಸುಳ್ಳು ಹೇಳಿ ಜನರನ್ನ ಮರಳು ಮಾಡುವುದರಲ್ಲಿ ಮಾತ್ರ ಮೋದಿ ನಿಸ್ಸೀಮರಾಗಿದ್ದಾರೆ ಎಂದು ಪ್ರಧಾನಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ. 

ವ್ಯಾಕ್ಸಿನ್ ಜನ ತಗೊಂಡ್ರೆ ದುಷ್ಪರಿಣಾಮ ವಿಪಕ್ಷಗಳಿಗೆ ಆಗಿದೆ ಎನ್ನುವ ಮೋದಿ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದ ಖರ್ಗ ಅವರು, ಮೋದಿ ಅವರದ್ದು ಚಿಲ್ಲರೇ ಮಾತು, ಅಂತಹ ಚಿಲ್ಲರೆ ಮಾತುಗಳಿಗೆ ಜಾಸ್ತಿ ಮಹತ್ವ ಕೊಡಬೇಡಿ. ಅವರು ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಅಡ್ವಾಣಿ ಅವರಂತ ಹಿರಿಯರು ಎದುರು ಬಂದ್ರೂ ನೋಡದೇ ಹೋಗುವ ಗುಣ ಮೋದಿ ಅವರದ್ದಾಗಿ ಅಂತ ಹೇಳಿದ್ದಾರೆ. 

ಇವರ ಕುತಂತ್ರದಿಂದ ಚುನಾವಣೆಯಲ್ಲಿ ಸೋತೆ : 2.4 ವರ್ಷ ಬಳಿಕ ಕಲಬುರಗಿಗೆ ಬಂದ ಖರ್ಗೆ

ಲೋಕಸಭೆ ಚುನಾವಣೆ (Loksabha Election) ಸೋಲಿನ ಬಳಿಕ ಕಲಬುರಗಿ ತೊರೆದಿದ್ದ ಮಲ್ಲಿಕಾರ್ಜುನ ಖರ್ಗೆ (Dr.Mallikarjun Kharge) ಬರೋಬ್ಬರಿ 2 ವರ್ಷ 4 ತಿಂಗಳ ನಂತರ ನಿನ್ನೆ(ಶನಿವಾರ) ತವರೂರಿಗೆ ಆಗಮಿಸಿದ್ದರು. ಖರ್ಗೆಯವರಿಗೆ ನಗರದ ಭವಾನಿ ಫಂಕ್ಷನ್‌ ಹಾಲ್‌ನಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಅದ್ದೂರಿ ಸ್ವಾಗತ ನೀಡಿದ್ದರು. 

ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಜನರ ಬಳಿಯೇ ಇದ್ದು ಐದು ದಶಕಗಳ ಕಾಲ ಜನ ಸೇವೆ ಮಾಡಿಕೊಂಡಿದ್ದವನು ನಾನು. ಜನರಿಂದ ದೂರವಿದ್ದು ಜೀವನ ನಡೆಸುವುದು ಅಸಾಧ್ಯ. ಆದರೆ, ಕೋವಿಡ್‌ನಿಂದಾಗಿ (Covid) ಕಲಬುರಗಿಗೆ ಬರಲಾಗಲಿಲ್ಲ. ಸತತ 11 ಬಾರಿ ಚುನಾವಣೆ ಗೆದ್ದ ನನಗೆ 12ನೇ ಚುನಾವಣೆಯಲ್ಲಿ ಸೋಲಾಯ್ತು, ಈ ಸೋಲಿಗೆ ಕಲಬುರಗಿ (Kalaburagi) ಜನ ಕಾರಣರಲ್ಲ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌ ಕುತಂತ್ರ ಕಾರಣ ಎಂದು ಕಿಡಿ ಕಾರಿದ್ದರು. 
 

Follow Us:
Download App:
  • android
  • ios